ದುಬಾರಿ ಬ್ಯೂಟಿ ಉತ್ಪನ್ನಗಳ ಮೇಲೆ ಖರ್ಚು ಮಾಡುವ ಬದಲು, ಕೆಲವು ಹಣ್ಣುಗಳು ಮತ್ತು ತರಕಾರಿಗಳ ಸಿಪ್ಪೆಗಳ ಪೇಸ್ಟ್ ಅನ್ನು ಬಳಸಿದ್ರೆ ಸಾಕು. ಈ ಸಿಪ್ಪೆಗಳು ಆಂಟಿಆಕ್ಸಿಡೆಂಟ್ಗಳು, ನಿವಾರಕಗಳು, ಫ್ಲೇವನಾಯ್ಡ್ ಗಳಂತಹ ಅಂಶಗಳನ್ನು ಒಳಗೊಂಡಿರುತ್ತವೆ. ಇದು ಚರ್ಮವನ್ನು ಆರೋಗ್ಯಕರವಾಗಿರಿಸುತ್ತದೆ. ಅಂತಹ 6 ಸಿಪ್ಪೆಗಳನ್ನು ಬಳಸುವ ವಿಧಾನಗಳು ಮತ್ತು ಪ್ರಯೋಜನಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.
ಆಲೂಗಡ್ಡೆ ಸಿಪ್ಪೆ: ಇದರಲ್ಲಿ ತ್ವಚೆಯನ್ನು ಆರೋಗ್ಯವಾಗಿಡುವ ಹಲವು ಗುಣಗಳು ಇವೆ. ಆಲೂಗೆಡ್ಡೆ ಸಿಪ್ಪೆಯಲ್ಲಿ ವಿಟಮಿನ್ ಬಿ, ಸಿ, ಪೊಟ್ಯಾಸಿಯಮ್ ಇದೆ. ಕಣ್ಣಿನ ಕೆಳಗಿನ ಕಪ್ಪು ವರ್ತುಲಗಳ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಚರ್ಮವು ತೇವಾಂಶವನ್ನು ಪಡೆಯುತ್ತದೆ, ತೇವಾಂಶದಿಂದ ಉಳಿಯುತ್ತದೆ. ನೀವು ಇದನ್ನು ರುಬ್ಬುವ ಮೂಲಕ ಪೇಸ್ಟ್ ತಯಾರಿಸಬಹುದು ಮತ್ತು ಅದನ್ನು ಚರ್ಮದ ಮೇಲೆ ಲೇಪಿಸಬಹುದು.
ಪಪ್ಪಾಯಿ ಸಿಪ್ಪೆ: ಹಸಿ ಪಪ್ಪಾಯಿ ಸಿಪ್ಪೆಯು ಶುಷ್ಕ ಮತ್ತು ಚರ್ಮದ ಸುಕ್ಕನ್ನು ತಡೆಯುತ್ತದೆ. ಪಪ್ಪಾಯಿ ಸಿಪ್ಪೆಯಲ್ಲಿರುವ ಪಪೈನ್ ಎಂಬ ಕಿಣ್ವವು ಚರ್ಮದ ಕೋಶಗಳನ್ನು ಪುನರುತ್ಪಾದಿಸುತ್ತದೆ. ಚರ್ಮವನ್ನು ಪುನರ್ಯೌವನಗೊಳಿಸುತ್ತದೆ. ತ್ವಚೆಯನ್ನು ಕಾಂತಿಯುತವಾಗಿಸುತ್ತದೆ. ಚರ್ಮವನ್ನು ಯೌವನವಾಗಿರಿಸುತ್ತದೆ. ಪಪ್ಪಾಯಿ ಸಿಪ್ಪೆ, ಮೊಸರು, ಜೇನುತುಪ್ಪವನ್ನು ಮಿಕ್ಸಿಯಲ್ಲಿ ಬೆರೆಸಿ ಪೇಸ್ಟ್ ತಯಾರಿಸಿ. 15 ನಿಮಿಷಗಳ ಕಾಲ ಚರ್ಮದ ಮೇಲೆ ಲೇಪಿಸಿ ನಂತರ ನೀರಿನಿಂದ ಮುಖವನ್ನು ಸ್ವಚ್ಛಗೊಳಿಸಿ.
ಬಾಳೆಹಣ್ಣಿನ ಸಿಪ್ಪೆ: ಬಾಳೆಹಣ್ಣಿನ ಸಿಪ್ಪೆಯಲ್ಲಿ ಮೆಗ್ನೀಸಿಯಮ್, ಪೊಟ್ಯಾಸಿಯಮ್, ವಿಟಮಿನ್ ಗಳು, ಕಬ್ಬಿಣ ಇತ್ಯಾದಿ ಅನೇಕ ಪೋಷಕಾಂಶಗಳು ಇರುತ್ತವೆ. ಇವು ಚರ್ಮಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತವೆ. ನೀವು ಅದರ ಸಿಪ್ಪೆಯನ್ನು ರುಬ್ಬುವ ಮೂಲಕ ಪೇಸ್ಟ್ ಅನ್ನು ತಯಾರಿಸಬಹುದು ಅಥವಾ ನೀವು ಅದನ್ನು ನೇರವಾಗಿ ಚರ್ಮದ ಮೇಲೆ ಉಜ್ಜಬಹುದು. ಇದರಿಂದ ಮೊಡವೆ, ಚರ್ಮದ ಉರಿ, ಚರ್ಮದ ಕಿರಿಕಿರಿ, ತುರಿಕೆ, ಸೋರಿಯಾಸಿಸ್ ಸಮಸ್ಯೆ ಕಡಿಮೆಯಾಗುತ್ತದೆ.
ಮಾವಿನ ಸಿಪ್ಪೆ: ಮಾವಿನ ಸಿಪ್ಪೆಯನ್ನು ನೀವು ಖಂಡಿತವಾಗಿಯೂ ಮುಖಕ್ಕೆ ಹಚ್ಚಬಹುದು. ಇದರ ಸಿಪ್ಪೆಯನ್ನು ರುಬ್ಬಿಕೊಂಡು ಪೇಸ್ಟ್ ಮಾಡಿ ಫೇಸ್ ಪ್ಯಾಕ್ ಆಗಿ ಹಚ್ಚಿಕೊಳ್ಳಿ. ಮಾವಿನ ಸಿಪ್ಪೆಯಲ್ಲಿ ವಿಟಮಿನ್ ಎ, ಸಿ, ಕಬ್ಬಿಣಾಂಶ, ಆ್ಯಂಟಿಆಕ್ಸಿಡೆಂಟ್, ಫೈಟೊನ್ಯೂಟ್ರಿಯೆಂಟ್ ಗಳಿದ್ದು ತ್ವಚೆಯನ್ನು ಆರೋಗ್ಯವಾಗಿಡುತ್ತದೆ. ನೀವು ಇದರ ಸಿಪ್ಪೆಯನ್ನು ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿ. ಇದನ್ನು ಮೊಸರಿನಲ್ಲಿ ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳಿ. ಕೆಲವು ದಿನಗಳ ಕಾಲ ಹಚ್ಚಿಕೊಂಡ ನಂತರ ಕಲೆಗಳು ಕಡಿಮೆಯಾಗಿ ಚರ್ಮವು ಹೊಳಪು ಪಡೆಯುತ್ತದೆ.