Weight Loss Tips: ಸಣ್ಣ ಆಗ್ಬೇಕು ಅಂತ ಪರದಾಡ್ತಿದ್ರೆ ಇಲ್ಲಿದೆ ನೋಡಿ ಸೂಪರ್ ಟಿಪ್ಸ್​

How To Lose Weight?: ಹೆಚ್ಚು ಹೆಚ್ಚು ಜನರು ಆರೋಗ್ಯದ(Health) ಬಗ್ಗೆ ಕಾಳಜಿ ವಹಿಸುತ್ತಿರುವುದರಿಂದ, ತೂಕ ಇಳಿಸುವುದು(Weight Loss) ಪ್ರತಿಯೊಬ್ಬರ ಮನಸ್ಸಿನಲ್ಲಿದೆ. ಇತ್ತೀಚಿನ ದಿನಗಳಲ್ಲಿ, ನಾವು ವೈವಿಧ್ಯಮಯ ಆಹಾರದ ಜಗತ್ತಿನಲ್ಲಿ ವಾಸಿಸುತ್ತಿದ್ದೇವೆ. ಈ ಆಹಾರಗಳು ತೂಕವನ್ನು ಹೆಚ್ಚಿಸಿಕೊಳ್ಳಲು ಮತ್ತು ತೂಕವನ್ನು ಇಳಿಸಿಕೊಳ್ಳಲು ಈ ಎರಡಕ್ಕೂ ಹೆಸರುವಾಸಿಯಾಗಿದೆ. ಈಗಾಗಳೆ ತೂಕ ಇಳಿಸುವ ಪ್ರಕ್ರಿಯೆಯಲ್ಲಿರುವವರು ಹಲವಾರು ವಿಧಾನಗಳನ್ನು ಪ್ರಯತ್ನಿಸುತ್ತಾರೆ. ಆದರೆ ಕೆಲವೊಮ್ಮೆ ಹೆಚ್ಚಿನ ಆಯ್ಕೆಗಳು ಗೊಂದಲವನ್ನು ಮೂಡಿಸುತ್ತದೆ. ಆದರೆ ಅದಕ್ಕೆ ಪರಿಹಾರ ಇಲ್ಲಿದೆ.

First published:

  • 18

    Weight Loss Tips: ಸಣ್ಣ ಆಗ್ಬೇಕು ಅಂತ ಪರದಾಡ್ತಿದ್ರೆ ಇಲ್ಲಿದೆ ನೋಡಿ ಸೂಪರ್ ಟಿಪ್ಸ್​

    ದಿನದಲ್ಲಿ ನಿಯಮಿತ ಸಮಯದಲ್ಲಿ ತಿನ್ನುವುದು ಕ್ಯಾಲೊರಿಗಳನ್ನು ವೇಗವಾಗಿ ಸುಡಲು ಸಹಾಯ ಮಾಡುತ್ತದೆ. ಇದು ಕೊಬ್ಬು ಮತ್ತು ಸಕ್ಕರೆಯಲ್ಲಿ ಹೆಚ್ಚಿನ ಆಹಾರಗಳ ಸೇವನೆಯನ್ನು ಕಡಿಮೆ ಮಾಡುತ್ತದೆ. ಇದರಿಂದ ತೂಕ ಇಳಿಸಬಹುದು.

    MORE
    GALLERIES

  • 28

    Weight Loss Tips: ಸಣ್ಣ ಆಗ್ಬೇಕು ಅಂತ ಪರದಾಡ್ತಿದ್ರೆ ಇಲ್ಲಿದೆ ನೋಡಿ ಸೂಪರ್ ಟಿಪ್ಸ್​

    ಬೆಳಗಿನ ತಿಂಡಿಯನ್ನು ಬಿಡುವುದು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುವುದಿಲ್ಲ. ನೀವು ಅಗತ್ಯವಾದ ಪೋಷಕಾಂಶಗಳನ್ನು ಕಳೆದುಕೊಳ್ಳಬಹುದು ಮತ್ತು ದಿನವಿಡೀ ನೀವು ಹೆಚ್ಚು ತಿಂಡಿ ತಿನ್ನುವುದಕ್ಕೆ ಕಾರಣವಾಗುತ್ತದೆ.

    MORE
    GALLERIES

  • 38

    Weight Loss Tips: ಸಣ್ಣ ಆಗ್ಬೇಕು ಅಂತ ಪರದಾಡ್ತಿದ್ರೆ ಇಲ್ಲಿದೆ ನೋಡಿ ಸೂಪರ್ ಟಿಪ್ಸ್​

    ಹಣ್ಣುಗಳು ಮತ್ತು ಸೊಪ್ಪು, ತರಕಾರಿಗಳು ಕಡಿಮೆ ಕ್ಯಾಲೋರಿಗಳು ಮತ್ತು ಕೊಬ್ಬನ್ನು ಹೊಂದಿರುತ್ತವೆ ಮತ್ತು ಹೆಚ್ಚಿನ ಫೈಬರ್ ಅನ್ನು ಹೊಂದಿರುತ್ತವೆ - ಯಶಸ್ವಿ ತೂಕ ಇಳಿಸುವ ಪ್ರಕ್ರಿಯೆಗೆ ಬೇಕಾಗುವ 3 ಅಗತ್ಯ ಪದಾರ್ಥಗಳು ಇವು. ಅವು ಸಾಕಷ್ಟು ಜೀವಸತ್ವಗಳು ಮತ್ತು ಖನಿಜಗಳನ್ನು ಸಹ ಹೊಂದಿರುತ್ತವೆ.

