ಚಹಾವು ಥಿಯೋಫಿಲಿನ್ ಎಂಬ ರಾಸಾಯನಿಕ ಹೊಂದಿದೆ. ಇದು ಮಲದಲ್ಲಿನ ನಿರ್ಜಲೀಕರಣ ಉಂಟು ಮಾಡುತ್ತದೆ. ಮಲಬದ್ಧತೆಗೆ ಕಾರಣವಾಗಬಹುದು. ಹಾಗಾಗಿ ಚಹಾ ಬದಲು ಈ ಪಾನೀಯ ಸೇವಿಸಿ. ಜೇನುತುಪ್ಪ ