ಜೀವನದಲ್ಲಿ ನಿಮಗೆ ಸೂಕ್ತವಾದ ಜೀವನ ಸಂಗಾತಿ ಸಿಗುವುದಕ್ಕಿಂತ ಮತ್ತೊಂದು ಸಂತೋಷದ ವಿಚಾರವಿಲ್ಲ. ನಿಮ್ಮ ಇಡೀ ಜೀವನವನ್ನು ಸುಂದರವಾಗಿರಲು ಸರಿಯಾದ ವ್ಯಕ್ತಿಯೊಂದಿಗೆ ಜೀವನ ನಡೆಸುವುದು ಉತ್ತಮ. ಇದರಿಂದ ನಿಮ್ಮ ಜೀವನವು ಪ್ರತಿದಿನವೂ ಸುಂದರವಾಗಿರುತ್ತದೆ. ನಿಮ್ಮ ಕನಸುಗಳು, ಆಸೆಗಳು, ಬೆಂಬಲ ಮತ್ತು ಪರಸ್ಪರ ಉನ್ನತಿಗೆ ನೀವು ತಲುಪಿದಾಗ ಜೀವನವು ಉತ್ತಮವಾಗಿರುತ್ತದೆ. ಹಾಗಾದರೆ ನೀವು ಆಯ್ಕೆ ಮಾಡಿಕೊಂಡಿರುವ ಪತಿ ಅಥವಾ ವ್ಯಕ್ತಿ ನಿಮಗೆ ಗುಡ್ ಮ್ಯಾಚ್ ಆಗಿದ್ದಾರಾ ಎಂದು ತಿಳಿಯಲು ಬಯಸ್ತೀರಾ? ಈ ಕೆಲಸಗಳು ನಿಮ್ಮಲ್ಲಿ ವರ್ಕೌಟ್ ಆಗ್ತೀದ್ದಿಯಾ ಎಂದು ತಿಳಿದುಕೊಳ್ಳಿ.
ಆದರೆ ಒಬ್ಬ ವ್ಯಕ್ತಿ ನಿಮ್ಮ ಜೀವನ ಸಂಗಾತಿಯಾದಾಗ, ಅವನು ನಿಮ್ಮನ್ನು ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತಾನೆ, ಅವನು ನಿಮ್ಮ ಬಗ್ಗೆ ಎಷ್ಟು ಕಾಳಜಿ ವಹಿಸುತ್ತಾನೆ, ಅವನು ನಿಮ್ಮನ್ನು ಎಷ್ಟು ಪ್ರೀತಿಸುತ್ತಾನೆ ಎಂಬುವುದು ಬಹಳ ಮುಖ್ಯವಾಗಿರುತ್ತದೆ. ಅಲ್ಲದೇ, ಇದನ್ನು ಜಗತ್ತಿಗೆ ಹೇಳುವ ಅಗತ್ಯವಿರುವುದಿಲ್ಲ. ಇಷ್ಟನ್ನು ಹೇಳದೇ ಕೇಳದೇ ಸದ್ದಿಲ್ಲದೆ ಮಾಡುತ್ತಾನೆ. ಜಗತ್ತು ಏನು ಯೋಚಿಸುತ್ತದೆ ಎಂಬುದನ್ನು ಕೂಡ ಲೆಕ್ಕಿಸುವುದಿಲ್ಲ. ನಿಮ್ಮ ಸಂಗಾತಿಯ ಗಮನ ನಿಮ್ಮ ಮೇಲೆ ಮಾತ್ರ ಇರುತ್ತದೆ.
ಇತರರ ಮುಂದೆ ತೋರ್ಪಡಿಸಿಕೊಳ್ಳುವುದಕ್ಕೆ ಮಾತ್ರ ನೋಡಿಕೊಳ್ಳುವುದಿಲ್ಲ: ಪ್ರೀತಿ, ಪರಸ್ಪರ ಕಾಳಜಿ ಎರಡೂ ಕಡೆಯಿಂದ ಇರಬೇಕು. ಪುರುಷರು ಮಾತ್ರ ನೋಡಿಕೊಳ್ಳುವುದು ಮತ್ತು ಕಾಳಜಿ ವಹಿಸುವುದಲ್ಲ ಮಹಿಳೆಯರು ಕೂಡ ನೋಡಿಕೊಳ್ಳಬೇಕು. ಅದರಲ್ಲಿಯೂ ತಾವು ಪ್ರೀತಿಸುವ ಮಹಿಳೆಯನ್ನು ಪುರುಷರು ಚೆನ್ನಾಗಿ ನೋಡಿಕೊಳ್ಳಬೇಕು. ಆದರೆ ಅನೇಕ ಪುರುಷರು ತಮ್ಮ ಸುತ್ತಮುತ್ತಲಿನವರ ಮುಂದೆ ತೋರ್ಪಡಿಸುವಿಕೆಗೆ ಮಾತ್ರ ಹೆಂತಿಯನ್ನು ಚೆನ್ನಾಗಿ ನೋಡಿಕೊಳ್ಳುವ ಅಭ್ಯಾಸ ಹೊಂದಿರುತ್ತಾರೆ.