    MORE
    GALLERIES

  • 48

    Weight Loss Tips: ಸಣ್ಣ ಆಗ್ಬೇಕು ಅಂತ ಪರದಾಡ್ತಿದ್ರೆ ಇಲ್ಲಿದೆ ನೋಡಿ ಸೂಪರ್ ಟಿಪ್ಸ್​

    ಡ್ರೈ ಫ್ರೂಟ್ಸ್​ಗಳ ಸೇವನೆ ಮಾಡುವುದು ನಿಮ್ಮ ತೂಕ ಇಳಿಸುವ ಪ್ರಕ್ರಿಯೆಗೆ ಸಹಾಯ ಮಾಡುತ್ತದೆ. ಹಾಗಂತ ಹೆಚ್ಚು ತಿನ್ನುವುದು ಸಹ ಸೂಕ್ತವಲ್ಲ.

    MORE
    GALLERIES

  • 58

    Weight Loss Tips: ಸಣ್ಣ ಆಗ್ಬೇಕು ಅಂತ ಪರದಾಡ್ತಿದ್ರೆ ಇಲ್ಲಿದೆ ನೋಡಿ ಸೂಪರ್ ಟಿಪ್ಸ್​

    ಇನ್ನು ನಿಮಗೆ ಸೊಪ್ಪು ಮತ್ತು ತರಕಾರಿಯನ್ನು ತಿನ್ನಲು ಸಾಧ್ಯವಿಲ್ಲ ಎಂದರೆ ಅದನ್ನು ಜ್ಯೂಸ್​ ಮಾಡಿ ಕುಡಿಯಿರಿ. ಇದು ನಿಮಗೆ ರುಚಿ ನೀಡುವುದಲ್ಲದೇ, ತೂಕ ಇಳಿಸಲು ಸಹಾಯ ಮಾಡುತ್ತದೆ.

    MORE
    GALLERIES

  • 68

    Weight Loss Tips: ಸಣ್ಣ ಆಗ್ಬೇಕು ಅಂತ ಪರದಾಡ್ತಿದ್ರೆ ಇಲ್ಲಿದೆ ನೋಡಿ ಸೂಪರ್ ಟಿಪ್ಸ್​

    ಸಕ್ರಿಯವಾಗಿರುವುದು ತೂಕವನ್ನು ಕಳೆದುಕೊಳ್ಳಲು ತೂಕ ಹೆಚ್ಚಾಗದಂತೆ ನೋಡಿಕೊಳ್ಳುವುದು ಮುಖ್ಯ. ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಒದಗಿಸುವುದರ ಜೊತೆಗೆ, ವ್ಯಾಯಾಮವು ಆಹಾರದ ಮೂಲಕ ನೀವು ಕಳೆದುಕೊಳ್ಳಲಾಗದ ಹೆಚ್ಚುವರಿ ಕ್ಯಾಲೊರಿಗಳನ್ನು ಬರ್ನ್ ಮಾಡಲು ಸಹಾಯ ಮಾಡುತ್ತದೆ. ಹಾಗಾಗಿ ವ್ಯಾಯಾಮ ಮಾಡಿ.

    MORE
    GALLERIES

  • 78

    Weight Loss Tips: ಸಣ್ಣ ಆಗ್ಬೇಕು ಅಂತ ಪರದಾಡ್ತಿದ್ರೆ ಇಲ್ಲಿದೆ ನೋಡಿ ಸೂಪರ್ ಟಿಪ್ಸ್​

    ಜನರು ಕೆಲವೊಮ್ಮೆ ಬಾಯಾರಿಕೆಯನ್ನು ಹಸಿವಿನೊಂದಿಗೆ ಗೊಂದಲ ಮಾಡಿಕೊಳ್ಳುತ್ತಾರೆ. ಒಂದು ಲೋಟ ನೀರು ನೀವು ಹೆಚ್ಚುವರಿ ಕ್ಯಾಲೊರಿ ತಿನ್ನುವುದನ್ನ ಕಡಿಮೆ ಮಾಡುತ್ತದೆ. ಹಾಗಾಗಿ ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯಿರಿ.

    MORE
    GALLERIES

  • 88

    Weight Loss Tips: ಸಣ್ಣ ಆಗ್ಬೇಕು ಅಂತ ಪರದಾಡ್ತಿದ್ರೆ ಇಲ್ಲಿದೆ ನೋಡಿ ಸೂಪರ್ ಟಿಪ್ಸ್​

    ಮನೆಯಲ್ಲಿ ಜಂಕ್ ಫುಡ್ ಅನ್ನು ಸಂಗ್ರಹಿಸಿ ಇಟ್ಟುಕೊಳ್ಳಬೇಡಿ. ಉದಾಹರಣೆಗೆ ಚಾಕೊಲೇಟ್, ಬಿಸ್ಕತ್ತುಗಳು, ಕ್ರಿಸ್ಪ್ಸ್ ಮತ್ತು ಸಿಹಿಯಾದ ಪಾನೀಯಗಳನ್ನು ಕುಡಿಯುವುದು ಹಾಗೂ ತಿನ್ನುವುದನ್ನ ತಪ್ಪಿಸಿ. ಬದಲಿಗೆ, ಹಣ್ಣು, ಉಪ್ಪುರಹಿತ ಅಕ್ಕಿ ಕೇಕ್, ಓಟ್ ಕೇಕ್, ಉಪ್ಪುರಹಿತ ಅಥವಾ ಸಿಹಿಗೊಳಿಸದ ಪಾಪ್ಕಾರ್ನ್ ಮತ್ತು ಹಣ್ಣಿನ ರಸದಂತಹ ಆರೋಗ್ಯಕರ ತಿಂಡಿಗಳನ್ನು ಆರಿಸಿಕೊಳ್ಳಿ.

    MORE
    GALLERIES