Eye Care Tips: ಹೋಳಿಯ ಬಣ್ಣ ನಿಮ್ಮ ಬಾಳನ್ನು ಕಪ್ಪಾಗಿಸದೇ ಇರಲಿ! ಓಕುಳಿ ವೇಳೆ ಕಾಳಜಿ ಕಣ್ಣುಗಳ ಮೇಲೂ ಇರಲಿ

ಹೋಳಿ ಸಡಗರ ಮತ್ತು ಸಂಭ್ರಮ ಹೊತ್ತು ತರುತ್ತದೆ. ಜನರು ಸಂತಸದಿಂದ ಹೋಳಿ ಹಬ್ಬ ಆಚರಣೆ ಮಾಡುತ್ತಾರೆ. ಒಬ್ಬರಿಗೊಬ್ಬರು ರಂಗು ಎರಚಿ ಸಂತಸದಿಂದ ಶುಭಾಶಯ ವಿನಿಮಯ ಮಾಡಿಕೊಳ್ತಾರೆ. ಈ ಬಣ್ಣದೋಕುಳಿಯ ನಂತರ ಕಣ್ಣುಗಳ ಆರೈಕೆ ಮಾಡುವುದು ತುಂಬಾ ಅವಶ್ಯಕ.

First published:

  • 18

    Eye Care Tips: ಹೋಳಿಯ ಬಣ್ಣ ನಿಮ್ಮ ಬಾಳನ್ನು ಕಪ್ಪಾಗಿಸದೇ ಇರಲಿ! ಓಕುಳಿ ವೇಳೆ ಕಾಳಜಿ ಕಣ್ಣುಗಳ ಮೇಲೂ ಇರಲಿ

    ಬಣ್ಣದೋಕುಳಿಯ ನಂತರ ಕಣ್ಣಿನ ಸುತ್ತ ಬಿದ್ದಿರುವ ಬಣ್ಣವನ್ನು ಚೆನ್ನಾಗಿ ತೊಳೆಯಬೇಕು. ಇಲ್ಲದಿದ್ದರೆ ಇದು ಕಣ್ಣುಗಳ ಸುತ್ತ ಅಲರ್ಜಿ, ಕೆರೆತ, ಊತ ಮತ್ತು ಕಣ್ಣು ಉರಿ ಸಮಸ್ಯೆಗೆ ಕಾರಣವಾಗುತ್ತದೆ.

    MORE
    GALLERIES

  • 28

    Eye Care Tips: ಹೋಳಿಯ ಬಣ್ಣ ನಿಮ್ಮ ಬಾಳನ್ನು ಕಪ್ಪಾಗಿಸದೇ ಇರಲಿ! ಓಕುಳಿ ವೇಳೆ ಕಾಳಜಿ ಕಣ್ಣುಗಳ ಮೇಲೂ ಇರಲಿ

    ಬಣ್ಣದೋಕುಳಿಯ ಮೊದಲು ಮತ್ತು ನಂತರ ಕಣ್ಣುಗಳ ಆರೈಕೆ ಮಾಡಿ. ಸ್ವಲ್ಪ ಸಮಯ ಶುದ್ಧ ಮತ್ತು ತಣ್ಣನೆಯ ನೀರಿನ ಟ್ಯಾಪ್ ಅಡಿ ಕಣ್ಣುಗಳನ್ನು ತೇವಗೊಳಿಸಿ.

    MORE
    GALLERIES

  • 38

    Eye Care Tips: ಹೋಳಿಯ ಬಣ್ಣ ನಿಮ್ಮ ಬಾಳನ್ನು ಕಪ್ಪಾಗಿಸದೇ ಇರಲಿ! ಓಕುಳಿ ವೇಳೆ ಕಾಳಜಿ ಕಣ್ಣುಗಳ ಮೇಲೂ ಇರಲಿ

    ಬಣ್ಣಗಳು ಜೀವನದಲ್ಲಿ ಉತ್ಸಾಹ ಮತ್ತು ಖುಷಿ ನೀಡುತ್ತವೆ. ಜೊತೆಗೆ ವರ್ಣಮಯ ಬಣ್ಣದಾಟ ಎಲ್ಲೆಲ್ಲೂ ತನ್ನ ರಂಗು ಮೂಡಿಸುತ್ತದೆ. ಆದರೆ ಸೂಕ್ತ ಕಾಳಜಿ ವಹಿಸದಿದ್ದರೆ ಇದೇ ರಂಗು ಕಣ್ಣುಗಳ ಸಮಸ್ಯೆಗೆ ಕಾರಣವಾಗುತ್ತದೆ.

