ಯಾವುದೇ ಸಂಬಂಧವಾಗಲಿ ನಿಷ್ಠೆ ಇಲ್ಲದಿದ್ದರೆ ಆ ಸಂಬಂಧ ಬಹು ಕಾಲ ಬಾಳುವುದಿಲ್ಲ. ಏನಪ್ಪ ಇವರು ನಿಷ್ಠೆಯಿಂದ ಇದ್ದ ಮಾತ್ರಕ್ಕೆ ಒಂದು ಸಂಬಂಧ ಉಳಿಯುತ್ತದೆಯೇ? ಇನ್ನು ನಾವು ಯಾವ ಕಾಲದಲ್ಲಿ ಇದ್ದೀವಿ ಅಂತ ನೀವು ಮೂಗು ಮುರಿಯಬಹುದು. ಆದರೆ ಕಾಲ ಎಷ್ಟೇ ಮುಂದುವರಿದರೂ, ನಾವು ಟೆಕ್ನಾಲಜಿ ಯುಗದಲ್ಲಿ ಇದ್ದರೂ ನಿಷ್ಠೆ ಎಂಬುದು ಒಂದು ಸಂಬಂಧ ದೀರ್ಘ ಕಾಲ ಉಳಿಯುವ ರೀತಿ ಮಾಡುವ ಏಕೈಕ ಅಂಶ ಎಂದು ಹೇಳಬಹುದು.
ಗಡಿಗಳು: ನಮ್ಮ ಗಡಿಗಳೊಂದಿಗೆ ನಾವು ಇರುವುದು ಯಾವಾಗಲು ಮುಖ್ಯ. ನಮ್ಮ ಲಿಮಿಟ್ಸ್ ಗಳಲ್ಲಿ ನಾವಿರುವುದು ಮತ್ತು ನಿಮ್ಮ ಸಂಗಾತಿಯ ಗಡಿಗಳನ್ನು ಗೌರವಿಸುವುದು ನಿಷ್ಠೆಯ ಮತ್ತೊಂದು ನಿರ್ಣಾಯಕ ಅಂಶವಾಗಿದೆ. ಇದರರ್ಥ ಇಷ್ಟೆ ನಿಮ್ಮ ಸಂಬಂಧದಲ್ಲಿ ಯಾವುದು ಸ್ವೀಕಾರಾರ್ಹ ಮತ್ತು ಸ್ವೀಕಾರಾರ್ಹವಲ್ಲದ ನಡವಳಿಕೆಯ ಬಗ್ಗೆ ಸ್ಪಷ್ಟವಾಗಿರಬೇಕಾಗಿರುತ್ತದೆ. ನಮ್ಮ ಲಿಮಿಟ್ಸ್ ಗಳಲ್ಲಿ ನಾವಿಲ್ಲದೇ ಹೋದರೆ ಸಂಬಂಧ ಬಹು ಕಾಲ ಉಳಿಯುವುದು ದುಸ್ತರ.
ಬೆಂಬಲ: ಜೀವನದಲ್ಲಿ ಏರಿಳಿತಗಳು ಸರ್ವೆ ಸಾಮಾನ್ಯ. ಆದರೆ ಆ ಏರಿಳಿತಗಳು ನಿಮ್ಮ ಅಥವಾ ನಿಮ್ಮ ಸಂಗಾತಿಯ ಜೀವನದಲ್ಲಿ ಬಂದಾಗ ಒಬ್ಬರಿಗೊಬ್ಬರು ಬೆಂಬಲವಾಗಿ ನಿಲ್ಲುವುದು ಒಂದು ಸಂಬಂಧದಲ್ಲಿ ಬಹಳ ಮುಖ್ಯ. ಯಾವುದೇ ಸಮಯದಲ್ಲಿ ನಿಮ್ಮ ಸಂಗಾತಿಯನ್ನು ಬೆಂಬಲಿಸುವುದು ಸಹ ನಿಷ್ಠೆಗೆ ಅತ್ಯಗತ್ಯ. ಇದರರ್ಥ ಅವರು ನಿಮ್ಮ ಅಗತ್ಯಗಳಿಗೆ ಮತ್ತು ನೀವು ಅವರ ಅಗತ್ಯಗಳಿಗೆ ಸ್ಪಂದಿಸುವುದು ಮತ್ತು ಬೆಂಬಲಿಸುವುದು ಸಂಬಂಧದ ನಿಷ್ಠೆಗೆ ಪೂರಕವಾಗಿರುತ್ತದೆ.