ನೀರಿನಲ್ಲಿ ಮೀನಿನ ಹೆಜ್ಜೆಯನ್ನು ಕಂಡು ಹಿಡಿಯಬಹುದು. ಆದರೆ ಹೆಣ್ಣಿನ ಮನಸ್ಸಿನಲ್ಲಿ ಏನಿದೆ ಎಂದು ತಿಳಿದುಕೊಳ್ಳಲು ಯಾರಿಗೂ ಕೂಡ ಸಾಧ್ಯವಾಗಿಲ್ಲ. ಅದರಲ್ಲಿಯೂ ಪುರುಷರು ಈ ವಿಚಾರ ಬಂದಾಗ ಯಾವಾಗಲೂ ಗೊಂದಲಕ್ಕೆ ಒಳಗಾಗುತ್ತಾರೆ. ಜಗತ್ತಿನಲ್ಲಿ ಎಲ್ಲವನ್ನೂ ಬಲ್ಲ ಪುರುಷರಿಗೆ, ಹೆಣ್ಣಿನ ಮನಸ್ಸಿನಲ್ಲಿ ಏನಿದೆ ಎಂದು ಮಾತ್ರ ತಿಳಿದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಪ್ರತಿಯೊಬ್ಬ ವ್ಯಕ್ತಿಗೂ ಮಹಿಳೆಯರ ಮನಸ್ಸಿನಲ್ಲಿ ಏನಿದೆ ಎಂದು ತಿಳಿದುಕೊಳ್ಳುವ ಕುತೂಹಲವಿದೆ.
ಆದರೆ ಹೆಣ್ಣಿನ ಮನಸ್ಸನ್ನು ಅರಿಯುವುದು ಅಷ್ಟು ಸುಲಭದ ಮಾತಲ್ಲ. ಮಹಿಳೆಯರು ಸಾಮಾನ್ಯವಾಗಿ ತಾವು ಆಕರ್ಷಿತರಾದ ಹುಡುಗರೊಂದಿಗೆ ಮಾತ್ರ ತಮ್ಮ ಮನಸ್ಸಿನಲ್ಲಿರುವ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ಕೆಲವೊಮ್ಮೆ ಈ ಭಾವನೆಗಳು ಒಬ್ಬರಿಂದ ಒಬ್ಬರಿಗೆ ಭಿನ್ನವಾಗಿರುತ್ತದೆ. ಆದರೆ ಬಹುತೇಕ ಎಲ್ಲ ಮಹಿಳೆಯರಲ್ಲಿಯೂ ಸಾಮಾನ್ಯವಾಗಿದೆ. ಈ ರೀತಿಯ ಭಾವನೆಗಳ ಮೂಲಕ ಹುಡುಗಿಯರು ಹುಡುಗರನ್ನು ಆಕರ್ಷಿಸುತ್ತಾರೆ.
ತಮ್ಮನ್ನು ಬಿಟ್ಟುಕೊಡುತ್ತಾರೆ: ಸಾಮಾನ್ಯವಾಗಿ, ಮಹಿಳೆಯರು ತಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಅವರು ಆಕರ್ಷಿತರಾದ ಪುರುಷರಿಗೆ ಬಹಿರಂಗವಾಗಿ ವ್ಯಕ್ತಪಡಿಸುತ್ತಾರೆ. ವ್ಯಕ್ತಿ ಏನು ಅಂದುಕೊಳ್ಳುತ್ತಾರೋ ಎಂಬುವುದನ್ನು ಕೂಡ ಚಿಂತಿಸದೇ ಅವರ ಎಲ್ಲಾ ಭಯ, ಅಭದ್ರತೆ ಮತ್ತು ಅನುಮಾನಗಳನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತಾರೆ. ಈ ರೀತಿ ಹೇಳಿಕೊಳ್ಳುವುದು ಹುಡುಗಿಗೆ ನಿಮ್ಮ ಮೇಲೆ ಸಾಕಷ್ಟು ನಂಬಿಕೆ ಇದೆ ಎಂಬುದರ ದೊಡ್ಡ ಸಂಕೇತವಾಗಿದೆ.
