Weight Loss: ತೂಕ ಇಳಿಸಲು ಬಯಸುವವರು ಈ 5 ತಪ್ಪುಗಳನ್ನು ಮಾಡಲೇಬೇಡಿ
ತೂಕ ಇಳಿಸಲು (Weight Loss) ಅನೇಕರು ಜಿಮ್, ಡಯೆಟ್, ವರ್ಕೌಟ್ ಮಾಡ್ತಾರೆ. ಆದ್ರೆ ತೂಕ ಮಾತ್ರ ಕಡಿಮೆಯಾಗಲ್ಲ ಯಾಕೆ ಗೊತ್ತಾ? ನಾವು ಮಾಡೋ ಕೆಲವು ತಪ್ಪುಗಳು ಆರೋಗ್ಯಕ್ಕೆ (Health) ಹಾನಿಯುಂಟಾಗುತ್ತದೆ. ತೂಕ ಇಳಿಸುವ ಪ್ರಕ್ರಿಯೆಯಲ್ಲಿ ನಾವು ಏನು ಮಾಡಬಾರದು ಎಂಬುದರ ಬಗ್ಗೆ ತಿಳಿದುಕೊಳ್ಳುವುದು ಬಹುಮುಖ್ಯ.
ದೀರ್ಘಕಾಲದವರೆಗೆ ಹಸಿದಿದ್ದಲ್ಲಿ ತೂಕವನ್ನು ಕಳೆದುಕೊಳ್ಳಬಹುದು ಎಂದು ಹಲವರು ಭಾವಿಸಿರುತ್ತಾರೆ. ಆದರೆ, ಇದು ಬಹುತೇಕರು ಮಾಡುವ ದೊಡ್ಡ ತಪ್ಪು. ಏಕೆಂದರೆ ಹೀಗೆ ಮಾಡುವುದರಿಂದ ಚಯಾಪಚಯ ಪ್ರಕ್ರಿಯೆ ಕಡಿಮೆಯಾಗುತ್ತದೆ.
2/ 8
ಇದರಿಂದ ತೂಕ ನಷ್ಟವಾಗುವ ಬದಲು ದೇಹವು ದುರ್ಬಲವಾಗಬಹುದು. ಹೀಗಾಗಿ ದೀರ್ಘಕಾಲ ಹಸಿವಿನಿಂದ ಇರುವುದು ಒಳ್ಳೆಯದಲ್ಲ.
3/ 8
ಡಯಟಿಂಗ್ ಹೆಸರಿನಲ್ಲಿ ಅನೇಕರು ಬೆಳಗಿನ ಉಪಾಹಾರವನ್ನು ಬಿಟ್ಟುಬಿಡುತ್ತಾರೆ. ಇದು ಆರೋಗ್ಯದ ವಿಷಯದಲ್ಲಿ ಮಾಡುವ ದೊಡ್ಡ ತಪ್ಪು. ಬೆಳಗಿನ ಉಪಾಹಾರವು ದಿನದ ಪ್ರಮುಖ ಊಟವೆಂದು ಆರೋಗ್ಯ ತಜ್ಞರು ಒಪ್ಪುತ್ತಾರೆ. ಬೆಳಗಿನ ಉಪಾಹಾರ ಸೇವಿಸಿದರೆ ದಿನವಿಡೀ ಶಕ್ತಿ ನಿಮ್ಮಲ್ಲಿ ಹಾಗೆಯೇ ಉಳಿಯುತ್ತದೆ.
4/ 8
ತೂಕವನ್ನು ಕಳೆದುಕೊಳ್ಳುವ ಪ್ರಯತ್ನದಲ್ಲಿ ಅನೇಕರು ಪ್ರೋಟೀನ್-ಭರಿತ ಆಹಾರ ಸೇವಿಸುವುದನ್ನು ಮರೆತುಬಿಡುತ್ತಾರೆ. ಈ ರೀತಿ ಮಾಡುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ.
5/ 8
ಏಕೆಂದರೆ ಈ ಪೋಷಕಾಂಶವು ನಮ್ಮ ಸ್ನಾಯುಗಳ ಬೆಳವಣಿಗೆಗೆ ಬಹಳ ಮುಖ್ಯವಾಗಿದೆ. ಸಿರಿಧಾನ್ಯ, ಸೋಯಾಬೀನ್ ಮತ್ತು ಮೊಟ್ಟೆಯ ಬಿಳಿಭಾಗಗಳಲ್ಲಿ ಉತ್ತಮ ಪ್ರಮಾಣದ ಪ್ರೋಟೀನ್ ಕಂಡುಬರುತ್ತದೆ
6/ 8
ಮಾರುಕಟ್ಟೆಯಲ್ಲಿ ಕಂಡುಬರುವ ಅನೇಕ ಸಂರಕ್ಷಿತ ಆಹಾರ ಪದಾರ್ಥಗಳು ಆರೋಗ್ಯಕರವೆಂದು ಹೇಳಲಾಗುತ್ತದೆ. ಆದರೆ, ಹೆಚ್ಚಿನ ಪ್ರಮಾಣದಲ್ಲಿ ಸಂರಕ್ಷಕಗಳು ಮತ್ತು ಸಕ್ಕರೆಯನ್ನು ಹೊಂದಿರಬಹುದು.
7/ 8
ಇಂತಹ ‘ಡಯಟ್ ಆಹಾರಗಳು’ ಆರೋಗ್ಯವನ್ನು ಹಾಳುಮಾಡುತ್ತವೆ. ಹೀಗಾಗಿ ನೀವು ತಾಜಾ ಆಹಾರವನ್ನು ಮಾತ್ರ ಸೇವಿಸುವುದು ಉತ್ತಮ.
8/ 8
ನಾವು ಬೆಳಗಿನ ನಡಿಗೆಯಲ್ಲಿ ಹೆಚ್ಚು ಸಮಯ ಕಳೆಯುತ್ತೇವೆ. ಆದರೆ, ರಾತ್ರಿಯ ಊಟದ ನಂತರ ವಾಕ್ ಮಾಡಲು ಸಮಯ ತೆಗೆದುಕೊಳ್ಳುವುದು ಮುಖ್ಯ. ತಜ್ಞರ ಪ್ರಕಾರ ರಾತ್ರಿ 15 ನಿಮಿಷಗಳ ನಡಿಗೆ ಆರೋಗ್ಯಕ್ಕೆ ಒಳ್ಳೆಯದು. ಇದು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.