ಲ್ಯಾಪ್ಲ್ಯಾಂಡ್, ಫಿನ್ಲ್ಯಾಂಡ್.. ಇದು ಖಂಡಿತವಾಗಿಯೂ ಕ್ರಿಸ್ಮಸ್ ಆಚರಿಸಲು ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ. ಲ್ಯಾಪ್ಲ್ಯಾಂಡ್ನಲ್ಲಿ ಕ್ರಿಸ್ಮಸ್ ಡ್ರೀಮ್ಲ್ಯಾಂಡ್ ಅನ್ನು ನಿರ್ಮಿಸಲಾಗುತ್ತದೆ. ನೀವು ಸಾಂಟಾ ಕ್ಲಾಸ್ ಕ್ರಿಸ್ಮಸ್ ಆಚರಣೆಗಳ ಅಭಿಮಾನಿಯಾಗಿದ್ದರೆ, ಫಿನ್ಲ್ಯಾಂಡ್ನ ಲ್ಯಾಪ್ಲ್ಯಾಂಡ್ ಖಂಡಿತವಾಗಿಯೂ ನಿಮಗೆ ಸೂಕ್ತವಾದ ಸ್ಥಳ ಎನ್ನಬಹುದು.ನೀವಿಲ್ಲಿ ಪ್ರವಾಸಕ್ಕೆ ಹೋದರೆ ಸಾಂಟಾ ಕ್ಲಾಸ್ ವಿಲೇಜ್, ಸಾಂಟಾ ಪಾರ್ಕ್, ಸಾಂಟಾ ವರ್ಕ್ಶಾಪ್ಗೆ ಭೇಟಿ ನೀಡುವುದನ್ನ ಮರೆಯಬಾರದು.
ನ್ಯೂಯಾರ್ಕ್ ನ್ಯೂಯಾರ್ಕ್ ನಗರವು ಅದರ ಪ್ರಕಾಶಮಾನವಾದ ಕ್ರಿಸ್ಮಸ್ ದೀಪಗಳು, ಹಿಮದ ಮತ್ತು ಸಂಗೀತದ ವಾತಾವರಣಕ್ಕೆ ಹೆಸರುವಾಸಿಯಾಗಿದೆ. ಈ ಸಮಯದಲ್ಲಿ, ನಗರದಲ್ಲಿ ಅನೇಕ ಲೈವ್ ಶೋಗಳು ಮತ್ತು ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಅಲ್ಲಿ ವಿಶ್ವದರ್ಜೆಯ ಕಲಾವಿದರು ಪ್ರದರ್ಶನ ನೀಡುತ್ತಾರೆ, ನಿಮ್ಮನ್ನು ಹಬ್ಬದ ಸಂಭ್ರಮದಲ್ಲಿ ಮುಳುಗಿಸುವುದು ಪಕ್ಕಾ. ರಾಕ್ಫೆಲ್ಲರ್ ಸೆಂಟರ್ನಲ್ಲಿರುವ ಅತಿ ಎತ್ತರದ ಕ್ರಿಸ್ಮಸ್ ಟ್ರೀ ಎಲ್ಲರನ್ನು ಆಕರ್ಷಿಸುತ್ತದೆ.
ಆಮ್ಸ್ಟರ್ಡ್ಯಾಮ್, ನೆದರ್ಲ್ಯಾಂಡ್ಸ್.. ವಿಶ್ವದ ಕೆಲವು ಅತ್ಯುತ್ತಮ ಕ್ರಿಸ್ಮಸ್ ಈವೆಂಟ್ಗಳು ಮತ್ತು ಆಚರಣೆಗಳನ್ನು ಆಯೋಜಿಸಲು ಆಮ್ಸ್ಟರ್ಡ್ಯಾಮ್ ಜನಪ್ರಿಯವಾಗಿದೆ. ಇಲ್ಲಿನ ಸ್ಥಳೀಯರು ಆಚರಿಸುವ ಸಾಂಪ್ರದಾಯಿಕ ಹಬ್ಬಗಳು ಅತಿ ಸುಂದರವಾಗಿರುತ್ತದೆ. ಸುತ್ತಮುತ್ತಲಿನ ಪ್ರದೇಶಗಳು ದೀಪಗಳಿಂದ ಹೊಳೆಯುತ್ತಿರುತ್ತದೆ. ಈ ನಗರವು ಸುಮಾರು 400 ವರ್ಷಗಳ ಹಿಂದೆ ಪರಿಚಯಿಸಲಾದ ಪದ್ಧತಿಗಳನ್ನು ಅನುಸರಿಸುತ್ತದೆ.
ವ್ಯಾಟಿಕನ್ ಸಿಟಿ, ಇಟಲಿ. ವ್ಯಾಟಿಕನ್ ನಗರವು ವರ್ಷವಿಡೀ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ.ಇಲ್ಲಿನ ಕ್ರಿಸ್ಮಸ್ ಆಚರಣೆಯನ್ನು ವಿವರಿಸಲು ಪದಗಳು ಸಾಲದು ಎನ್ನಲಾಗುತ್ತದೆ. ಸೇಂಟ್ ಪೀಟರ್ಸ್ ಬೆಸಿಲಿಕಾದಲ್ಲಿ ಮಧ್ಯರಾತ್ರಿಯ ಮಾಸ್ನಲ್ಲಿ ಪಾಲ್ಗೊಳ್ಳಲು ಜನರು ವ್ಯಾಟಿಕನ್ ನಗರಕ್ಕೆ ಭೇಟಿ ನೀಡುತ್ತಾರೆ. ಸೇಂಟ್ ಪೀಟರ್ಸ್ ಸ್ಕ್ವೇರ್ನಲ್ಲಿರುವ ವ್ಯಾಟಿಕನ್ ಕ್ರಿಸ್ಮಸ್ ಮರ ಇನ್ನೊಂದು ಆಕರ್ಷಣೆ ಎನ್ನಬಹುದು.