ತಜ್ಞರ ಪ್ರಕಾರ, ಕೆಲವು ಆಹಾರಗಳನ್ನು ಸೇವನೆ ಮಾಡದಿರುವ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ಡಯೆಟಿಷಿಯನ್, ಫ್ಯಾಟ್ ಟು ಸ್ಲಿಮ್ ನಿರ್ದೇಶಕಿ, ಪೌಷ್ಟಿಕತಜ್ಞೆ ಶಿಖಾ ಅಗರ್ವಾಲ್ ಶರ್ಮಾ ಅವರು ಹೇಳುವಂತೆ, ಮಧುಮೇಹಿಗಳು ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುವ ಆಹಾರವನ್ನು ಸೇವಿಸಬೇಕು. ನೀವು ದಿನನಿತ್ಯ ಸೇವಿಸುವ ಕೆಲವು ಪದಾರ್ಥಗಳು ರಕ್ತದಲ್ಲಿನ ಸಕ್ಕರೆಯ ತ್ವರಿತ ಏರಿಕೆಗೆ ಕಾರಣವಾಗಬಹುದು ಮತ್ತು ಅವುಗಳನ್ನು ತಪ್ಪಿಸಬೇಕು ಎಂದಿದ್ದಾರೆ.
ಡಾ.ಎ.ಎಸ್. ಶಿಖಾ ಅವರ ಪ್ರಕಾರ, ಬಾಳೆಹಣ್ಣು, ದ್ರಾಕ್ಷಿ, ಚೆರ್ರಿ, ಮಾವಿನ ಹಣ್ಣುಗಳಲ್ಲಿ ಸಾಕಷ್ಟು ಕಾರ್ಬೋಹೈಡ್ರೇಟ್ಗಳು ಮತ್ತು ಸಕ್ಕರೆಯ ಅಂಶ ಇರುತ್ತದೆ. ಡಯಾಬಿಟಿಸ್ ಇರುವವರು ಈ ಹಣ್ಣುಗಳನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಇವು ನೈಸರ್ಗಿಕ ಸಿಹಿ ಅಂಶವನ್ನು ಒಳಗೊಂಡಿರುವ ಕಾರಣ, ಈ ಎಲ್ಲಾ ಹಣ್ಣುಗಳನ್ನು ಹೆಚ್ಚಿನ ಗ್ಲೈಸೆಮಿಕ್ ಇಂಡೆಕ್ಸ್ ಹಣ್ಣುಗಳು ಎಂದು ವರ್ಗೀಕರಿಸಲಾಗಿದೆ. ವಾಸ್ತವವಾಗಿ, ಹೆಚ್ಚಿನ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುವ ಆಹಾರಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ವೇಗವಾಗಿ ಹೆಚ್ಚಿಸುತ್ತವೆ.