Hair Care: ಹೇರ್ ಫಾಲ್ ಹೆಚ್ಚಾಗಿದ್ಯಾ? ನಿಮ್ಮ ಸಮಸ್ಯೆಗೆ ಪರಿಹಾರ ನೀಡುತ್ತೆ ಈ 7 ಮನೆಮದ್ದುಗಳು
ಕೂದಲು ಉದುರುವಿಕೆ (Hair Fall) ನಿಯಂತ್ರಿಸಲು ಅನೇಕರು ನಾನಾ ರೀತಿಯ ಪ್ರಯತ್ನ ಮಾಡ್ತಾರೆ ಆದ್ರೂ ಪ್ರಯೋಜನವಾಗಲ್ಲ. ಮೊದಲು ಕೂದಲು ಉದುರಲು ಕಾರಣ ತಿಳಿದುಕೊಳ್ಳಿ ಬಳಿಕ ಅದಕ್ಕೆ ತಕ್ಕ ಪರಿಹಾರ ಕಂಡುಕೊಳ್ಳಬಹುದು ಮನೆ ಮದ್ದು (Home Remedies) ಬಳಸಿಕೊಂಡು ಕೂದಲ ರಕ್ಷಣೆ (Hair Care) ಮಾಡಬಹುದುಕೂದಲು ಉದುರುವಿಕೆ (Hair Fall) ನಿಯಂತ್ರಿಸಲು ಅನೇಕರು ನಾನಾ ರೀತಿಯ ಪ್ರಯತ್ನ ಮಾಡ್ತಾರೆ ಆದ್ರೂ ಪ್ರಯೋಜನವಾಗಲ್ಲ. ಮೊದಲು ಕೂದಲು ಉದುರಲು ಕಾರಣ ತಿಳಿದುಕೊಳ್ಳಿ ಬಳಿಕ ಅದಕ್ಕೆ ತಕ್ಕ ಪರಿಹಾರ ಕಂಡುಕೊಳ್ಳಬಹುದು ಮನೆ ಮದ್ದು (Home Remedies) ಬಳಸಿಕೊಂಡು ಕೂದಲ ರಕ್ಷಣೆ (Hair Care) ಮಾಡಬಹುದು
ಇತ್ತೀಚಿನ ದಿನಗಳಲ್ಲಿ ಬಹುತೇಕರು ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೂದಲಿಗೆ ಹಾನಿ ಮಾಡುವ ಅಂಶಗಳೆದ್ರೆ ರಾಸಾಯನಿಕ ಚಿಕಿತ್ಸೆ, ಬಣ್ಣ ಅಥವಾ ನೇರಗೊಳಿಸುವಿಕೆ, ಕ್ಲೋರಿನೇಟೆಡ್ ನೀರು, ಉಜ್ಜಿ ತೊಳೆಯುವುದು ಮತ್ತು ಒರಟಾದ ಬಾಚಣಿಗೆಯಿಂದ ಕೂದಲು ಬಾಚುವುದರಿಂದ ಕೂದಲು ಹಾನಿಗೊಳಗಾಗಬಹುದು
2/ 8
ಅಲೋವೆರಾ - ಅಲೋವೆರಾ ಎಲೆಯಿಂದ ಜೆಲ್ ತೆಗೆದುಕೊಂಡು ಜೇನುತುಪ್ಪ ಮತ್ತು ಆಲಿವ್ ಎಣ್ಣೆಯೊಂದಿಗೆ ಮಿಶ್ರಣ ಮಾಡಿ. ಶಾಂಪೂ ಮಾಡುವ ಮೊದಲು ಒಣ ಕೂದಲಿಗೆ ಅನ್ವಯಿಸಿ. 30 ನಿಮಿಷಗಳ ಕಾಲ ಬಿಡಿ. ನಂತರ ಕೂದಲನ್ನು ತೊಳೆಯಿರಿ.
3/ 8
ಆಲಿವ್ ಎಣ್ಣೆ- 1/2 ಕಪ್ ಆಲಿವ್ ಎಣ್ಣೆಯನ್ನು ಬಿಸಿ ಮಾಡಿ ನಂತರ ನಿಮ್ಮ ಕೂದಲಿಗೆ ಹಚ್ಚಿಕೊಳ್ಳಿ. ನಂತರ ಪ್ಲಾಸ್ಟಿಕ್ ಕವರ್ನಿಂದ ಮುಚ್ಚಿ. 45 ನಿಮಿಷಗಳ ಕಾಲ ಬಿಡಿ, ನಂತರ ನಿಮ್ಮ ಕೂದಲನ್ನು ಶಾಂಪೂ ಬಳಸಿ ತೊಳೆಯಿರಿ.