ಸಮಯ ಕಳೆಯಲು ಸಿದ್ಧವಾಗಿರುತ್ತಾರೆ: ತಮ್ಮ ಮೋಹದೊಂದಿಗೆ ಹೆಚ್ಚು ಸಮಯ ಕಳೆಯಲು ಸಿದ್ಧರಿದ್ದಾರೆ. ಅವರು ಡೇಟ್ಗೆ ಹೋಗುವುದು, ಸಿನಿಮಾಗೆ ಹೋಗುವುದು ಅಥವಾ ಸುಮ್ಮನೆ ಆತನ ಜೊತೆಗೆ ಇರುವುದು ಮತ್ತು ಅವನ ಉಪಸ್ಥಿತಿಯನ್ನು ಆನಂದಿಸುವುದು ಮುಂತಾದ ಚಟುವಟಿಕೆಗಳಿಗೆ ಆದ್ಯತೆ ನೀಡುತ್ತಾರೆ. ಇದು ಸಂಬಂಧವನ್ನು ಗಟ್ಟಿಗೊಳಿಸುವುದು ಮಾತ್ರವಲ್ಲದೇ ಇದು ಹೆಚ್ಚಿನ ಭಾವನಾತ್ಮಕ ಸಂತೋಷವನ್ನು ನೀಡುತ್ತದೆ.
ದೈಹಿಕ ಅನ್ಯೋನ್ಯತೆ: ಮಹಿಳೆಯರು ಯಾವಾಗಲೂ ತಾವು ಇಷ್ಟಪಡುವ ಪುರುಷರಿಗೆ ದೈಹಿಕವಾಗಿ ಹತ್ತಿರವಾಗಲು ಬಯಸುತ್ತಾರೆ. ಆಗಾಗ್ಗೆ ಉಜ್ಜುವುದು, ಸ್ಪರ್ಶಿಸುವುದು. ಈ ಎಲ್ಲಾ ಪ್ರಮುಖ ಸಂಕೇತಗಳು ವ್ಯಕ್ತಿಗೆ ತುಂಬಾ ಹತ್ತಿರವಾಗಲು ಇಷ್ಟಪಡುತ್ತಿದ್ದಾರೆ ಎಂದರ್ಥ. ಅದರಲ್ಲಿಯೂ ಕೈ ಹಿಡಿದುಕೊಳ್ಳುವುದು ಮತ್ತು ಅಪ್ಪಿಕೊಳ್ಳುವುದು ಹೆಚ್ಚು ಪ್ರೀತಿಯನ್ನು ವ್ಯಕ್ತಪಡಿಸುವುದಾಗಿದೆ.
ಬೆಂಬಲಿಸುವುದು: ಮಹಿಳೆಯರು ಯಾವಾಗಲೂ ತಾವು ಇಷ್ಟಪಟ್ಟ ವ್ಯಕ್ತಿ ಕುಗ್ಗಿದಾಗ ಆತನೊಂದಿಗೆ ಇರಲು ಬಯಸುತ್ತಾರೆ. ಆತನ ಕಷ್ಟದ ಸಮಯದಲ್ಲಿ ಅವನಿಗೆ ಏನಾಯಿತು ಎಂದು ಕೇಳುತ್ತಾರೆ ಮತ್ತು ಅವನಿಗೆ ಪ್ರೋತ್ಸಾಹದ ಮಾತುಗಳನ್ನು ಆಡಿ ಬೆಂಬಲಿಸುತ್ತಾರೆ. ಮತ್ತೆ ವ್ಯಕ್ತಿಯನ್ನು ಮೊದಲಿನ ಸ್ಥಿತಿಗೆ ತರಲು ಪ್ರಯತ್ನಿಸುತ್ತಾರೆ. ಕಷ್ಟದ ಸಮಯದಲ್ಲಿ ಒಬ್ಬರನ್ನೊಬ್ಬರು ಬೆಂಬಲಿಸುವುದರಿಂದ ಇಬ್ಬರ ನಡುವೆ ಪ್ರೀತಿ ಹೆಚ್ಚಾಗುತ್ತದೆ.