ಸಂಗಾತಿ ನಿಮ್ಮ ಭಾವನಾತ್ಮಕ ಮತ್ತು ಮಾನಸಿಕ ಅಗತ್ಯಗಳನ್ನು ಪೂರೈಸುತ್ತಾನೆ: ಸಂಬಂಧವು ಉಳಿಯಬೇಕಾದರೆ ಮತ್ತು ಗಟ್ಟಿಯಾಗಬೇಕಾದರೆ, ನೀವು ಸುರಕ್ಷಿತವಾಗಿರಬೇಕು. ಹೀಗಾಗಿ ಅವನು ನಿಮ್ಮ ಭಾವನಾತ್ಮಕ ಅಗತ್ಯಗಳನ್ನು ಪೂರೈಸುತ್ತಾನೆ ಮತ್ತು ಯಾವುದೇ ಮಾನಸಿಕ ಸಮಸ್ಯೆಗಳು ಉದ್ಭವಿಸದಂತೆ ನೋಡಿಕೊಳ್ಳುತ್ತಾನೆ. ನಿರ್ದಿಷ್ಟವಾಗಿ ಹೇಳುವುದಾದರೆ, ನೀವು ಸಂಬಂಧ-ಅನುಮಾನ, ಭಯ, ಒಂಟಿತನ ಅಥವಾ ಖಾಲಿ ಭಾವನೆಯನ್ನು ಉಂಟುಮಾಡುವ ರೀತಿಯಲ್ಲಿ ವರ್ತಿಸುವುದಿಲ್ಲ. ಅಷ್ಟೇ ಅಲ್ಲ, ನಿಮ್ಮ ಗಮನವನ್ನು ಸೆಳೆಯಲು ಅವನು ನಿಮ್ಮನ್ನು ಬೇಡಿಕೊಳ್ಳುವುದಿಲ್ಲ.
ನೀಡಿದ ಭರವಸೆಗಳನ್ನು ಉಳಿಸಿಕೊಳ್ಳುತ್ತಾನೆ: ಚಿಕ್ಕ ವಿಷಯಗಳಿಂದ ಹಿಡಿದು ದೊಡ್ಡ ವಿಷಯಗಳವರೆಗೆ, ಅವನು ಯಾವಾಗಲೂ ನಿಮಗೆ ನೀಡಿದ ತನ್ನ ಭರವಸೆಗಳನ್ನು ಉಳಿಸಿಕೊಳ್ಳುತ್ತಾನೆ. ಭಯ, ಕಿರುಕುಳ, ದಣಿವು ಅಥವಾ ಬೇಸರದಂತಹ ಯಾವುದೇ ಕಾರಣವನ್ನು ನಿಮ್ಮ ಮುಂದಿಡುವುದಿಲ್ಲ ಮತ್ತು ಹೇಳಿದ ಪ್ರತಿಯೊಂದ್ದನ್ನು ಬಿಡದೇ ಮಾಡುತ್ತಾನೆ. ಇದರಿಂದ ನೀವು ಅವನಿಗೆ ಎಷ್ಟು ಮುಖ್ಯ ಎಂಬುವುದನ್ನು ಅರ್ಥಮಾಡಿಕೊಳ್ಳಬಹುದು.
ಅವನ ಕುಟುಂಬಕ್ಕೆ ನಿಮ್ಮನ್ನು ಪರಿಚಯಿಸುತ್ತಾನೆ, ಇದು ಪ್ರೇಮಿಗಳಿಗಾಗಿ: ಪ್ರೀತಿ ಮಾಡುತ್ತಿದ್ದ ವೇಳೆ ಇಬ್ಬರೂ ಪರಸ್ಪರರ ಕುಟುಂಬಕ್ಕೆ ಪರಸ್ಪರ ಪರಿಚಯಿಸಬೇಕಾದ ಪರಿಸ್ಥಿತಿ ಇರುತ್ತದೆ. ನಿಮ್ಮ ಪ್ರೇಮಿ ತನ್ನ ಕುಟುಂಬವನ್ನು ಭೇಟಿಯಾಗುವಂತೆ ಒತ್ತಾಯಿಸುತ್ತಾನೆ. ಇದರ ಮೂಲಕ ನೀವು ಅವನ ಕುಟುಂಬದ ಭಾಗವಾಗಲು ಬಯಸುತ್ತಿದ್ದಾನೆ ಮತ್ತು ನೀವು ಅವನ ಜೀವನದ ಪ್ರಮುಖ ಭಾಗವಾಗಿದ್ದೀರಾ ಎಂದು ಅರ್ಥಮಾಡಿಕೊಳ್ಳಬಹುದು.
ನೀವು ಹೀಗಿರಬೇಕು ಎಂದೆಲ್ಲಾ ನಿರ್ಬಂಧಿಸುವುದಿಲ್ಲ: ಒಬ್ಬ ವ್ಯಕ್ತಿಯನ್ನು ನಾವು ಎಷ್ಟು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತೇವೆ ಎಂಬುದು ಎಲ್ಲಾ ಸಂಬಂಧಗಳಿಗೆ ಮುಖ್ಯವಾಗಿದೆ. ನಿಮ್ಮ ಪ್ರೇಮಿ ನಿಮ್ಮನ್ನು ಚೆನ್ನಾಗಿ ಅರ್ಥಮಾಡಿಕೊಂಡರೆ, ಅವರು ನಿಮ್ಮ ಅಭ್ಯಾಸಗಳು, ನಿಮ್ಮ ಮಾತುಗಳು, ನೀವು ತೆಗೆದುಕೊಳ್ಳುವ ನಿರ್ಧಾರಗಳನ್ನು ನಿರ್ಣಯಿಸುವುದಿಲ್ಲ. ನಿಮ್ಮ ನಿರ್ಧಾರ ತಪ್ಪಿದಾಗ, ಅವರು ತಮಾಷೆ ಮಾಡದೆ, ನಿಮ್ಮನ್ನು ಸಮಾಧಾನಪಡಿಸುತ್ತಾರೆ.