Past Life: ಮೀನಾ ರಾಶಿಯವರು ಹಿಂದಿನ ಜನ್ಮದಲ್ಲಿ ಕ್ರಾಂತಿಕಾರಿಗಳಂತೆ- ನಿಮ್ಮ ರಾಶಿ ಹೇಳೋದೇನು ನೋಡಿ
Know Your Past Life: ಜನ್ಮ ರಾಶಿಯ ಚಿಹ್ನೆಗಳ ಆಧಾರದ ಮೇಲೆ ಜನರ ಭವಿಷ್ಯವನ್ನು ಊಹಿಸಬಹುದು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಕೆಲವು ಚಿಹ್ನೆಗಳ ಮೂಲಕ ಮುಂಬರುವ ದಿನಗಳ ಘಟನೆಗಳು ಮತ್ತು ಜನರ ನಡವಳಿಕೆಗಳನ್ನು ಮುಂಚಿತವಾಗಿ ತಿಳಿದುಕೊಳ್ಳಬಹುದು. ಆದರೆ ಹಿಂದಿನ ಜನ್ಮದಲ್ಲಿ ನಡೆದ ಸಂಗತಿಗಳನ್ನು ಸಹ ರಾಶಿಚಕ್ರದ ಆಧಾರದ ಮೇಲೆ ಕಂಡುಹಿಡಿಯಬಹುದು. ಹೇಗೆ ಎಂಬುದು ಇಲ್ಲಿದೆ.
ಹಿಂದಿನ ಜನ್ಮದಲ್ಲಿ ನಿಮ್ಮ ನಡವಳಿಕೆ ಹೇಗಿತ್ತು ಎಂದು ನೀವು ಊಹಿಸಬಹುದು. ನಿಮ್ಮ ಬದುಕಿನಲ್ಲಿ ನೀವು ರಾಶಿಯ ಆಧಾರದ ಮೇಲೆ ಹಲವಾರು ವಿಚಾರಗಳನ್ನು ತಿಳಿಯಬಹುದು.
2/ 13
ಮೇಷ ರಾಶಿ ನೀವು ಹಿಂದಿನ ಜೀವನದಲ್ಲಿ ಆಧ್ಯಾತ್ಮಿಕ ವ್ಯಕ್ತಿಗಳಾಗಿದ್ದವರು. ಯಾರೂ ನಿಮ್ಮನ್ನು ಅಷ್ಟು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಸಹಾನುಭೂತಿಗೆ ಇನ್ನೊಂದು ಹೆಸರು ಎನ್ನುವ ರೀತಿ ಬದುಕಿದವರು.
3/ 13
ವೃಷಭ ರಾಶಿ ಈ ರಾಶಿಯವರು ಯಾವುದೇ ಭಯವಿಲ್ಲದ ಆಕ್ರಮಣಕಾರಿ ಸ್ವಭಾವದವರಾಗಿದ್ದರು. ಕಷ್ಟದ ಸಮಯದಲ್ಲಿ ಈ ವೈಶಿಷ್ಟ್ಯವನ್ನು ಬಿಟ್ಟುಕೊಡದವರು.
4/ 13
ಮಿಥುನ ರಾಶಿ ನೀವು ಮೊದಲು ಉದ್ಯಮಿಯಾಗಿದ್ದೀರಿ. ಹಣ ಮತ್ತು ವಸ್ತುಗಳಿಗೆ ಆದ್ಯತೆ ನೀಡುವ ಗುಣ ನಿಮ್ಮದಾಗಿತ್ತು. ಆರಾಮದಾಯಕ, ತೃಪ್ತಿಕರವಾದ ಜೀವನವನ್ನು ನಡೆಸಲು ಇಷ್ಟಪಟ್ಟು ಬದುಕಿದವರು..
5/ 13
ಕಟಕ ಈ ರಾಶಿಯವರು ತುಂಬಾ ಬುದ್ಧಿವಂತರಾಗಿದ್ದರು. ಹೊಸ ವಿಷಯಗಳನ್ನು ಕಲಿಯುವ ಕುತೂಹಲವನ್ನುಹೊಂದಿದ್ದವರು. ಆದ್ದರಿಂದ ನೀವು ಬರಹಗಾರರಾಗಿ ಗುರುತಿಸಲ್ಪಟ್ಟವರು.
