Blood Pressure: ಕಡಿಮೆ ರಕ್ತದೊತ್ತಡದ ಸಮಸ್ಯೆಯೇ? ಹಾಗಿದ್ರೆ ಈ ಆಹಾರಗಳನ್ನು ಸೇವಿಸಿ

ಅಧಿಕ ರಕ್ತದೊತ್ತಡದ ಬಗ್ಗೆ ಹೆಚ್ಚು ಜನರಿಗೆ ಮಾಹಿತಿ ಇದೆ. ಅದರ ಲಕ್ಷಣಗಳು ಮತ್ತು ಪರಿಣಾಮಗಳ ಬಗ್ಗೆ ತಿಳಿದುಕೊಂಡಿದ್ದಾರೆ. ಆದರೆ ಹೈಪೊಟೆನ್ಷನ್ ಎಂದು ಕರೆಯಲ್ಪಡುವ ಕಡಿಮೆ ರಕ್ತದೊತ್ತಡದ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಅದರ ಬಗ್ಗೆ ನೆಗ್ಲೆಕ್ಟ್ ಮಾಡುವವರು ಹೆಚ್ಚು ಎನ್ನಬಹುದು. ಹೆಚ್ಚಿನ ಜನರಿಗೆ ಕಡಿಮೆ ರಕ್ತದೊತ್ತಡ ಎನ್ನುವ ಸಮಸ್ಯೆ ಇದೆ ಎಂದು ತಿಳಿದಿರುವುದಿಲ್ಲ. ಇದು ವೈದ್ಯಕೀಯ ಸಮಸ್ಯೆಯಾಗಿದ್ದು ಇದರಲ್ಲಿ ವ್ಯಕ್ತಿಯ ರಕ್ತದೊತ್ತಡವು ಅತ್ಯಂತ ಕಡಿಮೆ ಮಟ್ಟವನ್ನು ತಲುಪುತ್ತದೆ. ಕಡಿಮೆ ರಕ್ತದೊತ್ತಡವು ತಲೆತಿರುಗುವಿಕೆ, ಮೂರ್ಛೆ, ವಾಕರಿಕೆ, ಆಯಾಸ, ಉಸಿರಾಟದ ತೊಂದರೆ ಮತ್ತು ದೃಷ್ಟಿ ಮಂದವಾಗುವಂತಹ ಅನೇಕ ರೋಗಲಕ್ಷಣಗಳನ್ನು ಹೊಂದಿದ್ದು, ಈ ರೀತಿ ಆದಾಗ ಕೆಲ ಆಹಾರಗಳನ್ನು ಸೇವನೆ ಮಾಡುವುದು ಸಹಾಯ ಮಾಡುತ್ತದೆ. ಯಾವುವು ಆಹಾರಗಳು ಎಂಬುದು ಇಲ್ಲಿದೆ.

First published: