ಸಕ್ಕರೆ: ಸಕ್ಕರೆಯು ಸಿರೊಟೋನಿನ್ ಮಟ್ಟವನ್ನು ಹೆಚ್ಚಿಸುತ್ತದೆ. ಸಾಮಾನ್ಯವಾಗಿ ಹೆಚ್ಚಿನ ಸಿರೊಟೋನಿನ್ ಮಟ್ಟವು ಆತಂಕವನ್ನು ಹೆಚ್ಚಿಸುತ್ತದೆ. ಕಡಿಮೆ ಸಕ್ಕರೆ ತಿನ್ನುವುದರಿಂದ ಆತಂಕವನ್ನು ಕಡಿಮೆ ಮಾಡಬಹುದು. ಅಲ್ಲದೇ, ಮಕ್ಕಳಲ್ಲಿ ಹೆಚ್ಚಿನ ಸಕ್ಕರೆ ಸೇವನೆಯು ಎಡಿಎಚ್ಡಿಗೆ ಸಂಬಂಧಿಸಿದೆ. ಆದ್ದರಿಂದ ಮಕ್ಕಳಿಗೆ ಸಕ್ಕರೆ ಮಿಠಾಯಿಗಳು, ಲಾಲಿಪಾಪ್ಗಳು ಮತ್ತು ಚಾಕೊಲೇಟ್ಗಳನ್ನು ಕೊಡಿಸುವುದನ್ನು ಕಡಿಮೆ ಮಾಡಿ.
ಕಾಫಿ ಅಥವಾ ಟೀ : ಕಾಫಿ, ಟೀ, ಚಾಕೊಲೇಟ್ ಅಥವಾ ಎನರ್ಜಿ ಡ್ರಿಂಕ್ ನಿಮ್ಮ ಇಂದ್ರಿಯಗಳನ್ನು ಶಮನಗೊಳಿಸಲು ಉತ್ತಮ ಆಯ್ಕೆಯಂತೆ ಕಾಣಿಸಬಹುದು. ಆದರೆ ಇವುಗಳನ್ನು ಸೇವಿಸಿದರೆ ಹಲವು ಆರೋಗ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಕೆಫೀನ್ ಸೇವನೆಯು ಅನಿಯಮಿತ ಹೃದಯ ಬಡಿತಗಳು, ಚಡಪಡಿಕೆ ಮತ್ತು ತಲೆನೋವುಗಳನ್ನು ಉಂಟುಮಾಡುವ ಮೂಲಕ ನಿಮ್ಮ ಆತಂಕದ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ತಿಳಿದುಬಂದಿದೆ. ಸೋಡಾ, ಸಂಸ್ಕರಿಸಿದ ಹಣ್ಣಿನ ಜ್ಯೂಸ್, ಡಯಟ್ ಕೋಕ್ ಇತ್ಯಾದಿಗಳನ್ನು ತಪ್ಪಿಸಿ.