ಬಹುಶಃ ಎಲ್ಲಾ ಮಕ್ಕಳು ಇಷ್ಟಪಟ್ಟು ತಿನ್ನೋ ತಿಂಡಿ ಅಂದ್ರೆ ಆಲೂಗೆಡ್ಡೆ ಚಿಪ್ಸ್. ಆದ್ರೆ ಈ ಚಿಪ್ಸ್ ನಲ್ಲಿ ಉಪಯೋಗವಾಗುವಂಥಾ ಯಾವ ಅಂಶವೂ ಇಲ್ಲ. ಎಣ್ಣೆ, ಉಪ್ಪು ಮತ್ತು ಆಲೂಗೆಡ್ಡೆಯ ಕಾರ್ಬೊಹೈಡ್ರೇಟ್ ಗಳು ಯಥೇಚ್ಛವಾಗಿ ಇರೋ ಚಿಪ್ಸ್ ಖಂಡಿತಾ ಆರೋಗ್ಯಕ್ಕೆ ಒಳ್ಳೆಯದಲ್ಲ. ಅದರ ಬದಲು ಮನೆಯಲ್ಲೇ ಮಾಡಿದ ಪಾಪ್ಕಾರ್ನ್ ಅಥವಾ ಸುಮ್ಮನೇ ಬೇಯಿಸಿದ ಆಲೂಗೆಡ್ಡೆ ಕೊಟ್ಟರೂ ಆದೀತು.