Pregnancy Care: ಗರ್ಭಿಣಿಯರು ಈ ವಿಷಯಗಳ ಬಗ್ಗೆ ತಪ್ಪದೇ ಜಾಗ್ರತೆ ವಹಿಸಿ!

ಗರ್ಭಿಣಿಯರಿಗೆ ಕ್ರೇವಿಂಗ್ಸ್ ಹೆಚ್ಚು. ಆಹಾರದ ಕಡುಬಯಕೆ ಆಗುತ್ತಲೇ ಇರುತ್ತದೆ. ಆದರೆ ತಜ್ಞರ ಪ್ರಕಾರ, ಗರ್ಭಾವಸ್ಥೆಯಲ್ಲಿ ಕೆಲವು ಆಹಾರಗಳನ್ನು ತಿನ್ನೋದು ಸುರಕ್ಷಿತವಲ್ಲ ಎಂದಿದ್ದಾರೆ. ಇಂತಹ ಆಹಾರಗಳನ್ನು ಗರ್ಭಿಣಿಯರು ಉಪಯೋಗಿಸಬಾರದು. ಏಕೆಂದರೆ ಅವು ನಿಮ್ಮನ್ನು ಅನಾರೋಗ್ಯಕ್ಕೆ ಗುರಿಯಾಗಿಸಬಹುದು.

First published:

  • 18

    Pregnancy Care: ಗರ್ಭಿಣಿಯರು ಈ ವಿಷಯಗಳ ಬಗ್ಗೆ ತಪ್ಪದೇ ಜಾಗ್ರತೆ ವಹಿಸಿ!

    ಗರ್ಭಿಣಿಯರು ಹೆಚ್ಚಿನ ಕಾಳಜಿ ವಹಿಸುವುದು ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಸಹಕಾರಿ. ಗರ್ಭಾವಸ್ಥೆಯಲ್ಲಿ ಸಮತೋಲಿತ ಆಹಾರ ತಿನ್ನುವುದು, ಪೋಷಕಾಂಶಗಳು, ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧ ಆಹಾರ ತಿನ್ನೋದರಿಂದ ಮಗುವಿನ ಬೆಳವಣಿಗೆಗೆ ಸಹಕಾರಿ. ಅದಾಗ್ಯೂ ಗರ್ಭಿಣಿಯರು ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ.

    MORE
    GALLERIES

  • 28

    Pregnancy Care: ಗರ್ಭಿಣಿಯರು ಈ ವಿಷಯಗಳ ಬಗ್ಗೆ ತಪ್ಪದೇ ಜಾಗ್ರತೆ ವಹಿಸಿ!

    ಗರ್ಭಾವಸ್ಥೆಯಲ್ಲಿ ಇರುವಾಗ ಕ್ರೇವಿಂಗ್ಸ್ ಹೆಚ್ಚು. ಆಹಾರದ ಕಡುಬಯಕೆ ಆಗುತ್ತಲೇ ಇರುತ್ತದೆ. ಆದರೆ ತಜ್ಞರ ಪ್ರಕಾರ, ಗರ್ಭಾವಸ್ಥೆಯಲ್ಲಿ ಕೆಲವು ಆಹಾರಗಳ ಸೇವನೆ ಸುರಕ್ಷಿತವಲ್ಲ ಎಂದಿದ್ದಾರೆ. ಇಂತಹ ಆಹಾರಗಳನ್ನು ಗರ್ಭಿಣಿಯರು ತಿನ್ನಬಾರದು. ಏಕೆಂದರೆ ಅವು ನಿಮ್ಮನ್ನು ಅನಾರೋಗ್ಯಕ್ಕೆ ಗುರಿಯಾಗಿಸಬಹುದು.

    MORE
    GALLERIES

  • 38

    Pregnancy Care: ಗರ್ಭಿಣಿಯರು ಈ ವಿಷಯಗಳ ಬಗ್ಗೆ ತಪ್ಪದೇ ಜಾಗ್ರತೆ ವಹಿಸಿ!

    ಕೆಲವು ಆಹಾರಗಳನ್ನು ಗರ್ಭಾವಸ್ಥೆಯಲ್ಲಿ ತಿಂದರೆ ಅದು ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಹಾನಿ ಮಾಡುವ ಸಾಧ್ಯತೆ ಹೆಚ್ಚು. ಗರ್ಭಿಣಿಯರು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು. ಸೋಂಕು ಉಂಟು ಮಾಡುವ ಮತ್ತು ಬ್ಯಾಕ್ಟೀರಿಯಾ ಹೊಂದಿರುವ ಆಹಾರ ತಿನ್ನೋದನ್ನು ತಪ್ಪಿಸಿ.

    MORE
    GALLERIES

  • 48

    Pregnancy Care: ಗರ್ಭಿಣಿಯರು ಈ ವಿಷಯಗಳ ಬಗ್ಗೆ ತಪ್ಪದೇ ಜಾಗ್ರತೆ ವಹಿಸಿ!

    ಗರ್ಭಾವಸ್ಥೆಯಲ್ಲಿ ಮದ್ಯಪಾನ ಮಾಡೋದನ್ನು ಸಂಪೂರ್ಣವಾಗಿ ತಪ್ಪಿಸಿ. ಇಲ್ಲದಿದ್ದರೆ ಇದು ಅಕಾಲಿಕ ಹೆರಿಗೆ, ಬೌದ್ಧಿಕ ಅಸಾಮರ್ಥ್ಯ, ಜನ್ಮ ದೋಷ ಮತ್ತು ಕಡಿಮೆ ತೂಕದ ಶಿಶು ಹೊಂದುವ ಸಮಸ್ಯೆ ಹೆಚ್ಚಿಸುತ್ತದೆ. ಇನ್ನು ಗರ್ಭಾವಸ್ಥೆಯಲ್ಲಿ ಕೆಫಿನ್ ತಗೊಳೋದನ್ನು ತಪ್ಪಿಸಿ. ಇದು ಗರ್ಭಪಾತದ ಸಾಧ್ಯತೆ ಹೆಚ್ಚಿಸುತ್ತದೆ.