    MORE
    GALLERIES

  • 48

    Eye Care Tips: ಹೋಳಿಯ ಬಣ್ಣ ನಿಮ್ಮ ಬಾಳನ್ನು ಕಪ್ಪಾಗಿಸದೇ ಇರಲಿ! ಓಕುಳಿ ವೇಳೆ ಕಾಳಜಿ ಕಣ್ಣುಗಳ ಮೇಲೂ ಇರಲಿ

    ಕೆಮಿಕಲ್ ಮಿಶ್ರಿತ ಬಣ್ಣದ ಬದಲು ಆರ್ಗ್ಯಾನಿಕ್ ಬಣ್ಣ ಬಳಕೆ ಚರ್ಮ ಮತ್ತು ಆಟಕ್ಕೆ ಉತ್ತಮ ಅಂತಾರೆ ತಜ್ಞರು. ಅದಾಗ್ಯೂ ಹೋಳಿಯ ಬಣ್ಣ ಕಣ್ಣಿಗೆ ಹೋದರೆ ಅದು ದೃಷ್ಟಿ ಮಂದವಾಗುವಂತೆ ಮಾಡುತ್ತದೆ. ಕಣ್ಣುಗಳನ್ನು ಮುಟ್ಟುವ ಮೊದಲು ನಿಮ್ಮ ಕೈಗಳನ್ನು ಚೆನ್ನಾಗಿ ತೊಳೆಯಿರಿ.

    MORE
    GALLERIES

  • 58

    Eye Care Tips: ಹೋಳಿಯ ಬಣ್ಣ ನಿಮ್ಮ ಬಾಳನ್ನು ಕಪ್ಪಾಗಿಸದೇ ಇರಲಿ! ಓಕುಳಿ ವೇಳೆ ಕಾಳಜಿ ಕಣ್ಣುಗಳ ಮೇಲೂ ಇರಲಿ

    ಕಣ್ಣುಗಳ ಸುತ್ತ ಮತ್ತು ಕೆಲವೊಮ್ಮೆ ಕಣ್ಣೊಳಗೆ ಹೋಗುವ ಬಣ್ಣವು ಹಲವು ತೊಂದರೆ ಉಂಟು ಮಾಡುತ್ತದೆ. ಕಲುಷಿತ ಮತ್ತು ಅಪಾಯಕಾರಿ ಕೆಮಿಕಲ್ ಮಿಶ್ರಿತ ಬಣ್ಣದಲ್ಲಿ ಪಾದರಸ, ಕಲ್ನಾರು, ಸಿಲಿಕಾ, ಮೈಕಾ ಮತ್ತು ಸೀಸ ಬಣ್ಣಗಳಲ್ಲಿ ಕೆಮಿಕಲ್ ಬಳಸುತ್ತಾರೆ. ವಿಶೇಷವಾಗಿ ಮಕ್ಕಳೊಂದಿಗೆ ಹೋಳಿಯಲ್ಲಿ ಸಿಂಥೆಟಿಕ್ ಬಣ್ಣ ಬಳಸಬೇಡಿ.

    MORE
    GALLERIES

  • 68

    Eye Care Tips: ಹೋಳಿಯ ಬಣ್ಣ ನಿಮ್ಮ ಬಾಳನ್ನು ಕಪ್ಪಾಗಿಸದೇ ಇರಲಿ! ಓಕುಳಿ ವೇಳೆ ಕಾಳಜಿ ಕಣ್ಣುಗಳ ಮೇಲೂ ಇರಲಿ