6/ 13
ಸಿಂಹ ನಿಮ್ಮ ರಾಶಿಯವರು ಹೆಚ್ಚಾಗಿ ಕುಟುಂಬದ ಪೋಷಣೆ ಮತ್ತು ಪಾಲನೆಯಂತಹ ಗುಣವನ್ನು ಹೊಂದಿದ್ದಾರೆ. ಈ ಸ್ವಭಾವದ ಆಧಾರದ ಮೇಲೆ, ಈ ರಾಶಿಚಕ್ರದ ಮಹಿಳೆಯರು ಜೀವನದಲ್ಲಿ ಅತ್ಯುತ್ತಮ ಗೃಹಿಣಿ ಆಗಿದ್ದರು.
7/ 13
ಕನ್ಯಾರಾಶಿ ಅಹಂಕಾರ ಯಾವಾಗಲೂ ನಿಮ್ಮ ಹಿಂದೆ ಇರುತ್ತದೆ. ಈ ಕಾರಣಕ್ಕಾಗಿ ನೀವು ಬಹಳ ಉತ್ತಮ ಅಧಿಕಾರದಲ್ಲಿದ್ದರೂ ಸಂತೋಷವಾಗಿರಲಿಲ್ಲ.
8/ 13
ತುಲಾ ರಾಶಿ ನೀವು ಇತರರ ಸಮಸ್ಯೆಗಳನ್ನು ಹೋಗಲಾಡಿಸುವವರು. ಅಂದರೆ ತ್ಯಾಗದ ಸ್ವಭಾವವನ್ನು ಹೊಂದಿರುವವರು. ಆದ್ದರಿಂದ ಇತರರಿಗೆ ಸಹಾಯ ಮಾಡುವ ಸಮಾಜ ಜೀವಿಯಾಗಿ ಬದುಕಿದವರು.
9/ 13
ವೃಶ್ಚಿಕ ರಾಶಿ ನಿಮ್ಮ ವ್ಯಕ್ತಿತ್ವದಲ್ಲಿ ಕೆಲವು ತಿರುವುಗಳಿರುವುದರಿಂದ ಎಂದೆಂದಿಗೂ ಸಂತೋಷದಿಂದ ಬದುಕಿದವರು. ಕಲಾವಿದರಾಗಿ ಗುರುತಿಸಿಕೊಂಡಿದ್ದವರು.
10/ 13
ಧನು ರಾಶಿ ಹಿಂದಿನ ಜೀವನದಲ್ಲಿ ಈ ರಾಶಿಯವರು ವಿಜ್ಞಾನಿಗಳಂತೆ. ಏಕೆಂದರೆ ಅವರು ಹೊಸ ವಿಷಯಗಳನ್ನು ಕಲಿಯುವ ಬಯಕೆಯಂತಹ ಗುಣಗಳನ್ನು ಹೊಂದಿದ್ದಾರೆ.
11/ 13
ಮಕರ ಈ ರಾಶಿಯವರು ಸ್ವಾತಂತ್ರ್ಯವನ್ನು ಪ್ರೀತಿಸುತ್ಥಾರೆ. ಯಾವುದೇ ಅಡೆತಡೆಗಳಿಲ್ಲದೆ ಪ್ರಕೃತಿಯಲ್ಲಿ ವಿಹರಿಸಲು ಬಯಸುತ್ತಾರೆ. ಬಹುಶಃ ಇವರು ಹಿಂದಿನ ಜೀವನದಲ್ಲಿ ಪ್ರವಾಸಿಗರಾಗಿರಬೇಕು.
12/ 13
ಕುಂಭ ರಾಶಿ ಹಿಂದಿನ ಜನ್ಮದಲ್ಲಿ ಉತ್ತಮ ರಾಜಕೀಯ ನಾಯಕರಾಗಿದ್ದರು. ಅಲ್ಲದೆ ಇವರಲ್ಲಿ ಸಾಕಷ್ಟು ಬದ್ಧತೆ ಇದೆ.
13/ 13
ಮೀನ ರಾಶಿ ನೀವು ಯಾವಾಗಲೂ ಕ್ರಾಂತಿಕಾರಿ. ಸಂಪ್ರದಾಯಕ್ಕೆ ವಿರುದ್ಧವಾಗಿ ಯೋಚಿಸುವವರು.