Home Remedies: ಈ ಆಹಾರಗಳನ್ನು ತಿಂದ್ರೆ ಕೇವಲ ಒಂದೇ ದಿನದಲ್ಲಿ ಕಫ ಹೊರಬರುತ್ತೆ
Home Remedies For Cough: ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಡುವ ಸಮಸ್ಯೆ ಎಂದರೆ ಶೀತ ಮತ್ತು ಕೆಮ್ಮು. ಒಮ್ಮೆ ಈ ಶೀತ ಹಾಗೂ ಕೆಮ್ಮು ಆರಂಭವಾದರೆ ಕಫ ಸಹ ಉಂಟಾಗುತ್ತದೆ. ಈ ಕಫ ಹೊರತೆಗೆಯಲು ಕೆಲವೊಮ್ಮೆ ಕಷ್ಟಪಡಬೇಕಾಗುತ್ತದೆ. ಯಾವುದೇ ಆಹಾರ ತಿಂದರೂ, ಮೆಡಿಸಿನ್ ಮಾಡಿದರೂ ಕಫ ಕುಳಿತುಕೊಂಡು ಬಿಡುತ್ತದೆ. ಈ ಕಫವನ್ನು ಹೊರತೆಗೆಯಲು ಸಹಾಯ ಮಾಡುವ ಕೆಲ ಆಹಾರಗಳು ಇಲ್ಲಿದೆ
ಶುಂಠಿ ಟೀ ಶುಂಠಿ ಕೆಮ್ಮು ಮತ್ತು ಶೀತಕ್ಕೆ ಪರಿಹಾರ ನೀಡುತ್ತದೆ. ಅಲ್ಲದೇ ಈ ಶುಂಠಿ ಸೇವನೆ ಕುಡಿಯುವುದು ಕಫವನ್ನು ಹೊರತೆಗೆಯಲು ಸಹಾಯ ಮಾಡುತ್ತದೆ. ಈ ಕಫದ ಸಮಸ್ಯೆಯಿಂದ ನಿಮಗೆ ಉಸಿರಾಡಲು ಕಷ್ಟವಾಗುತ್ತಿದ್ದರೆ ಸ್ವಲ್ಪ ಶುಂಠಿ ಚಹಾ ಕುಡಿಯಿರಿ ಸಾಕು.
2/ 8
ಬೆಳ್ಳುಳ್ಳಿ ಚಳಿಗಾಲದ ಆರೋಗ್ಯ ಸಮಸ್ಯೆಗಳಿಗೆ ಈ ಬೆಳ್ಳುಳ್ಳಿಯಿಂದ ಪರಿಹಾರ ಸಿಗುತ್ತದೆ. ಈ ಕೆಮ್ಮು ಮತ್ತು ಶೀತದಿಂದ ಕಫ ಹೆಚ್ಚಾಗಿ, ಅದು ಹೊರ ಬರದಿದ್ದರೆ ಬೆಳ್ಳುಳ್ಳಿ ಸೇವಿಸಿ. ಹಸಿ ಬೆಳ್ಳುಳ್ಳಿಯನ್ನು ತಿಂದು ನೀರು ಕುಡಿದರೆ ಕಫ ಕರಗುತ್ತದೆ.
3/ 8
ಜೇನುತುಪ್ಪ ಗಂಟಲು ನೋವು ಹಾಗೂ ಶೀತಕ್ಕೆ ಈ ಜೇನುತುಪ್ಪವನ್ನು ಬಳಸುವುದು ಸೂಕ್ತ ಎನ್ನುತ್ತಾರೆ ತಜ್ಞರು. ಹಾಗೆಯೇ ನಿಮ್ಮ ಕಫದ ಸಮಸ್ಯೆಗೆ ಸಹ ಜೇನುತುಪ್ಪವನ್ನು ಸೇವಿಸುವುದು ಉತ್ತಮ. ದಿನಕ್ಕೆ 2 ರಿಂದ 3 ಚಮಚ ಜೇನುತುಪ್ಪ ತಿಂದರೆ ಕಫ ಹೊರಬರುತ್ತದೆ.