    MORE
    GALLERIES

  • 58

    Pregnancy Care: ಗರ್ಭಿಣಿಯರು ಈ ವಿಷಯಗಳ ಬಗ್ಗೆ ತಪ್ಪದೇ ಜಾಗ್ರತೆ ವಹಿಸಿ!

    ಕೆಫೀನ್ ಮೂತ್ರವರ್ಧಕ. ಇದು ದೇಹದಿಂದ ದ್ರವ ಹೊರ ಹಾಕುವಾಗ ನೀರು ಮತ್ತು ಕ್ಯಾಲ್ಸಿಯಂ ನಷ್ಟಕ್ಕೆ ಕಾರಣವಾಗುತ್ತದೆ. ಹಾಗಾಗಿ ಕೆಫೀನ್ ಪದಾರ್ಥ ಉಪಯೋಗಿಸುವ ಬದಲು ನೀರು, ಜ್ಯೂಸ್ ಮತ್ತು ಹಾಲು ಕುಡಿಯಿರಿ. ಗರ್ಭಾವಸ್ಥೆಯಲ್ಲಿ ಸ್ಯಾಕ್ರರಿನ್ ಬಳಕೆ ತಪ್ಪಿಸಿ. ಇದು ಜರಾಯು ದಾಟಬಹುದು ಮತ್ತು ಭ್ರೂಣದ ಅಂಗಾಂಶದಲ್ಲಿ ಉಳಿಯುವ ಸಾಧ್ಯತೆ ಇರುತ್ತದೆ.

    MORE
    GALLERIES

  • 68

    Pregnancy Care: ಗರ್ಭಿಣಿಯರು ಈ ವಿಷಯಗಳ ಬಗ್ಗೆ ತಪ್ಪದೇ ಜಾಗ್ರತೆ ವಹಿಸಿ!

    ನೀವು ತಿನ್ನುವ ಕೊಬ್ಬಿನ ಒಟ್ಟು ಪ್ರಮಾಣವು ಮೂವತ್ತು ಪ್ರತಿಶತ ಕಡಿಮೆ ಮಾಡಿ. ದಿನಕ್ಕೆ 300 ಮಿಗ್ರಾಂ ಅಥವಾ ಅದಕ್ಕಿಂತ ಕಡಿಮೆ ಕೊಲೆಸ್ಟ್ರಾಲ್ ಪದಾರ್ಥ ತಿನ್ನಲು ಮಿತಿಗೊಳಿಸಿ. ಹೆಚ್ಚಿನ ಪ್ರಮಾಣದ ಪಾದರಸ ಹೊಂದಿರುವ ಮೀನುಗಳನ್ನು ತಿನ್ನಬೇಡಿ.

    MORE
    GALLERIES

  • 78

    Pregnancy Care: ಗರ್ಭಿಣಿಯರು ಈ ವಿಷಯಗಳ ಬಗ್ಗೆ ತಪ್ಪದೇ ಜಾಗ್ರತೆ ವಹಿಸಿ!

    ಪಾದರಸ ಹೊಂದಿರುವ ಮೀನಿನ ಬಳಕೆ ಇದು ಮಗುವಿನ ಬೆಳವಣಿಗೆಯ ವಿಳಂಬ ಮತ್ತು ಮೆದುಳಿನ ಹಾನಿಗೆ ಕಾರಣವಾಗುತ್ತದೆ. ಹಸಿ ಮೀನುಗಳನ್ನು ತಿನ್ನೋದನ್ನು ತಪ್ಪಿಸಿ. ಗರ್ಭಾವಸ್ಥೆಯಲ್ಲಿ ಬೇಯಿಸದೇ ಇರುವ ಸಮುದ್ರಾಹಾರ ಮತ್ತು ಕಡಿಮೆ ಬೇಯಿಸಿದ ಕೋಳಿ ಮಾಂಸ ತಿನ್ನಬೇಡಿ.

    MORE
    GALLERIES

  • 88

    Pregnancy Care: ಗರ್ಭಿಣಿಯರು ಈ ವಿಷಯಗಳ ಬಗ್ಗೆ ತಪ್ಪದೇ ಜಾಗ್ರತೆ ವಹಿಸಿ!

    ತರಕಾರಿಗಳು ತಿನ್ನಲು ಸುರಕ್ಷಿತ. ಸಮತೋಲಿತ ಆಹಾರದ ಅಗತ್ಯ ಭಾಗವಾಗಿವೆ ತರಕಾರಿಗಳು. ಆದರೂ ಸಹ ನೀವು ಕಚ್ಚಾ ತರಕಾರಿಗಳ ಬಳಕೆಗೂ ಮೊದಲು ಅವುಗಳನ್ನು ಚೆನ್ನಾಗಿ ತೊಳೆದು ತಿನ್ನುವುದನ್ನು ರೂಢಿಸಿಕೊಳ್ಳಿ. ಇಲ್ಲದಿದ್ದರೆ ಇದರಲ್ಲಿರುವ ಕೆಲವು ಅಂಶಗಳು ಹಾನಿಯುಂಟು ಮಾಡುತ್ತವೆ.

    MORE
    GALLERIES