Dog Food: ನಿಮ್ಮ ನಾಯಿಗೆ ಆಹಾರ ಖರೀದಿ ಮಾಡುವಾಗ ಈ ವಿಚಾರ ನೆನಪಿರಲಿ
Buying Dog Food: ಸಾಕುಪ್ರಾಣಿಗಳ ಆರೈಕೆ ಮಾಡುವುದು ಸುಲಭದ ಮಾತಲ್ಲ. ನಾವು ಹೇಗೆ ನಮ್ಮ ಆಹಾರವನ್ನು ಖರೀದಿ ಮಾಡುವಾಗ ಬಹಳ ಎಚ್ಚರಿಕೆವಹಿಸುತ್ತೇವೆಯೋ ಹಾಗೆಯೇ ಅವುಗಳ ಆಹಾರ ಖರೀದಿ ಮಾಡುವಾಗ ಕೆಲ ವಿಚಾರಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ನಿಮ್ಮ ನಾಯಿಗಳ ಆಹಾರ ಹೇಗಿರಬೇಕು ಎಂಬುದು ಇಲ್ಲಿದೆ.
ಸಾಕುಪ್ರಾಣಿಗಳ ಆರೈಕೆ ಮಾಡುವುದು ಸುಲಭದ ಮಾತಲ್ಲ. ನಾವು ಹೇಗೆ ನಮ್ಮ ಆಹಾರವನ್ನು ಖರೀದಿ ಮಾಡುವಾಗ ಬಹಳ ಎಚ್ಚರಿಕೆವಹಿಸುತ್ತೇವೆಯೋ ಹಾಗೆಯೇ ಅವುಗಳ ಆಹಾರ ಖರೀದಿ ಮಾಡುವಾಗ ಕೆಲ ವಿಚಾರಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ನಿಮ್ಮ ನಾಯಿಗಳ ಆಹಾರ ಹೇಗಿರಬೇಕು ಎಂಬುದು ಇಲ್ಲಿದೆ.
2/ 8
ಆರೋಗ್ಯವಾಗಿರಲು ನಮಗೆ ಪೌಷ್ಟಿಕಾಂಶದ ಆಹಾರ ಅಗತ್ಯವಿರುವಂತೆಯೇ, ನಮ್ಮ ಸಾಕುಪ್ರಾಣಿಗಳಿಗೆ ಸಹ ಅವುಗಳನ್ನು ಆರೋಗ್ಯವಾಗಿ ಮತ್ತು ಸಂತೋಷವಾಗಿರಿಸಲು ಸಮತೋಲಿತ ಆಹಾರದ ಅಗತ್ಯವಿದೆ.
3/ 8
ನಮ್ಮ ಸಾಕುಪ್ರಾಣಿಗಳು ಆರೋಗ್ಯಕರ ಆಹಾರವನ್ನು ಸೇವಿಸುತ್ತವೆ ಎಂಬುದನ್ನ ನೋಡಿಕೊಳ್ಳುವ ಜವಾಬ್ದಾರಿ ನಮ್ಮದು. ಹಾಗಾಗಿ ನಾವು ಖರೀದಿ ಮಾಡುವ ಆಹಾರಗಳ ಬಗ್ಗೆ ಬಹಳ ಎಚ್ಚರಿಕೆಯಿಂದ ಇರಬೇಕು ಎನ್ನುತ್ತಾರೆ ಪ್ರಾಣಿ ವೈದ್ಯರು.
4/ 8
ನಿಮ್ಮ ನಾಯಿಗೆ ಯಾವ ಆಹಾರ ಇಷ್ಟ ಎಂಬುದನ್ನ ಮೊದಲು ಗಮನಿಸಿ, ಆ ಆಹಾರಗಳನ್ನ ಮಾತ್ರ ಖರೀದಿಸಿ. ಕೆಲವು ಬಾರಿ ನೀವು ಮಾಂಸಹಾರ ನೀಡಿದರೆ ಅವುಗಳಿಗೆ ಇಷ್ಟವಾಗುವುದಿಲ್ಲ, ಕೆಲವೊಮ್ಮೆ ಸಸ್ಯಾಹಾರ ಇಷ್ಟವಾಗುವುದಿಲ್ಲ. ಹಾಗಾಗಿ ಅವುಗಳಿಗೆ ತಿನ್ನಲು ಯಾವುದು ಇಷ್ಟ, ಅದನ್ನು ಖರೀದಿಸಿ.
5/ 8
ಕೆಲವೊಮ್ಮೆ ನಾವು ನೋಡಲು ಚೆಂದವಿರುವ ಆಹಾರಗಳನ್ನು ಆಯ್ಕೆ ಮಾಡುತ್ತೇವೆ. ಅದು ದೊಡ್ಡ ತಪ್ಪು. ನಾವು ಆಹಾರದಲ್ಲಿ ಇರುವ ಪೋಷಕಾಂಶಗಳನ್ನು ನೋಡಿ ಖರೀದಿ ಮಾಡಬೇಕು. ಆಗ ಮಾತ್ರ ನಾಯಿಗಳ ಆರೋಗ್ಯ ಚೆನ್ನಾಗಿರುತ್ತದೆ.
6/ 8
ಕೆಲವೊಮ್ಮೆ ನಾಯಿಗಳಿಗೆ ಕಾರ್ಬೋಹೈಡ್ರೇಟ್ ಹೆಚ್ಚಿರುವ ಆಹಾರ ನೀಡುವುದು ಅಪಾಯ ಎನ್ನುತ್ತಾರೆ ತಜ್ಞರು. ಕಾರ್ಬೋಹೈಡ್ರೇಟ್ಗಳು ಮತ್ತು ಧಾನ್ಯಗಳು ಕಡಿಮೆ ಇರುವ ಆಹಾರಗಳು ನಿಮ್ಮ ನಾಯಿಗಳ ತೂಕ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
7/ 8
ನಾಯಿಗಳ ಆಹಾರ ಖರೀದಿ ಮಾಡುವಾಗ ನೆನಪಿಡಬೇಕಾದ ಮತ್ತೊಂದು ಮುಖ್ಯವಾದ ವಿಚಾರ ಎಂದರೆ ಅವುಗಳ ವಯಸ್ಸು. ನಿಮ್ಮ ನಾಯಿಗಳ ವಯಸ್ಸಿಗೆ ಅನುಗುಣವಾಗಿ ನೀವು ಆಹಾರ ಖರೀದಿ ಮಾಡಬೇಕು.
8/ 8
ನಿಮಗೆ ಯಾವ ಆಹಾರವನ್ನು ನೀಡಬೇಕು ಎನ್ನುವ ಗೊಂದಲವಿದ್ದರೆ ಮೊದಲು ತಜ್ಞರನ್ನು ಭೇಟಿಯಾಗಿ ಸಲಹೆ ಪಡೆಯಿರಿ. ಗೊಂದಲವಿಟ್ಟುಕೊಂಡು ಸಿಕ್ಕ ಸಿಕ್ಕ ಆಹಾರ ನೀಡುವುದು ಅವುಗಳ ಆರೋಗ್ಯಕ್ಕೆ ಅಪಾಯ.