Winter Wedding: ಡಿಸೆಂಬರ್ ಚಳಿಯಲ್ಲಿ ಮದುವೆಯಾಗೋ ಪ್ಲಾನ್ ಇದ್ಯಾ? ಈ ಸ್ಥಳಗಳು ಇದಕ್ಕೆ ಹೇಳಿ ಮಾಡಿಸಿದಂತಿದೆ ನೋಡಿ
ಮದುವೆ ಪ್ರತಿಯೊಬ್ಬರ ಜೀವನದ ಪ್ರಮುಖ ಭಾಗ. ಹಾಗಾಗಿ ಅನೇಕರು ತಮಗೆ ಬೆಸ್ಟ್ ಅನಿಸುವ ಸ್ಥಳದಲ್ಲಿ ವಿವಾಹವಾಗಬೇಕೆಂದು ಆಸೆ ಪಡುತ್ತಾರೆ. ಅದರಂತೆ ಚಳಿಗಾಲದ ಸಮಯದಲ್ಲಿ ಮದುವೆಗೆ ಬೆಸ್ಟ್ ಎನಿಸುವ ಭಾರತದ ಏಳು ಪ್ರವಾಸಿ ತಾಣಗಳ ಡೀಟೇಲ್ಸ್ ಹೀಗಿದೆ.
ಕೇರಳ : ದೇವರ ನಾಡು ಕೇರಳ ಎಲ್ಲ ಪ್ರವಾಸಿಗರ ನೆಚ್ಚಿನ ಸ್ಥಳವಾಗಿದೆ. ಇಲ್ಲಿಯ ಪ್ರಕೃತಿ ಸೌಂದರ್ಯ ಅನೇಕ ಪ್ರವಾಸಿಗರು ಮಾರು ಹೋಗುತ್ತಾರೆ. ಮುನ್ನಾರ್ನಲ್ಲಿನ ಚಹಾ ತೋಟಗಳು, ವರ್ಕಲಾ ಮತ್ತು ಕೋವಲಂನಲ್ಲಿನ ಬೀಚ್, ಅಲೆಪ್ಪಿಯಲ್ಲಿರುವ ರೋಮ್ಯಾಂಟಿಕ್ ಹಿನ್ನೀರು ಪ್ರೇಮಿಗಳನ್ನು ಮತ್ತಷ್ಟು ಹತ್ತಿರ ಸೆಳೆಯುತ್ತದೆ.
2/ 6
ಖಜುರಹೋ, ಮಧ್ಯಪ್ರದೇಶ - ವಿವಾಹವಾಗುವ ಪ್ರೇಮಿಗಳಿಗೆ ಖಜುರಹೋ ಸ್ಥಳ ಕೂಡ ಒಂದು. ಮಧ್ಯಪ್ರದೇಶದ ಬುಂದೇಲ್ಖಂಡ್ ಪ್ರದೇಶದ ಖಜುರಾಹೊ ಭಾರತದ ವಸ್ತು ಶಿಲ್ಪತೆಗೆ ಹೆಸರುವಾಸಿಯಾಗಿದೆ. ಮಧ್ಯಕಾಲೀನ ಹಿಂದೂ ದೇವಾಲಯಗಳ ಅತಿ ದೊಡ್ಡ ಗುಂಪು. ಇದು ಇಲ್ಲಿನ ಶೃಂಗಾರಮಯ ಶಿಲ್ಪಕಲೆಗಳಿಗೆ ಹೆಸರುವಾಸಿಯಾಗಿದೆ.
3/ 6
ಋಷಿಕೇಶ, ಉತ್ತರಾಖಂಡ : ಪವಿತ್ರ ಗಂಗಾ ನದಿಯೊಂದಿಗೆ ನಿಮ್ಮ ಪ್ರೇಮಿ ಜೊತೆ ಪ್ರತಿಜ್ಞೆಗಳನ್ನು ವಿನಿಮಯ ಮಾಡಿಕೊಳ್ಳುವುದಕ್ಕಿಂತ ಹೆಚ್ಚಿನ ಆಧ್ಯಾತ್ಮಿಕ ಬೇರೊಂದಿಲ್ಲ. ಸಂಪ್ರದಾಯದ ರೀತಿಯಲ್ಲಿ ಮದುವೆಯಾಗಲು ಋಷಿಕೇಶ ಒಳ್ಳೆಯ ಜಾಗ ಎಂದರೆ ತಪ್ಪಾಗಲಾರದು.
4/ 6
ಶಿಮ್ಲಾ, ಹಿಮಾಚಲ ಪ್ರದೇಶ- ಹಿಮದಿಂದ ಆವೃತವಾದ ಪರ್ವತ ಶ್ರೇಣಿಗಳು ಮತ್ತು ರಮಣೀಯ ಭೂದೃಶ್ಯಗಳೊಂದಿಗೆ, ಶಿಮ್ಲಾ ಭಾರತದಲ್ಲಿ ಜನಪ್ರಿಯ ಚಳಿಗಾಲದ ತಾಣವಾಗಿದೆ. ಸುಂದರವಾದ ಪರ್ವತ ಶ್ರೇಣಿಗಳು ಬೇರೆಯೇ ಅನುಭವ ನೀಡುತ್ತದೆ.
5/ 6
ಗೋವಾ : ಗೋವಾ ಪ್ರವಿಸಿಗರ ನೆಚ್ಚಿನ ತಾಣಗಳಲ್ಲಿ ಒಂದು. ಅನೇಕರು ಗೋವಾಗೆ ಭೇಟಿ ನೀಡುತ್ತಾರೆ. ಸಮುದ್ರ ಕಿನಾರೆ ಬಳಿ ಎಂಜಾಯ್ ಮಾಡುತ್ತಾರೆ. ಅದರಲ್ಲೂ ವಿವಾಹವಾಗಲು ಮುಂದಾಗುವ ಪ್ರೇಮಿಗಳಿಗೆ ಗೋವಾ ಪ್ರವಾಸಿ ತಾಣ ಬೆಸ್ಟ್.
6/ 6
ಜೋಧಪುರ್, ರಾಜಸ್ಥಾನ : ವಿವಾಹವಾಗಲು ಸೂಕ್ತವಾದ ಸ್ಥಳಗಳಲ್ಲಿ ರಾಜಸ್ಥಾನದ ಜೋಧಪುರ್ ಒಂದು. ಉಮೈದ್ ಭವನ, ರಣಬಂಕಾ ಎಂಬ ಐಷಾರಾಮಿ ಹೋಟೆಲ್ ಗಳಿದ್ದು, ಅಲ್ಲಿನ ವಾತಾವರಣದ ಜತೆಗೆ ರುಚಿಕರವಾದ ರಾಜಸ್ಥಾನಿ ಪಾಕಪದ್ಧತಿಯೊಂದಿಗೆ ರಾಜಮನೆತನದ ರೀತಿಯಲ್ಲಿ ವಿವಾಹವಾಗಬಹುದು.