Dog: ಅಪ್ಪಿತಪ್ಪಿಯೂ ನಿಮ್ಮ ನೆಚ್ಚಿನ ನಾಯಿಗೆ ಈ ಐದು ಆಹಾರಗಳನ್ನು ನೀಡಲೇಬೇಡಿ!
ಮನೆ ಮಾಲೀಕರು ಶ್ವಾನಗಳಿಗೆ ವಿಶೇಷ ಆಹಾರಗಳನ್ನು ತಂದು ಅವುಗಳಿಗೆ ನೀಡುತ್ತಾರೆ. ಇದು ಶ್ವಾನಗಳಿಗೂ ಪ್ರೀತಿಯೇ. ಆದರೆ, ಕೆಲವೊಮ್ಮೆ ಮನುಷ್ಯರ ತಿನ್ನುವ ಆಹಾರಗಳು ನಾಯಿಗಳು ತಿಂದರೆ ಫುಡ್ ಪಾಯಿಸನ್ ಆಗುವ ಸಾಧ್ಯತೆ ಇರುತ್ತದೆ.
ಕೆಲವರು ಸಾಕಿದ ಶ್ವಾನವನ್ನು ಅತಿಯಾಗಿ ಪ್ರೀತಿ ಮಾಡುತ್ತಾರೆ. ತಾವು ತಿನ್ನುವ ವಸ್ತುಗಳನ್ನು ಅವುಗಳ ಜೊತೆ ಹಂಚಿಕೊಳ್ಳುತ್ತಾರೆ.
2/ 16
ಶ್ವಾನ ಕೂಡ ಮನುಷ್ಯರನ್ನು ಅತಿಯಾಗಿ ಪ್ರೀತಿ ಮಾಡುತ್ತವೆ. ಹೀಗಾಗಿ, ಮನೆ ಮಾಲೀಕ ನೀಡಿದ ಎಲ್ಲ ಆಹಾರಗಳನ್ನು ಅವು ಸೇವನೆ ಮಾಡುತ್ತವೆ.
3/ 16
ಇನ್ನು, ಮನೆ ಮಾಲೀಕರು ಶ್ವಾನಗಳಿಗೆ ವಿಶೇಷ ಆಹಾರಗಳನ್ನು ತಂದು ಅವುಗಳಿಗೆ ನೀಡುತ್ತಾರೆ. ಇದು ಶ್ವಾನಗಳಿಗೂ ಪ್ರೀತಿಯೇ.
4/ 16
ಆದರೆ, ಕೆಲವೊಮ್ಮೆ ಮನುಷ್ಯರ ತಿನ್ನುವ ಆಹಾರಗಳು ನಾಯಿಗಳು ತಿಂದರೆ ಫುಡ್ ಪಾಯಿಸನ್ ಆಗುವ ಸಾಧ್ಯತೆ ಇರುತ್ತದೆ.
5/ 16
ಕೆಳಗೆ ತೋರಿಸಿದ ಈ ಐದು ಆಹಾರಗಳು ನಾಯಿಗಳಿಗೆ ವಿಷವಾಗಿ ಬದಲಾಗಬಹುದು. ಆ ಬಗ್ಗೆ ಇಲ್ಲಿದೆ ಮಾಹಿತಿ.
6/ 16
ಚಾಕೋಲೇಟ್: ಸಾಮಾನ್ಯವಾಗಿ ಮನುಷ್ಯರು ಚಾಕೋಲೇಟ್ ತಿನ್ನುವಾಗ ಅದನ್ನು ಶ್ವಾನಕ್ಕೂ ಉಣಿಸುತ್ತಾರೆ. ಆದರೆ, ಇದು ತುಂಬಾನೇ ಅಪಾಯಕಾರಿ ಎಂಬುದು ಅನೇಕರಿಗೆ ಗೊತ್ತಿಲ್ಲ. ಕೆಲವರು ಇದನ್ನು ಸುಳ್ಳು ಎನ್ನುತ್ತಾರೆ. ಆದರೆ, ಇದಕ್ಕೆ ವೈಜ್ಞಾನಿಕ ಕಾರಣವಿದೆ.
7/ 16
ಚಾಕೋಲೇಟ್ ನಲ್ಲಿ methylxanthines ಅಂಶ ಇರುತ್ತದೆ. ಇದು ಶ್ವಾನಗಳಿಗೆ ವಿಷಕಾರಿಯಾಗಿದೆ. ಅಲ್ಲದೆ, ಇವು ಶ್ವಾನಗಳ ಚಯಾಪಚಯ ಪ್ರಕ್ರಿಯೆ ಮೇಲೂ ತೊಂದರೆ ಉಂಟು ಮಾಡಬಹುದು. ಹೀಗಾಗಿ, ಶ್ವಾನಗಳಿಗೆ ಒಂದು ಸಣ್ಣ ಚಾಕೋಲೇಟ್ ತುಂಡು ಕೂಡ ಸಮಸ್ಯೆ ಆಗಬಹುದು.
