ಈ ಹಿಂದಿನ ಜೀವನಶೈಲಿಗೆ ಹೋಲಿಸಿದರೆ ಇಂದು ನಮ್ಮ ಜೀವನ ಪದ್ಧತಿ ಸಾಕಷ್ಟು ಬದಲಾಗಿದೆ. ಒಂದಾರ್ಥದಲ್ಲಿ ಯಾಂತ್ರಿಕ ಜೀವನಕ್ಕೆ ಒಗ್ಗಿಕೊಂಡಿದ್ದೇವೆ. ದೈಹಿಕ ವ್ಯಾಯಾಮದ ಕೊರತೆಯಿಂದಾಗಿ, ಹೆಚ್ಚಿನ ಜನರು ಇಂದು ಅನೇಕ ರೋಗಗಳಿಂದ ಬಳಲುತ್ತಿದ್ದಾರೆ. ಈ ಕಾಯಿಲೆಗಳಲ್ಲಿ ಪ್ರಮುಖವಾದವು ಎಂದರೆ ಹೃದಯ ಸಂಬಂಧಿತ ಕಾಯಿಲೆಗಳಾದ ಅಧಿಕ ರಕ್ತದೊತ್ತಡ, ಕಡಿಮೆ ರಕ್ತದೊತ್ತಡ, ಪಾರ್ಶ್ವವಾಯು, ಹೃದಯಾಘಾತ ಮತ್ತು ಹೆಚ್ಚಿನ ಕೊಲೆಸ್ಟ್ರಾಲ್.
ವ್ಯಾಯಾಮದ ಕೊರತೆ, ಹೆಚ್ಚು ಕೊಬ್ಬಿನ ಆಹಾರವನ್ನು ಸೇವನೆಯಿಂದ ನಮ್ಮ ರಕ್ತ ಅಪಧಮನಿಗಳಲ್ಲಿ ಕೊಲೆಸ್ಟ್ರಾಲ್ ಮಟ್ಟವು ಹೆಚ್ಚಾಗುತ್ತದೆ. ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾದಾಗ ರಕ್ತದ ಹರಿವಿಗೆ ತೊಂದರೆಯಾಗುತ್ತದೆ. ಅಧಿಕ ಕೊಲೆಸ್ಟ್ರಾಲ್ ಕಾರಣದಿಂದಾಗಿ ಹೃದಯಕ್ಕೆ ರಕ್ತವನ್ನು ಪೂರೈಸುವ ಅಪಧಮನಿಗಳು ಕುಗ್ಗಲು ಪ್ರಾರಂಭಿಸಿದರೆ, ಹೆಚ್ಚಿನ ಒತ್ತಡವು ಹೃದಯದ ಮೇಲೆ ಬೀಳುತ್ತವೆ. ಅಂತಿಮವಾಗಿ ಹೃದಯಾಘಾತ ಸೇರಿದಂತೆ ಇನ್ನಿತರ ಹೃದಯ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ.
ಇದರ ನಂತರ ಅದನ್ನು ತಣ್ಣಗಾಗಿಸಿ. ಆ ಬಳಿಕ ಮೂರು ಕಪ್ ಶುದ್ಧ ಜೇನುತುಪ್ಪವನ್ನು ಸೇರಿಸಿ ಗಾಜಿನ ಬಾಟಲಿಯಲ್ಲಿ ತುಂಬಿಸಿಡಿ. ಇದನ್ನು ಎರಡು ಚಮಚದಂತೆ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಬೆಚ್ಚಗಿನ ನೀರಿನಲ್ಲಿ ಬೆರೆಸಿ ಕುಡಿಯಿರಿ. ಈ ಮನೆಮದ್ದು ನಿಮ್ಮ ಹೃದಯ ಸಂಬಂಧಿ ರೋಗಗಳನ್ನು ಗುಣಪಡಿಸುತ್ತದೆ. ಕೊಲೆಸ್ಟ್ರಾಲ್ ಅನ್ನು ಸಹ ಕಡಿಮೆ ಮಾಡುತ್ತದೆ. ಇದರ ಹೊರತಾಗಿ ನೀವು ಆಹಾರಗಳನ್ನು ಹೆಚ್ಚಾಗಿ ಸೇವಿಸಿ.