ಪ್ರೋಟೀನ್ ಒಂದು ಪ್ರಮುಖ ಪೋಷಕಾಂಶವಾಗಿದ್ದು, ಅದು ದೇಹದಲ್ಲಿ ಜೀವಕೋಶಗಳನ್ನು ಉತ್ಪಾದಿಸಲು ಮತ್ತು ಸರಿಪಡಿಸಲು ಸಹಾಯ ಮಾಡುತ್ತದೆ. ಇದು ನಾನ್ವೆಜ್ ಮತ್ತು ವೆಜ್ ಆಹಾರ ಎರಡರಲ್ಲೂ ಇರುತ್ತದೆ. ಇನ್ನು ಕೆಲವು ಆಹಾರಗಳಲ್ಲಿ ಪ್ರೋಟೀನ್ ನೈಸರ್ಗಿಕವಾಗಿ ಕಂಡುಬರುತ್ತದೆ. ಇದಕ್ಕಂತನೇ ಪ್ರೋಟೀನ್ ಪುಡಿಗಳು, ಬಾರ್‌ಗಳು ಮತ್ತು ಪ್ರೋಟೀನ್ ಶೇಕ್‌ಗಳಂತಹ ಉತ್ಪನ್ನಗಳು ಸಹ ಲಭ್ಯವಿದೆ. ಹಾಗಿದ್ರೆ ಪ್ರೋಟೀನ್ ಅಧಿಕವಾಗಿರುವ ಆಹಾರಗಳು ಯಾವುದೆಲ್ಲಾ ಎಂಬುದನ್ನು ಈ ಲೇಖನದಲ್ಲಿದೆ ಓದಿ.
ಚಿಕನ್: ಕೋಳಿ ಮಾಂಸವು ಪ್ರೋಟೀನ್‌ನ ಅತ್ಯುತ್ತಮ ಮೂಲವಾಗಿದೆ. ಪ್ರತಿ ಔನ್ಸ್‌ಗೆ 8.56 ಗ್ರಾಂ ಪ್ರೋಟೀನ್ ನೀಡುತ್ತದೆ. ಇದರಲ್ಲಿ ವಿಟಮಿನ್ ಬಿ12 ಮತ್ತು ಸತುವು ಕೂಡ ಇದೆ. ಇತರೆ ಮಾಂಸದ ಬದಲು ಚಿಕನ್ ತಿನ್ನುವುದರಿಂದ ದೇಹದಲ್ಲಿ ಗೌಟ್ ಬರುವುದಿಲ್ಲ. ಸಲಾಡ್‌ಗಳು, ಸ್ಯಾಂಡ್‌ವಿಚ್‌ಗಳು, ಸೂಪ್‌ಗಳು, ಸ್ಟಿರ್ ಫ್ರೈಸ್, ಪಾಸ್ಟಾ ಮತ್ತು ಇತರ ಭಕ್ಷ್ಯಗಳಿಗೆ ಚಿಕನ್ ಅನ್ನು ಸೇರಿಸಲಾಗುತ್ತದೆ.
ಕಡಿಮೆ ಕೊಬ್ಬಿನ ಡೈರಿ ಉತ್ಪನ್ನಗಳು: ಹಾಲು, ಚೀಸ್, ಮೊಸರು ಮುಂತಾದ ಡೈರಿ ಉತ್ಪನ್ನಗಳು ಪ್ರೋಟೀನ್‌ನಲ್ಲಿ ಸಮೃದ್ಧವಾಗಿವೆ. ಮೊಸರು 20 ಗ್ರಾಂ ಪ್ರೋಟೀನ್ ಅನ್ನು ಹೊಂದಿರುತ್ತದೆ. ಮೊಸರು ಕ್ಯಾಲ್ಸಿಯಂ ಮತ್ತು ವಿಟಮಿನ್ ಬಿ 12 ಅನ್ನು ಸಹ ಹೊಂದಿದೆ. ಮೊಸರು ನಿಮ್ಮ ದೇಹದ ಮೂಳೆಗಳು ಮತ್ತು ನರಗಳನ್ನು ಆರೋಗ್ಯಕರವಾಗಿರಿಸುತ್ತಾರೆ. ಆದ್ದರಿಂದ ಮೊಸರು ನಿಮ್ಮ ಆಹಾರದಲ್ಲಿ ಸೇರಿಸೋದ್ರಿಂದ ದೇಹವನ್ನು ಆರೋಗ್ಯದಲ್ಲಿಟ್ಟುಕೊಳ್ಳಬಹುದು.
ಬೀನ್ಸ್, ಕಡಲೆ: ಒಂದು ಕಪ್ ಬೇಯಿಸಿದ ಬಿಳಿ ಬೀನ್ಸ್ 17 ಗ್ರಾಂ ಪ್ರೋಟೀನ್ ಅನ್ನು ಹೊಂದಿರುತ್ತದೆ. ಇವುಗಳಲ್ಲಿ ನಾರಿನಂಶ ಮತ್ತು ಪೊಟ್ಯಾಶಿಯಂ ಕೂಡ ಅಧಿಕವಾಗಿದೆ. ಬೀನ್ಸ್‌ನಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ರೋಗವನ್ನು ತಡೆಯುತ್ತದೆ. ಬೀನ್ಸ್ ಮತ್ತು ಕಡಲೆಗಳನ್ನು ಉಪಹಾರ, ಸೂಪ್‌ಗಳು, ಸಲಾಡ್‌ಗಳು, ಐಸ್ ಕ್ರೀಮ್‌ನಂತಹ ಸಿಹಿತಿಂಡಿಗಳು ಸೇರಿದಂತೆ ಅನೇಕ ಪಾಕವಿಧಾನಗಳಿಗೆ ಸೇರಿಸಬಹುದು. ಇದರಿಂದ ನಿಮ್ಮ ದೇಹದ ಪ್ರೋಟೀನ್ ಅನ್ನು ಹೆಚ್ಚಿಸಬಹುದು.