Summer Fruits: ಸಿಹಿ ಮತ್ತು ರಸಭರಿತ ಕಿತ್ತಳೆ ಖರೀದಿಸಲು ನಿಮಗಾಗಿ ಇಲ್ಲಿದೆ ಟಿಪ್ಸ್!

Sweet Orange Buying Tips: ಕಿತ್ತಳೆ ಹಣ್ಣು ಕೊಳ್ಳಲು ಮಾರುಕಟ್ಟೆಗೆ ಹೋದರೆ, ಹುಳಿ ಅಥವಾ ಕಹಿ ಕಿತ್ತಳೆ ಮಿಕ್ಸ್ ಆಗಿ ಸಿಗುತ್ತಿದೆ. ಹಾಗಾದರೆ ಮಾರುಕಟ್ಟೆಯಲ್ಲಿ ನೀವು ಸಿಹಿ ಮತ್ತು ರಸಭರಿತವಾದ ಕಿತ್ತಳೆಗಳನ್ನು ಖರೀದಿಸುವುದು ಹೇಗೆ ಎಂಬುವುದರ ಬಗ್ಗೆ ಒಂದಷ್ಟು ಟಿಪ್ಸ್ ಈ ಕೆಳಗಿನಂತಿದೆ. 

First published:

  • 17

    Summer Fruits: ಸಿಹಿ ಮತ್ತು ರಸಭರಿತ ಕಿತ್ತಳೆ ಖರೀದಿಸಲು ನಿಮಗಾಗಿ ಇಲ್ಲಿದೆ ಟಿಪ್ಸ್!

    ಕಿತ್ತಳೆ ಹಣ್ಣು ಬಹಳಷ್ಟು ವಿಟಮಿನ್ ಸಿ ಹೊಂದಿರುವ ಹಣ್ಣು. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಕೊಲೆಸ್ಟ್ರಾಲ್, ಅಸ್ತಮಾ ಮತ್ತು ರಕ್ತದೊತ್ತಡದ ಸಮಸ್ಯೆಗಳಿಗೆ ಇದು ತುಂಬಾ ಉಪಯುಕ್ತವಾಗಿದೆ. ಹಾಗಾಗಿ ಕಿತ್ತಳೆ ಹಣ್ಣು ಕೊಳ್ಳಲು ಮಾರುಕಟ್ಟೆಗೆ ಹೋದರೆ, ಹುಳಿ ಅಥವಾ ಕಹಿ ಕಿತ್ತಳೆ ಮಿಕ್ಸ್ ಆಗಿ ಸಿಗುತ್ತಿದೆ. ಹಾಗಾದರೆ ಮಾರುಕಟ್ಟೆಯಲ್ಲಿ ನೀವು ಸಿಹಿ ಮತ್ತು ರಸಭರಿತವಾದ ಕಿತ್ತಳೆಗಳನ್ನು ಖರೀದಿಸುವುದು ಹೇಗೆ ಎಂಬುವುದರ ಬಗ್ಗೆ ಒಂದಷ್ಟು ಟಿಪ್ಸ್ ಈ ಕೆಳಗಿನಂತಿದೆ. Image : Canva

    MORE
    GALLERIES

  • 27

    Summer Fruits: ಸಿಹಿ ಮತ್ತು ರಸಭರಿತ ಕಿತ್ತಳೆ ಖರೀದಿಸಲು ನಿಮಗಾಗಿ ಇಲ್ಲಿದೆ ಟಿಪ್ಸ್!

    ಬೇಸಿಗೆ ಕಾಲದಲ್ಲಿ ವಿವಿಧ ಹಣ್ಣುಗಳು ಮಾರುಕಟ್ಟೆಗೆ ಬರುತ್ತಿದೆ. ಇವುಗಳಲ್ಲಿ ಕಿತ್ತಳೆ ಹಣ್ಣು ಕೂಡ ಒಂದಾಗಿದೆ. ಈ ಹಣ್ಣು ವಿಟಮಿನ್ ಸಿಯಿಂದ ಸಮೃದ್ಧವಾಗಿದೆ. ವಿಶೇಷವೆಂದರೆ ಸಿಹಿ ಮತ್ತು ಹುಳಿ ರುಚಿ ಇರುವ ಈ ಹಣ್ಣನ್ನು ಎಲ್ಲಾ ವಯಸ್ಸಿನವರು ತಿನ್ನಲು ಇಷ್ಟಪಡುತ್ತಾರೆ. ವೆಬ್ಎಮ್ಡಿ ಪ್ರಕಾರ, ವಿಟಮಿನ್ ಸಿ ಜೊತೆಗೆ, ಕಿತ್ತಳೆ ಪೊಟ್ಯಾಸಿಯಮ್ನಲ್ಲಿ ಸಮೃದ್ಧವಾಗಿದೆ, ಇದು ಅಧಿಕ ರಕ್ತದೊತ್ತಡ ಮತ್ತು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತದೆ. ಇದಲ್ಲದೇ ಈ ಹಣ್ಣು ಮೂತ್ರಪಿಂಡದ ಕಲ್ಲುಗಳ ಸಮಸ್ಯೆಯನ್ನು ನಿವಾರಿಸುತ್ತದೆ. Image : Canva

    MORE
    GALLERIES

  • 37

    Summer Fruits: ಸಿಹಿ ಮತ್ತು ರಸಭರಿತ ಕಿತ್ತಳೆ ಖರೀದಿಸಲು ನಿಮಗಾಗಿ ಇಲ್ಲಿದೆ ಟಿಪ್ಸ್!

    ಕಿತ್ತಳೆ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ನಮ್ಮ ಜೀವಕೋಶಗಳನ್ನು ಹಾನಿಯಿಂದ ರಕ್ಷಿಸುತ್ತದೆ. ದೇಹದಲ್ಲಿ ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ರಕ್ತಹೀನತೆ ಹೊಂದಿರುವ ಜನರು, ಅವರ ದೇಹದಲ್ಲಿ ಕಬ್ಬಿಣಾಂಶ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ. ಸೂಕ್ಷ್ಮಜೀವಿಗಳ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ವಯಸ್ಸಾದ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ ಮತ್ತು ದೃಷ್ಟಿ ಸುಧಾರಿಸಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೇ, ಕ್ಯಾನ್ಸರ್ ಬರದಂತೆ ತಡೆಯುತ್ತದೆ. Image : Canva

    MORE
    GALLERIES

  • 47

    Summer Fruits: ಸಿಹಿ ಮತ್ತು ರಸಭರಿತ ಕಿತ್ತಳೆ ಖರೀದಿಸಲು ನಿಮಗಾಗಿ ಇಲ್ಲಿದೆ ಟಿಪ್ಸ್!

    ನಿಮ್ಮ ಆಹಾರದ ಜೊತೆಗೆ ಕಿತ್ತಳೆಯನ್ನು ಸೇರಿಸಿದರೆ, ನೀವು ಅನೇಕ ಅಪಾಯಕಾರಿ ಕಾಯಿಲೆಗಳಿಂದ ತಪ್ಪಿಸಿಕೊಳ್ಳಬಹುದು. ವಾಸ್ತವವಾಗಿ, ಜನರು ಆಗಾಗ್ಗೆ ಮಾರುಕಟ್ಟೆಗೆ ಹೋಗಿ ಕಿತ್ತಳೆ ಹಣ್ಣುಗಳನ್ನು ನೋಡಿಕೊಂಡು ಖರೀದಿಸುತ್ತಾರೆ. ಆದರೆ ಮನೆಗೆ ಬಂದು ಊಟಕ್ಕೆ ಕುಳಿತಾಗ ನಿಜಕ್ಕೂ ಕಿತ್ತಳೆ ಕೆಟ್ಟು ಹೋಗಿರುವ ವಿಚಾರ ಗೊತ್ತಾಗುತ್ತದೆ. ಅನೇಕ ಕಿತ್ತಳೆಗಳು ತುಂಬಾ ಕಹಿಯಾಗಿರುತ್ತವೆ. ಇದು ಹಲ್ಲಿನ ಸೂಕ್ಷ್ಮತೆಯನ್ನು ಹೆಚ್ಚಿಸುತ್ತದೆ ಮತ್ತು ಸಮಸ್ಯೆಗಳನ್ನು ಉಂಟುಮಾಡುತ್ತದೆ. Image : Canva

    MORE
    GALLERIES

  • 57

    Summer Fruits: ಸಿಹಿ ಮತ್ತು ರಸಭರಿತ ಕಿತ್ತಳೆ ಖರೀದಿಸಲು ನಿಮಗಾಗಿ ಇಲ್ಲಿದೆ ಟಿಪ್ಸ್!

