ಮೊದಲೆಲ್ಲಾ ವಯಸ್ಸಾದ ನಂತರ ಸುಕ್ಕುಗಳು ಕಾಣಿಸಿಕೊಳ್ಳುತ್ತಿದ್ದವು. ಆದರೀಗ ವಯಸ್ಸಾಗುವ ಮುನ್ನವೇ ಅನೇಕ ಮಂದಿಗೆ ಮುಖದಲ್ಲಿ ಸುಕ್ಕುಗಳು ಕಾಣಿಸಿಕೊಳ್ಳಲು ಆರಂಭವಾಗಿದೆ. 30 ವರ್ಷ ದಾಟಿದರೆ ಸಾಕು, ಚರ್ಮದ ಸಡಿಲತೆ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಅಕಾಲಿಕ ಸುಕ್ಕುಗಳಿಂದ ವಯಸ್ಸಾದವರಂತೆ ನಿಮ್ಮ ತ್ವಚೆ ಕಾಣಬಹುದು. ನಾವು ದೇಹದ ಪ್ರತಿಯೊಂದು ಅಂಗಗಳನ್ನು ಹೇಗೆ ಕಾಳಜಿವಹಿಸುತ್ತೇವೋ ಅದೇ ರೀತಿ ಕೆಲವು ಬದಲಾಣೆಗಳನ್ನು ಮಾಡಿಕೊಳ್ಳುವ ಮೂಲಕ ಚರ್ಮದ ಸುಕ್ಕುಗಳಿಂದ ತಪ್ಪಿಸಿಕೊಳ್ಳಬೇಕು. ಅದು ಹೇಗೆ ಅಂತೀರಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ.
ಅನೇಕ ಮಂದಿ ಬೆಳಗ್ಗೆ ಬ್ರೇಕ್ಫಾಸ್ಟ್ ಆಗಿ ಬ್ರೇಡ್ ಅನ್ನು ತಿನ್ನುತ್ತಾರೆ. ಮೊದಲು ಈ ಅಭ್ಯಾಸವನ್ನು ಎಲ್ಲರೂ ಬಿಡಬೇಕು. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಅಗತ್ಯವಿದ್ದರೆ ಬಿಳಿ ಬ್ರೇಡ್ ಬದಲಿಗೆ ಕಂದು ಬ್ರೆಡ್ ಅಥವಾ ಮಲ್ಟಿಗ್ರೇನ್ ಬ್ರೆಡ್ ಅನ್ನು ತಿನ್ನಬಹುದು. (Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. news18ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)