ಕೆಲವು ಕ್ರಿಕೆಟಿಗರು ಹೆಚ್ಚಾಗಿ ಚೂಯಿಂಗ್ ಗಮ್ ಜಗಿಯುತ್ತಿರುತ್ತಾರೆ. ಆದರೆ ಏಕೆ ಅಂತ ಎಂದಾದರೂ ಯೋಚಿಸಿದ್ದೀರಾ? ಆಟಗಾರರು ಒತ್ತಡ ಮತ್ತು ಗಮನವನ್ನು ಕಡಿಮೆ ಮಾಡಲು ಗಮ್ ಅನ್ನು ಅಗಿಯುತ್ತಾರೆ. ಸಾಮಾನ್ಯ ಜನರು ಇದನ್ನು ಮೋಜಿಗಾಗಿ ಮತ್ತು ಬಾಯಿಯ ದುರ್ವಾಸನೆ ತಡೆದು ಹಾಕಲು ಬಳಸುತ್ತಾರೆ. ಆದರೆ ಚೂಯಿಂಗ್ ಗಮ್ ತಾಜಾ ಉಸಿರಾಟದ ಜೊತೆಗೆ ಅನೇಕ ಪ್ರಯೋಜನಗಳನ್ನು ಹೊಂದಿದೆ. ಅದು ಯಾವುವು ಎಂದು ನೋಡೋಣ ಬನ್ನಿ.
ಲಾಲಾರಸದ ಉತ್ಪಾದನೆ: ಚೂಯಿಂಗ್ ಗಮ್ ಬಾಯಿಯಲ್ಲಿ ಹೆಚ್ಚು ಲಾಲಾರಸವನ್ನು ಉತ್ಪಾದಿಸುತ್ತದೆ. ಬಾಯಿಯ ಆರೋಗ್ಯಕ್ಕೆ ಇದು ಬಹಳ ಮುಖ್ಯ. ಏಕೆಂದರೆ ಇದು ಬಾಯಿಯಲ್ಲಿರುವ ಬ್ಯಾಕ್ಟೀರಿಯಾದಿಂದ ಉತ್ಪತ್ತಿಯಾಗುವ ಕೆಟ್ಟ ಆಮ್ಲಗಳನ್ನು ಹೊರಹಾಕುತ್ತದೆ. ತಿನ್ನುವಾಗ ಬಾಯಿಯಲ್ಲಿ ಸಿಲುಕಿಕೊಂಡ ಆಹಾರದ ಸಣ್ಣ ತುಂಡುಗಳನ್ನು ತೆಗೆದುಹಾಕುತ್ತದೆ. ಹೆಚ್ಚಿದ ಲಾಲಾರಸದ ಉತ್ಪಾದನೆಯಿಂದಾಗಿ, ದಂತಕ್ಷಯ ಮತ್ತು ವಸಡು ಕಾಯಿಲೆಯ ಸಮಸ್ಯೆಗಳು ಸಹ ಕಡಿಮೆಯಾಗುತ್ತವೆ.