ಪ್ರತಿಯೊಬ್ಬರೂ ಆಹಾರವನ್ನು ತ್ವರಿತವಾಗಿ ಬಿಸಿಮಾಡಲು ಮೈಕ್ರೋವೇವ್ ಅನ್ನು ಅವಲಂಬಿಸಿದ್ದಾರೆ. ನೀವು ಕೂಡ ಮೈಕ್ರೋವೇವ್ ಅನ್ನು ಬಳಸುತ್ತಿದ್ದೀರಾ? ಆದರೆ ಮೈಕ್ರೋವೇವ್ನಲ್ಲಿ ಎಲ್ಲಾ ಆಹಾರವನ್ನು ಬಿಸಿಮಾಡುವುದು ಅನಾರೋಗ್ಯವನ್ನುಂಟುಮಾಡುತ್ತದೆ ಎಂದು ನಿಮಗೆ ತಿಳಿದಿದ್ಯಾ? ಮೈಕ್ರೊವೇವ್ನಲ್ಲಿ ಬಿಸಿಮಾಡಿದಾಗ ಪೌಷ್ಟಿಕಾಂಶದ ಮೌಲ್ಯವನ್ನು ಕಳೆದುಕೊಂಡು ಕೆಲವು ಆಹಾರಗಳು ವಿಷಕಾರಿಯಾಗುತ್ತದೆ. ಅವು ಯಾವುದು ಎಂದು ತಿಳಿದುಕೊಳ್ಳೋಣ ಬನ್ನಿ.
ಬ್ರೆಡ್ ತಯಾರಿಸಿದಾಗ ಅದು ಚೆನ್ನಾಗಿ ಟೋಸ್ಟ್ ಆಗುತ್ತದೆ, ಬರ್ಗರ್ಗಳನ್ನು ಟೋಸ್ಟ್ ಮಾಡಿದ ಬ್ರೆಡ್ನಿಂದ ತಯಾರಿಸಲಾಗುತ್ತದೆ. ಆದರೆ ತಯಾರಾಗಿರುವ ಬರ್ಗರ್ ಅನ್ನು ಮನೆಗೆ ತಂದು ಮತ್ತೆ ಬಿಸಿ ಮಾಡಿದರೆ ಗಟ್ಟಿಯಾಗುತ್ತದೆ. ಬರ್ಗರ್ಗಳನ್ನು ಪದೇ ಪದೇ ಬಿಸಿ ಮಾಡುವುದರಿಂದ ಬರ್ಗರ್ನಲ್ಲಿರುವ ಬೆಣ್ಣೆ, ಮಾಂಸ ಮತ್ತು ಲೆಟಿಸ್ನ ಪೌಷ್ಟಿಕಾಂಶದ ಮೌಲ್ಯವನ್ನು ನಾಶಪಡಿಸುತ್ತದೆ.
ಮೀನಿನ ಬಗ್ಗೆ ನೆನಪಿಡಬೇಕಾದ ಒಂದು ವಿಚಾರವೆಂದರೆ, ಮೀನು ಬೇಯಿಸಿದ ದಿನವೇ ತಿನ್ನಬೇಕು. ಆ ದಿನ ತಿನ್ನದಿದ್ದರೂ, ನೀವು ಅದನ್ನು ಗ್ಯಾಸ್ನಲ್ಲಿ ಬಿಸಿ ಮಾಡಬಹುದು. ಆದರೆ ಮೈಕ್ರೋವೇವ್ನಲ್ಲಿ ಎಂದಿಗೂ ಬಿಸಿ ಮಾಡಬೇಡಿ. ಈ ಕಾರಣದಿಂದಾಗಿ, ಮೀನಿನ ಆಹಾರದ ಗುಣಮಟ್ಟವು ಸಂಪೂರ್ಣವಾಗಿ ನಾಶವಾಗುತ್ತದೆ. ತಾಜಾ ಮೀನುಗಳನ್ನು ಬೇಯಿಸಿ ತಿನ್ನಿರಿ. ಯಾವುದೇ ಆವಿಯಿಂದ ಬೇಯಿಸಿದ ಮೀನುಗಳನ್ನು ಮೈಕ್ರೊವೇವ್ನಲ್ಲಿ ಬೇಯಿಸಬಹುದು. ಆದರೆ ರಾತ್ರಿ ಹೊತ್ತು ಮೈಕ್ರೊವೇವ್ನಲ್ಲಿ ಬಿಸಿ ಮಾಡಬೇಡಿ.