ರೆಟಿನಾಯ್ಡ್ ಅಥವಾ ರೆಟಿನಾಲ್ ಮತ್ತು ವಿಟಮಿನ್ ಸಿ. ರೆಟಿನಾಯ್ಡ್ ಬಳಕೆ ಮೊದಲು ಪ್ರಮುಖ ಮಾಹಿತಿ ತಿಳಿಯಿರಿ. ರೆಟಿನಾಯ್ಡ್‌ಗಳು ಮತ್ತು ವಿಟಮಿನ್ ಸಿ ಅನ್ನು ಎಂದಿಗೂ ಒಟ್ಟಿಗೆ ಬಳಸಬೇಡಿ. ಇವೆರಡೂ ಚರ್ಮಕ್ಕೆ ಬಹಳ ಮುಖ್ಯ. ವಿಟಮಿನ್ ಸಿ ಯ ಪಿಹೆಚ್ ಮಟ್ಟ ಆಮ್ಲೀಯವಾಗಿದೆ. ಇವೆರಡನ್ನು ಚರ್ಮದ ಮೇಲೆ ಅನ್ವಯಿಸಿದರೆ ಚರ್ಮ ಕೆಂಪಾಗುತ್ತದೆ. ಊತ ಮತ್ತು ಸುಡುವ ಸಂವೇದನೆ ಉಂಟಾಗುತ್ತದೆ.
ರೆಟಿನಾಯ್ಡ್ ಅಥವಾ ರೆಟಿನಾಲ್ ಮತ್ತು ಸ್ಯಾಲಿಸಿಲಿಕ್ ಆಮ್ಲ. ಮೊಡವೆ, ಸೂಕ್ಷ್ಮ ರೇಖೆ, ಸುಕ್ಕು ಕಡಿಮೆ ಮಾಡಲು ರೆಟಿನಾಯ್ಡ್ ಬಳಸಲು ಸಲಹೆ ನೀಡಲಾಗುತ್ತದೆ. ಮೊಡವೆ ಕಡಿಮೆ ಮಾಡಲು ಸ್ಯಾಲಿಸಿಲಿಕ್ ಆಮ್ಲ ಬಳಸ್ತಾರೆ. ಆದರೆ ಎರಡೂ ಚರ್ಮವನ್ನು ಒಣಗಿಸುತ್ತವೆ. ಚರ್ಮದ ಕಿರಿಕಿರಿ, ಚರ್ಮವು ಹೆಚ್ಚು ಎಣ್ಣೆ ಉತ್ಪಾದಿಸುತ್ತದೆ. ಹಾಗಾಗಿ ಬೆಳಿಗ್ಗೆ ಸ್ಯಾಲಿಸಿಲಿಕ್ ಮತ್ತು ರಾತ್ರಿ ಮಲಗುವ ಮೊದಲು ರೆಟಿನಾಯ್ಡ್ ಅನ್ನು ಬಳಸಿ.