ಇಳಿ ವಯಸ್ಸಿನವರು ಕೂಡ ತಮ್ಮ ಹಕ್ಕು ಚಲಾಯಿಸಲು ಮತಗಟ್ಟೆಗಳತ್ತ ಆಗಮಿಸಿದ್ದಾರೆ. ಇನ್ನೂ ಬಿಸಿಲಿನ ತಾಪದಿಂದ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿ ನಿರ್ಜಲೀಕರಣವಾಗುತ್ತದೆ. ಹಾಗಾಗಿ ಮತ ಹಾಕಲು ಹೋಗುವ ಮುನ್ನ ಕೆಲವು ಪಾನೀಯಗಳನ್ನು ಕುಡಿದು ಹೋಗುವುದು ಬೆಟರ್ ಅಥವಾ ಮತಗಟ್ಟೆ ಬಳಿ ತೆಗೆದುಕೊಂಡು ಹೋಗಿ ಕುಡಿಯುವ ಮೂಲಕ ನಿಮ್ಮ ದಣಿವನ್ನು ನೀಗಿಸಿಕೊಳ್ಳಬಹುದು. ಅಲ್ಲದೇ ಈ ಪದಾರ್ಥಗಳು ದಣಿದ ದೇಹಕ್ಕೆ ಬೇಗ ಶಕ್ತಿ ನೀಡುತ್ತದೆ. ಅಷ್ಟಕ್ಕೂ ಯಾವುವು ಅಂತೀರಾ? ಈ ಸ್ಟೋರಿ ಓದಿ. (ಸಾಂದರ್ಭಿಕ ಚಿತ್ರ)
ಕಬ್ಬಿನ ಜ್ಯೂಸ್: ಬೇಸಿಗೆಯಲ್ಲಿ ಬಿಸಿಲಿನಿಂದ ಮುಕ್ತಿ ಪಡೆಯಲು ಕಬ್ಬಿನ ಜ್ಯೂಸ್ ಕುಡಿಯುವುದು ಒಳ್ಳೆಯದು. ಇದು ವಿವಿಧ ರೋಗಗಳಿಗೆ ನೈಸರ್ಗಿಕ ಔಷಧವಾಗಿಯೂ ಕೆಲಸ ಮಾಡುತ್ತದೆ. ಬೇಸಿಗೆಯಲ್ಲಿ ಕಬ್ಬಿನ ಜ್ಯೂಸ್ ನಿಯಮಿತವಾಗಿ ಕುಡಿಯುವುದರಿಂದ ದೇಹಕ್ಕೆ ತಂಪಾಗುವುದರ ಜೊತೆಗೆ ಅಗತ್ಯವಾದ ಶಕ್ತಿಯೂ ದೊರೆಯುತ್ತದೆ. ಇದು ರಕ್ತದ ಪ್ಲಾಸ್ಮಾ ಮತ್ತು ದೇಹದ ದ್ರವವನ್ನು ಹೆಚ್ಚಿಸುತ್ತದೆ. ಇದು ದೇಹವು ನಿರ್ಜಲೀಕರಣಗೊಳ್ಳುವುದನ್ನು ತಡೆಯುತ್ತದೆ. ಕಬ್ಬಿನ ಜ್ಯೂಸ್ಗೆ ಪುದೀನಾ ಮತ್ತು ನಿಂಬೆರಸ ಸೇರಿಸಿ ಕುಡಿದರೆ ರುಚಿ ಚೆನ್ನಾಗಿರುತ್ತದೆ.