4/ 8
ಆವಕಾಡೊ - ಒಂದು ಆವಕಾಡೊ ಫೇಸ್ಟ್ನನ್ನು ಮೊಟ್ಟೆಯೊಂದಿಗೆ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಒದ್ದೆ ಕೂದಲಿಗೆ ಹಚ್ಚಿ. ಆವಕಾಡೊಗಳು ನಿಮ್ಮ ಕೂದಲನ್ನು ಹೊಳೆಯುವಂತೆ ಮಾಡುವ ವಿಟಮಿನ್ಗಳು, ಅಗತ್ಯ ಕೊಬ್ಬಿನಾಮ್ಲಗಳು ಮತ್ತು ಖನಿಜಗಳನ್ನು ಹೊಂದಿರುತ್ತವೆ. 20 ನಿಮಿಷಗಳ ಕಾಲ ಬಿಡಿ, ನಂತರ ನಿಮ್ಮ ಕೂದಲನ್ನು ತೊಳೆಯಿರಿ
5/ 8
ಶ್ರೀಗಂಧದ ಎಣ್ಣೆ - ಆಲಿವ್ ಅಥವಾ ಜೊಜೊಬಾ ಎಣ್ಣೆಯ ಜೊತೆ ಶ್ರೀಗಂಧದ ಎಣ್ಣೆಯ ಕೆಲವು ಹನಿಗಳನ್ನು ಮಿಶ್ರಣ ಮಾಡಿ. ಈ ಮಿಶ್ರಣವನ್ನು ನಿಮ್ಮ ಕೂದಲಿನ ತುದಿಗಳಿಗೆ ಅನ್ವಯಿಸಿ. ಇದು ನಿಮ್ಮ ಹಾನಿಗೊಳಗಾದ ಕೂದಲನ್ನು ಸರಿಪಡಿಸುತ್ತದೆ.
6/ 8
ಆಪಲ್ ಸೈಡರ್ ವಿನೆಗರ್ - 2 ಟೀ ಚಮಚ ಆಲಿವ್ ಎಣ್ಣೆಯನ್ನು 3 ಮೊಟ್ಟೆಯ ಬಿಳಿಭಾಗ ಮತ್ತು 1 ಟೀಚಮಚ ಸೈಡರ್ ವಿನೆಗರ್ ಮಿಶ್ರಣ ಮಾಡಿ. ನಂತರ ಈ ಮಿಶ್ರಣವನ್ನು ನಿಮ್ಮ ಕೂದಲಿಗೆ ಹಚ್ಚಿಕೊಳ್ಳಿ. 30 ನಿಮಿಷಗಳ ಕಾಲ ನಿಮ್ಮ ಕೂದಲನ್ನು ಕವರ್ ಮಾಡಿ ನಂತರ, ಶಾಂಪೂ ಬಳಸಿ ತೊಳೆಯಿರಿ. ದುರ್ಬಲ ಕೂದಲಿಗೆ ಇದು ಅತ್ಯುತ್ತಮ ಪರಿಹಾರಗಳಲ್ಲಿ ಒಂದಾಗಿದೆ.
7/ 8
ಮೊಟ್ಟೆಗಳು: ಮೊಟ್ಟೆಗಳಲ್ಲಿ ಪ್ರೋಟೀನ್ ಸಮೃದ್ಧವಾಗಿದೆ. ನಿಮ್ಮ ಕೂದಲನ್ನು ಬಲಪಡಿಸಲು ಇದು ವಿಶೇಷವಾಗಿ ಅಗತ್ಯವಾಗಿದೆ. ಪ್ರತಿ ಮೊಟ್ಟೆಗೆ 2 ಟೇಬಲ್ ಸ್ಪೂನ್ ಆಲಿವ್ ಎಣ್ಣೆಯನ್ನು ಮಿಶ್ರಣ ಮಾಡಿ ಮತ್ತು ಕೂದಲಿಗೆ ಅನ್ವಯಿಸಿ. 20 ನಿಮಿಷಗಳ ಕಾಲ ಬಿಟ್ಟ ನಂತರ ನಿಮ್ಮ ಕೂದಲನ್ನು ಚೆನ್ನಾಗಿ ತೊಳೆಯಿರಿ. ಹೆಚ್ಚಿನ ಪ್ರೋಟೀನ್ ಕೂದಲನ್ನು ಒರಟಾಗಿ ಮಾಡುತ್ತದೆ
8/ 8
ಬಾಳೆಹಣ್ಣು- ಎರಡು ಬಾಳೆಹಣ್ಣುಗಳು, ಎರಡು ಚಮಚ ಜೇನುತುಪ್ಪ ಮತ್ತು ನಾಲ್ಕು ಚಮಚ ಆಲಿವ್ ಎಣ್ಣೆಯನ್ನು ಮಿಶ್ರಣ ಮಾಡಿ ಮತ್ತು ನಯವಾದ ಪೇಸ್ಟ್ ಮಾಡಿ. ನಂತರ ಕೂದಲಿಗೆ ಅನ್ವಯಿಸಿ ಮತ್ತು 25 ನಿಮಿಷಗಳ ಕಾಲ ಬಿಡಿ, ನಂತರ ತೊಳೆಯಿರಿ.