4/ 8
ಅನಾನಸ್ ಅನಾನಸ್ ಹಣ್ಣು ನಿಮ್ಮ ದೇಹದಲ್ಲಿ ಶೇಖರಣೆ ಆಗಿರುವ ಕಫ ಕರಗಲು ಸಹಾಯ ಮಾಡುತ್ತದೆ. ದಿನಕ್ಕೆ 2 ರಿಂದ 3 ಪೀಸ್ ಅನಾನಸ್ ಹಣ್ಣು ತಿನ್ನುವುದು ಉತ್ತಮ. ಇದು ಶೀತ ಹಾಗೂ ಕೆಮ್ಮಿಗೆ ಸಹ ಪರಿಹಾರ ನೀಡುತ್ತದೆ
5/ 8
ಜ್ಯೇಷ್ಠಮಧು ಈ ಜ್ಯೇಷ್ಠಮಧುವಿನ ಪ್ರಯೋಜನಗಳ ಬಗ್ಗೆ ಪಟ್ಟಿ ಮಾಡುತ್ತಾ ಹೋದರೆ ಮುಗಿಯುವುದಿಲ್ಲ. ಈ ಜ್ಯೇಷ್ಠಮಧುವಿನ ಕಡ್ಡಿಯನ್ನು ಕುದಿಸಿ ಕುಡಿಯುವುದು ಅಥವಾ ಸ್ವಲ್ಪ ಜಜ್ಜಿ ರಸವನ್ನು ಹೀರುತ್ತಿರುವುದು ಕಫ ಕಡಿಮೆ ಆಗಲು ಅಥವಾ ಹೊರ ಬರಲು ಸಹಾಯ ಮಾಡುತ್ತದೆ.
6/ 8
ಏಲಕ್ಕಿ ಏಲಕ್ಕಿ ಸಹ ಚಳಿಗಾಲದಲ್ಲಿ ಕಾಡುವ ಶೀತ ಹಾಗೂ ಕೆಮ್ಮಿಗೆ ಉತ್ತಮ ಮನೆಮದ್ದು ಎನ್ನಲಾಗುತ್ತದೆ, ಏಲಕ್ಕಿಯನ್ನು ಬಿಸಿ ನೀರಿಗೆ ಹಾಕಿ ಕುಡಿಯುವುದು ಅಥವಾ ಏಲಕ್ಕಿ ಚಹಾ ಸೇವನೆ ಮಾಡುವುದು ಕಫದ ಸಮಸ್ಯೆಗೆ ಪರಿಹಾರ ನೀಡುತ್ತದೆ.
7/ 8
ಪುದೀನಾ ಪುದೀನಾ ಎಲೆಗಳಲ್ಲಿರುವ ಅಂಶಗಳು ನಿಮ್ಮ ಗಂಟಲಿನಲ್ಲಿ ಸಿಲುಕಿಕೊಂಡಿರುವ ಕಫವನ್ನು ಕರಗಿಸಲು ಸಹಾಯ ಮಾಡುತ್ತದೆ. 4 ರಿಂದ 5 ಪುದೀನಾ ಎಲೆಗಳನ್ನು ಚೆನ್ನಾಗಿ ತೊಳೆದುಕೊಂಡು , ನೀರಿಗೆ ಹಾಕಿ ಕುದಿಸಿ ಅದಕ್ಕೆ ನಿಂಬೆರಸ ಮಿಕ್ಸ್ ಮಾಡಿ ಕುಡಿಯಿರಿ.
8/ 8
ಥೈಮ್ ಟೀ ಥೈಮ್ ಎಲೆಗಳ ಟೀ ಸಹ ನಿಮಗೆ ಕಫ ಮತ್ತು ಕೆಮ್ಮಿನಿಂದ ಮುಕ್ತಿ ನೀಡುತ್ತದೆ. ಚಳಿಗಾಲದಲ್ಲಿ ಈ ಟೀ ಸೇವನೆ ಮಾಡುವುದು ಶೀತದಿಂದ ಉಂಟಾಗುವ ತಲೆನೋವು ನಿವಾರಿಸಲು ಸಹಾಯ ಮಾಡುತ್ತದೆ.