ರಾತ್ರಿಯಲ್ಲಿ ನೀವು ಸೇವಿಸುವ ಆಹಾರವು ಮಧ್ಯರಾತ್ರಿಯವರೆಗೆ ನಿಧಾನವಾಗಿ ಜೀರ್ಣವಾಗುತ್ತದೆ. ಅದಕ್ಕಾಗಿಯೇ ನಮ್ಮ ದೇಹವು ಬೆಳಿಗ್ಗೆ ನಿರ್ಜಲೀಕರಣಗೊಳ್ಳುತ್ತದೆ. ಹಾಗಾಗಿ ಬೆಳಗ್ಗೆ ಒಂದು ಲೀಟರ್ ಒಳ್ಳೆಯ ನೀರು ಕುಡಿಯಿರಿ ಎನ್ನುತ್ತಾರೆ ವೈದ್ಯರು. ನೀರಿನ ಬದಲು ಟೀ ಮತ್ತು ಕಾಫಿ ಕುಡಿಯುವುದರಿಂದ ಮತ್ತೆ ನಿರ್ಜಲೀಕರಣ ಆಗಬಹುದು. ಇದು ನಿಮ್ಮ ಆರೋಗ್ಯವನ್ನು ಹಾಳುಮಾಡಬಹುದು.
ನೀವು ಕಾಫಿ ಬದಲಿಗೆ ಗ್ರೀನ್ ಟೀ ಮತ್ತು ಬ್ಲ್ಯಾಕ್ ಕಾಫಿ ಪ್ರಯತ್ನಿಸಬಹುದು. ಅಷ್ಟೇ ಅಲ್ಲದೇ, ಟೀ, ಕಾಫಿಯಲ್ಲಿನ ಸಕ್ಕರೆ ಅಂಶವನ್ನು ಆದಷ್ಟು ಕಡಿಮೆ ಮಾಡುವುದರಿಂದ ನಿಮ್ಮ ದೇಹಕ್ಕೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ. ಹಾಲನ್ನು ಸಾಧ್ಯವಾದಷ್ಟು ಕಡಿಮೆ ಮಾಡುವ ಮೂಲಕ ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಲ್ಯಾಕ್ಟೋಸ್ ಅಪಾಯವಿಲ್ಲದೆ ಸುರಕ್ಷಿತವಾಗಿರಿಸಿಕೊಳ್ಳಬಹುದು.