    ಹೋಳಿಯ ವೇಳೆ ಕಣ್ಣುಗಳ ಬಗ್ಗೆ ಕಾಳಜಿ ವಹಿಸಿ. ಕಾಂಟ್ಯಾಕ್ಟ್ ಲೆನ್ಸ್‌ ಧರಿಸಿ ಹೋಳಿ ಆಡಬೇಡಿ. ಕಣ್ಣು ಹಾಗೂ ಮುಖದ ಮೇಲೆ ಬಣ್ಣದ ಬಲೂನ್ ಎಸೆಯಬೇಡಿ. ಬಣ್ಣ ಆಡುವಾಗ ಬಣ್ಣ ಕಣ್ಣುಗಳತ್ತ ಬರುತ್ತಿದ್ದ ಹಾಗೇ ಕಣ್ಣುಗಳನ್ನು ಸಂಪೂರ್ಣವಾಗಿ ಮುಚ್ಚಿರಿ. ಕಣ್ಣಿಗೆ ಹೋಳಿ ಬಣ್ಣ ಅಥವಾ ಬಣ್ಣದ ನೀರು ತಾಗದಂತೆ ಜಾಗ್ರತೆ ವಹಿಸಿ.

    MORE
    GALLERIES

  • 78

    Eye Care Tips: ಹೋಳಿಯ ಬಣ್ಣ ನಿಮ್ಮ ಬಾಳನ್ನು ಕಪ್ಪಾಗಿಸದೇ ಇರಲಿ! ಓಕುಳಿ ವೇಳೆ ಕಾಳಜಿ ಕಣ್ಣುಗಳ ಮೇಲೂ ಇರಲಿ

    ಬಣ್ಣ ಆಡುವಾಗ ಬಣ್ಣ ಕಣ್ಣೊಳಗೆ ಹೋದರೆ ಕಣ್ಣುಜ್ಜುವ ಬದಲು, ಜೋರಾಗಿ ಕಣ್ಣು ಮಿಟುಕಿಸಿ. ಇದು ಎಲ್ಲಾ ಬಣ್ಣವನ್ನು ತೆಗೆದು ಹಾಕುತ್ತದೆ. ಕಣ್ಣು ಸುಡುವಿಕೆ ಮತ್ತು ತುರಿಕೆ ಆಗದಂತೆ ತಡೆಯುತ್ತದೆ. ಮುಖವನ್ನು ಶುದ್ಧ ನೀರಿನಲ್ಲಿ ಮುಳುಗಿಸಿ, ಕಣ್ಣುಗಳನ್ನು ಮಿಟುಕಿಸಿ. ಪದೇ ಪದೆ ಕಣ್ಣುಗಳನ್ನು ಉಜ್ಜುವ ತಪ್ಪನ್ನು ಮಾಡಬೇಡಿ.

    MORE
    GALLERIES

  • 88

    Eye Care Tips: ಹೋಳಿಯ ಬಣ್ಣ ನಿಮ್ಮ ಬಾಳನ್ನು ಕಪ್ಪಾಗಿಸದೇ ಇರಲಿ! ಓಕುಳಿ ವೇಳೆ ಕಾಳಜಿ ಕಣ್ಣುಗಳ ಮೇಲೂ ಇರಲಿ

    ಬಣ್ಣವು ಸ್ವಚ್ಛವಾದ ನಂತರ ಕಣ್ಣುಗಳು ಒಣಗಿದ್ದರೆ ನೀವು ಲೂಬ್ರಿಕೇಟಿಂಗ್ ಕಣ್ಣಿನ ಹನಿ ಬಳಸಬಹುದು. ಇದಕ್ಕಾಗಿ ವೈದ್ಯರ ಸಲಹೆ ಪಡೆಯಿರಿ. ತಲೆಯ ಮೇಲೆ ಟೋಪಿ ಬಳಸಿ. ಕೂದಲನ್ನು ಸರಿಯಾಗಿ ಕಟ್ಟಿಕೊಳ್ಳಿ. ಇದು ಬಣ್ಣ ಕಣ್ಣಿಗೆ ತಾಕದಂತೆ ರಕ್ಷಿಸುತ್ತದೆ. ಕಣ್ಣಿನ ರಕ್ಷಣೆ ಕನ್ನಡಕ ಬಳಸಿ.

    MORE
    GALLERIES