ಸ್ವಲ್ಪ ಕೆಲಸ ಮಾಡಿದರೆ ಸಾಕು ಉಸಿರುಗಟ್ಟುತ್ತದೆ, ಬೆವರು ಸುರಿಸುತ್ತಿದೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಬೆವರುವುದು ಸಹಜ ಆದರೆ, ರಾತ್ರಿಯಿಡೀ ಎಸಿ ಹಾಕಿಕೊಂಡು ಮಲಗಿದ್ದರೂ, ದೇಹದಲ್ಲಿ ಬೇರೆ ಯಾವುದೇ ಸಮಸ್ಯೆ ಇಲ್ಲದಿದ್ದರೂ, ಬೆಳಗ್ಗೆ ಎದ್ದಾಗ ಬೆವರುತ್ತಿದ್ದೀರಾ? ಇಂತಹ ಬೆವರು ಪ್ರತಿ ದಿನವೂ ಬರುತ್ತಿದ್ಯಾ? ಆದರೆ ಇಂತಹ ಸಮಸ್ಯೆ ಏಕೆ ಆಗುತ್ತಿದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ?
ಈ ಕ್ಯಾನ್ಸರ್ ಬಂದರೆ ಅದರ ಲಕ್ಷಣಗಳು ಸುಲಭವಾಗಿ ಗೋಚರಗೊಳ್ಳುವುದಿಲ್ಲ ಎಂದು ವೈದ್ಯರು ಹೇಳುತ್ತಾರೆ. ಆದರೆ ಜನರು ಮಾರಣಾಂತಿಕ ಕಾಯಿಲೆಗೆ ತುತ್ತಾಗುವ ಕೊನೆಯ ಹಂತದಲ್ಲಿ ಈ ಕ್ಯಾನ್ಸರ್ ಕಾಣಿಸಿಕೊಳ್ಳುತ್ತದೆ. ಕ್ಯಾನ್ಸರ್ ಎಂಬ ಹೆಸರು ಕೇಳಿದರೆ ಎಲ್ಲರಿಗೂ ಭಯವಾಗುತ್ತದೆ. ಆದರೆ, ಕೆಲವು ಆರಂಭಿಕ ರೋಗಲಕ್ಷಣಗಳಿಂದ ನೀವು ಎಚ್ಚಡಿಕೆಗೊಂಡರೆ, ಈ ರೋಗವನ್ನು ನಿವಾರಿಸಬಹುದು.