    ಸದ್ಯ ಸಿಹಿ ಮತ್ತು ರಸಭರಿತವಾದ ಕಿತ್ತಳೆಗಳನ್ನು ಹೇಗೆ ಆಯ್ಕೆ ಮಾಡಿಕೊಳ್ಳುವುದು ಎಂದು ನಾವು ನಿಮಗೆ ತಿಳಿಸುತ್ತೇವೆ. ಸಾಮಾನ್ಯವಾಗಿ ಕಚ್ಚಾ ಕಿತ್ತಳೆಗಳನ್ನು ಖರೀದಿಸಲಾಗುವುದಿಲ್ಲ. ಆದರೆ ಇದು ಆಕರ್ಷಕವಾಗಿ ಕಾಣದಿದ್ದರೂ, ಇದು ಉತ್ತಮ ರುಚಿ ಹೊಂದಿರುತ್ತದೆ ಎಂದು ನಿಮಗೆ ತಿಳಿದಿದ್ಯಾ? ವಾಸ್ತವವಾಗಿ, ಈ ಕಿತ್ತಳೆಗಳು ಒಳಗೆ ರಸಭರಿತ ಮತ್ತು ಸಿಹಿಯಾಗಿರುತ್ತವೆ. Image : Canva

    MORE
    GALLERIES

  • 67

    Summer Fruits: ಸಿಹಿ ಮತ್ತು ರಸಭರಿತ ಕಿತ್ತಳೆ ಖರೀದಿಸಲು ನಿಮಗಾಗಿ ಇಲ್ಲಿದೆ ಟಿಪ್ಸ್!

    ನೀವು ಕಿತ್ತಳೆ ಹಣ್ಣು ಖರೀದಿಸಲು ಹೋದಾಗ, ಕಿತ್ತಳೆಯನ್ನು ಆರಿಸಿ ಮತ್ತು ಅದರ ತೂಕವನ್ನು ಪರಿಶೀಲಿಸಿ. ಕಿತ್ತಳೆ ತಿನ್ನಲು ಭಾರ ಅನಿಸಿದರೆ ಮತ್ತು ಗಟ್ಟಿಯಾಗಿದ್ದರೆ ಕಿತ್ತಳೆ ಸಿಹಿಯಾಗಿರುತ್ತದೆ. ಅದು ಪ್ರೆಸ್ ಆಗದೇ ಗಟ್ಟಿಯಾಗಿದ್ದರೆ, ಅದು ಕಚ್ಚಾ ಹಣ್ಣಾಗಿದೆ. Image : Canva

    MORE
    GALLERIES

  • 77

    Summer Fruits: ಸಿಹಿ ಮತ್ತು ರಸಭರಿತ ಕಿತ್ತಳೆ ಖರೀದಿಸಲು ನಿಮಗಾಗಿ ಇಲ್ಲಿದೆ ಟಿಪ್ಸ್!

    ಕಿತ್ತಳೆ ಸಿಪ್ಪೆ ದಪ್ಪವಾಗಿದ್ದರೆ, ಅದು ಹುಳಿಯಾಗಿರಬಹುದು. ಅಷ್ಟೇ ಅಲ್ಲ ಕಿತ್ತಳೆ ಹಣ್ಣಿನ ಸಿಪ್ಪೆಯ ಮೇಲೆ ಕೆಲವು ಚುಕ್ಕೆಗಳಿದ್ದರೆ ಅದನ್ನು ಖರೀದಿಸಲೇಬೇಡಿ. ಅವು ಒಳಗೆ ಕೊಳೆತು ಹೋಗಿರುತ್ತದೆ. ನೀವು ತಾಜಾ ಹಣ್ಣುಗಳನ್ನು ಕೊಳ್ಳಲು ಬಯಸಿದರೆ, ಸಿಪ್ಪೆಯನ್ನು ಉಜ್ಜಿ. ಕೈಗೆ ಎಣ್ಣೆ ಅನಿಸಿದರೆ ಅದು ತಾಜಾವಾಗಿರುತ್ತದೆ. ಅದು ಒಣಗಿದ್ದರೆ, ಅದನ್ನು ಹಲವಾರು ದಿನಗಳವರೆಗೆ ಅಂಗಡಿಯಲ್ಲಿ ಇರಿಸಲಾಗಿದೆ ಎಂದು ಅರ್ಥಮಾಡಿಕೊಳ್ಳಿ. Image : Canva (Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಊಹೆಗಳನ್ನು ಆಧರಿಸಿದೆ. news18ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)

    MORE
    GALLERIES