8/ 16
ಆಲ್ಕೋಹಾಲ್: ಮದ್ಯ ಸೇವನೆ ಮನುಷ್ಯರೆಗೆ ಹೆಚ್ಚು ಹಾನಿಕಾರಕ. ಹೀಗಿರುವಾಗ ಸೂಕ್ಷ್ಮ ಸಂವೇದನೆ ಹೊಂದಿರುವ ಶ್ವಾನಗಳಿಗೆ ಇದು ಮತ್ತೂ ಅಪಾಯಕಾರಿ.
9/ 16
ಸಾಮಾನ್ಯವಾಗಿ, ಶ್ವಾನಗಳು ವೈನ್ ಅಥವಾ ಆಲ್ಕೋಹಾಲ್ ಸೇವನೆ ಮಾಡುವುದು ನಿಮಗೆ ಫನ್ ರೀತಿಯಲ್ಲಿ ಕಾಣಬಹುದು. ಆದರೆ, ಇದು ಶ್ವಾನಗಳ ದೇಹಕ್ಕೆ ಅಪಾಯ ತಂದೊಡ್ಡಬಹುದು ಎಂಬುದನ್ನು ನೀವು ಗಮನದಲ್ಲಿಟ್ಟುಕೊಳ್ಳಬೇಕು.
10/ 16
ಮದ್ಯ ಸೇವನೆಯಿಂದ ಶ್ವಾನಗಳು ವಾಂತಿ ಮಾಡಿಕೊಳ್ಳಬಹುದು. ಅಲ್ಲದೆ, ದೇಹದ ಉಷ್ಟಾಂಶತೆ ಹೆಚ್ಚಾಗುವುದಲ್ಲದೆ, ಬಹು ಅಂಗಾಗ ವೈಫಲ್ಯ ಉಂಟಾಗಬಹುದು.
11/ 16
ಬೆಳ್ಳುಳ್ಳಿ ಮತ್ತು ಈರುಳ್ಳಿ: ಬೆಳ್ಳುಳ್ಳಿ ಹಾಗೂ ಈರುಳ್ಳಿಯನ್ನು ಶ್ವಾನಗಳಿಂದ ಸದಾ ದೂರದಲ್ಲಿಡುವುದು ಒಳಿತು.
12/ 16
ಈರುಳ್ಳಿಗಿಂತಲೂ ಬೆಳ್ಳುಳ್ಳಿ ತುಂಬಾನೇ ಅಪಾಯಕಾರಿ. ಇವೆರಡನ್ನು ನಿಮ್ಮ ಮನೆಯ ನಾಯಿ ಸೇವನೆ ಮಾಡಿದರೆ ಅವುಗಳಿಗೆ ವೀಕ್ ನೆಸ್ ಉಂಟಾಗಬಹುದು.
13/ 16
ಕಾಫಿ: ಮುಂಜಾನೆ ಎದ್ದ ಕೂಡಲೇ ಮನುಷ್ಯರು ಕಾಫಿ ಕುಡಿಯುತ್ತಾರೆ. ಕೆಲವೊಮ್ಮೆ ಇದನ್ನು ಕೆಲವರು ಶ್ವಾನಗಳಿಗೂ ಕುಡಿಸುತ್ತಾರೆ.
14/ 16
ಆದರೆ, ಕಾಫಿಯಲ್ಲಿರುವ ಕೆಲ ಅಂಶಗಳು ನಾಯಿಗಳಿಗೆ ತುಂಬಾನೇ ಅಪಾಯಕಾರಿ ಎನ್ನುತ್ತದೆ ವಿಜ್ಞಾನ.
15/ 16
ಒಣ ಹಣ್ಣು, ಬೀಜಗಳು: ಒಣ ಹಣ್ಣುಗಳ ಸೇವನೆಯಿಂದ ಮನುಷ್ಯರ ಆರೋಗ್ಯ ತುಂಬಾನೇ ಉತ್ತಮವಾಗುತ್ತದೆ. ಆದರೆ, ಇದು ನಾಯಿಗಳಿಗೆ ತುಂಬಾನೇ ಅಪಾಯಕಾರಿ.
16/ 16
ಆದರೆ, ಎಲ್ಲ ಬೀಜಗಳು ನಿಮ್ಮ ಶ್ವಾನಗಳಿಗೆ ಅಪಾಯಕಾರಿ ಅಲ್ಲ. ಆದರೆ, ಕೆಲವು ತುಂಬಾನೇ ತೊಂದರೆ ಅಪಾಯಕಾರಿ ಎನ್ನುತ್ತಾರೆ ಶ್ವಾನ ತಜ್ಞರು.