Weight Loss Tips: ಬೆಳಗ್ಗೆ ಈ ಹಣ್ಣುಗಳನ್ನು ತಿಂದ್ರೆ ಸಣ್ಣಗಾಗ್ತೀರಂತೆ
Fruits For Weight Loss: ತೂಕ ಇತ್ತೀಚಿನ ದಿನಗಳಲ್ಲಿ ಅತಿದೊಡ್ಡ ಸಮಸ್ಯೆ. ನೀವು ತೂಕ ಇಳಿಸಿಕೊಳ್ಳಲು ಕಷ್ಟಪಡುತ್ತಿದ್ದರೆ, ಕಡ್ಡಾಯವಾಗಿ ವಿಶ್ರಾಂತಿ ಪಡೆಯುವುದು ಸಹ ಮುಖ್ಯ. ಇದುನಿಮಗೆ ಏನೂ ಪ್ರಯತ್ನ ಮಾಡದಿದ್ದರೆ ಕಿಲೋಗಳನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಹಾಗೆಯೇ ಕೆಲ ವಿಧಾನಗಳು ನಿಮ್ಮ ತೂಕವನ್ನು ಇಳಿಸಲು ಸಹಾಯ ಮಾಡುತ್ತದೆ. ಕೆಲ ಹಣ್ಣುಗಳನ್ನು ಬೆಳಗ್ಗೆ ತಿನ್ನುವುದು ತೂಕ ಇಳಿಸಲು ಸಹಕಾರಿ. ಹಾಗಾದ್ರೆ ಅದು ಯಾವ ಹಣ್ಣುಗಳು ಎಂಬುದು ಇಲ್ಲಿದೆ.
ಹಣ್ಣುಗಳಲ್ಲಿ ಹೆಚ್ಚಿನ ಪೋಷಕಾಂಶಗಳಿದ್ದು ದೇಹಕ್ಕೆ ಅಗತ್ಯವಾದ ಖನಿಜಗಳನ್ನು ಒದಗಿಸುತ್ತದೆ. ಇವುಗಳ ಸೇವನೆಯಿಂದ ತೂಕ ಕಡಿಮೆಯಾಗುವುದಲ್ಲದೇ ಆರೋಗ್ಯವೂ ವೃದ್ಧಿಯಾಗುತ್ತದೆ.
2/ 9
ಬಾಳೆಹಣ್ಣಿನಲ್ಲಿ ಪೌಷ್ಟಿಕಾಂಶಗಳ ಪ್ರಮಾಣ ತುಂಬಾ ಇದ್ದು, ಇದರಲ್ಲಿ ಆಂಟಿ ಆಕ್ಸಿಡೆಂಟ್ ಅಂಶಗಳು ಹೆಚ್ಚಾಗಿ ಇರುವುದರಿಂದ ಹೊಟ್ಟೆ ಹಸಿವನ್ನು ನಿಯಂತ್ರಣ ಮಾಡುತ್ತದೆ.
3/ 9
ಬೆಣ್ಣೆಹಣ್ಣಿನಲ್ಲಿ ನೀರಿನಾಂಶ ಮತ್ತು ನಾರಿನಾಂಶವಿದ್ದು, ನಿಮ್ಮ ತೂಕ ಇಳಿಸಲು ಸಹಾಯ ಮಾಡುತ್ತದೆ.
4/ 9
ಪೇರಳೆ ಹಣ್ಣಿನಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ತುಂಬಾ ಕಡಿಮೆ ಇದ್ದು, ಮಧುಮೇಹಿಗಳಿಗೆ ಹಾಗೂ ತೂಕ ಇಳಿಸಲು ಪ್ರಯತ್ನಿಸುತ್ತಿರುವವರಿಗೆ ಸಹಕಾರಿಯಾಗಿದೆ.
5/ 9
ಡ್ರೈ ಫ್ರೂಟ್ಸ್ಗಳಲ್ಲಿ ಪೌಷ್ಟಿಕ ಅಂಶಗಳ ಪ್ರಮಾಣ ತುಂಬಾ ಇದೆ ಮತ್ತು ದೇಹದ ತೂಕವನ್ನು ಕಡಿಮೆ ಮಾಡುವ ಶಕ್ತಿ ಇದೆ.
6/ 9
ದಾಳಿಂಬೆ ಹಣ್ಣಿನಲ್ಲಿ ಆಂಟಿಆಕ್ಸಿಡೆಂಟ್ ಅಂಶಗಳು ಮತ್ತು ಖನಿಜಾಂಶಗಳ ಜೊತೆಗೆ ನಾರಿನ ಅಂಶ ಕೂಡ ಇದೆ. ಹಾಗೆಯೇ ಇದರಲ್ಲಿ ಕ್ಯಾಲೋರಿ ಕೂಡ ಕಡಿಮೆ ಇದ್ದು ತೂಕ ಕಡಿಮೆ ಮಾಡಲು ಉತ್ತಮ ಆಯ್ಕೆ.
7/ 9
ಸೀತಾಫಲದಲ್ಲಿ ಪ್ರೋಟಿನ್ ಅಂಶ ಮತ್ತು ನಾರಿನ ಅಂಶ ಇರುವುದರಿಂದ ಬಹಳ ಬೇಗನೆ ನಮ್ಮ ಹೊಟ್ಟೆ ತುಂಬುವಂತೆ ಮಾಡುತ್ತದೆ ಹಾಗೂ ಅನವಶ್ಯಕವಾಗಿ ತಿನ್ನದಂತೆ ತಡೆಯುತ್ತದೆ.
8/ 9
ದ್ರಾಕ್ಷಿ ಹಣ್ಣಿನಲ್ಲಿ ನಮ್ಮ ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನಾರಿನ ಅಂಶ ಮತ್ತು ಖನಿಜಾಂಶಗಳಿರುವುದರಿಂದ ತೂಕ ನಿಯಂತ್ರಣ ಮಾಡಲು ಸಹಾಯ ಮಾಡುತ್ತದೆ.
9/ 9
ವಿಟಮಿನ್ ಸಿ ಹೆಚ್ಚಿರುವ ಕಿತ್ತಳೆ ಹಣ್ಣಿನಲ್ಲಿ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವ ಸಾಮರ್ಥ್ಯವಿದೆ. ಇದನ್ನು ತಿನ್ನುವುದು ಸುಲಭವಾಗಿ ತೂಕ ಇಳಿಸಲು ಸಹಾಯಕಾರಿ.