ಜಿಮ್ ಇಲ್ಲಾ ಅನ್ನೋ ಚಿಂತೆನಾ?; ಈ ಆಹಾರ ಸೇವಿಸಿ ಬೊಜ್ಜು ಕರಗಿಸಿ
ಜಂಕ್ಫುಡ್, ದೇಹಕ್ಕೆ ಸೂಕ್ತ ವ್ಯಾಯಾಮದ ಕೊರತೆ, ಒಂದೇ ಕಡೆ ಕುಳಿತು ಕೆಲಸ ಮಾಡುವುದು ಇವೆಲ್ಲ ನಮ್ಮ ದೇಹದಲ್ಲಿ ಕಾಣಿಸಿಕೊಳ್ಳುವ ಬೊಜ್ಜಿಗೆ ಮುಖ್ಯ ಕಾರಣಗಳು. ನಿಮ್ಮ ದೇಹದ ತೂಕವನ್ನು ಇಳಿಸಲು ಇಲ್ಲಿವೆ ಸಿಂಪಲ್ ಟಿಪ್ಸ್ಗಳು.
News18 Kannada | July 23, 2020, 3:42 PM IST
1/ 18
ದೇಹದ ತೂಕ ಜಾಸ್ತಿ ಇದ್ದರೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ. ಹೃದಯಾಘಾತ ಉಂಟಾಗಲೂ ದೇಹದ ಕೊಲೆಸ್ಟ್ರಾಲ್ ಕಾರಣವಾಗಬಹುದು.
2/ 18
ಕೆಲವರು ಜಿಮ್ಗೆ ಹೋಗುವ ಮೂಲಕ ದೇಹದ ತೂಕ ಇಳಿಸಿ ಕೊಳ್ಳುತ್ತಾರೆ.
3/ 18
ಅದರಲ್ಲೂ ಸೆಲೆಬ್ರಿಟಿಗಳು ಫಿಟ್ನೆಸ್ ಕಾಯ್ದುಕೊಳ್ಳಲು ಜಿಮ್ ತೆರಳುತ್ತಾರೆ.
4/ 18
ಇದಕ್ಕಾಗಿಯೇ ಸೆಲೆಬ್ರಿಟಿಗಳು ಸಾಕಷ್ಟು ಹಣ ವ್ಯಯಿಸುತ್ತಾರೆ.
5/ 18
ನಾವು ತಿನ್ನುವ ಆಹಾರ ಕೂಡ ನಮ್ಮ ದೇಹದ ತೂಕವನ್ನು ನಿರ್ಧರಿಸುತ್ತದೆ.
6/ 18
ಜಂಕ್ ಫುಡ್ಗಳನ್ನು ಹೆಚ್ಚಾಗಿ ತಿಂದರೆ ದೇಹದಲ್ಲಿ ಬೊಜ್ಜು ಕಾಣಿಸಿಕೊಳ್ಳುತ್ತದೆ.
7/ 18
ಜಂಕ್ಫುಡ್, ದೇಹಕ್ಕೆ ಸೂಕ್ತ ವ್ಯಾಯಾಮದ ಕೊರತೆ, ಒಂದೇ ಕಡೆ ಕುಳಿತು ಕೆಲಸ ಮಾಡುವುದು ಇವೆಲ್ಲ ನಮ್ಮ ದೇಹದಲ್ಲಿ ಕಾಣಿಸಿಕೊಳ್ಳುವ ಬೊಜ್ಜಿಗೆ ಮುಖ್ಯ ಕಾರಣಗಳು.
8/ 18
ನಿಮ್ಮ ದೇಹದ ತೂಕವನ್ನು ಇಳಿಸಲು ಇಲ್ಲಿವೆ ಸಿಂಪಲ್ ಟಿಪ್ಸ್ಗಳು.
9/ 18
ಕ್ಯಾರೆಟ್ ನಿಮ್ಮ ದೇಹದ ತೂಕವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.
10/ 18
100 ಗ್ರಾಂ ಕ್ಯಾರೆಟ್ನಲ್ಲಿ 41 ಕ್ಯಾಲರಿ ನಿಮ್ಮ ದೇಹಕ್ಕೆ ಸಿಗಲಿದೆ. ಫೈಬರ್, ವಿಟಾಮಿನ್ ಎ, ವಿಟಾಮಿನ್ ಸಿ, ವಿಟಾಮಿನ್ ಕೆ ನಿಮ್ಮ ದೇಹಕ್ಕೆ ಸಿಗಲಿದೆ.
11/ 18
ರಾತ್ರಿ ವೇಳೆ ಊಟದ ಬದಲು ಕ್ಯಾರೆಟ್ ತಿಂದು ಮಲಗಿದರೆ ಉತ್ತಮ.
12/ 18
ಸೆಲರಿ ಹೆಸರಿನ ಸೊಪ್ಪು ಕೂಡ ನಿಮ್ಮ ದೇಹದ ತೂಕ ಇಳಿಸಲು ಸಹಕಾರಿ. ಆದರೆ, ಇದು ಭಾರತದ ಆಹಾರವಲ್ಲ. ಹಾಗಾಗಿ ಇದರ ಲಭ್ಯತೆ ಇಲ್ಲಿ ಕಡಿಮೆ.
13/ 18
ಟೊಮ್ಯಾಟೋ ಕೂಡ ದೇಹದ ತೂಕವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.
14/ 18
100 ಗ್ರಾಂ ಟೋಮ್ಯಾಟೋದಲ್ಲಿ ಕೇವಲ 19 ಕ್ಯಾಲೋರಿ ಸಿಗಲಿದೆ.
15/ 18
ಕೊಬ್ಬು ಹೆಚ್ಚದಂತೆ ನೋಡಿಕೊಳ್ಳಲು ಕಲ್ಲಂಗಡಿ ಹಣ್ಣು ಕೂಡ ಪ್ರಮುಖ ಆಹಾರ.
16/ 18
ಹೀಗಾಗಿ ರಾತ್ರಿ ನಿದ್ರಿಸುವಾಗ ಕಲ್ಲಂಗಡಿ ಜ್ಯೂಸ್, ಕಲ್ಲಂಗಡಿ ಹಣ್ಣು ತಿನ್ನುವುದು ಉತ್ತಮ.
17/ 18
ಕೋಸುಗಡ್ಡೆ ಕೂಡ ನಿಮ್ಮ ದೇಹದಲ್ಲಿ ಕೊಬ್ಬು ಹೆಚ್ಚದಂತೆ ನೋಡಿಕೊಳ್ಳುತ್ತದೆ.
18/ 18
ಹೀಗಾಗಿ ರಾತ್ರಿ ಊಟದಲ್ಲಿ ಈ ಆಹಾರವೂ ಇರುವಂತೆ ನೋಡಿಕೊಳ್ಳುವುದು ಉತ್ತಮ.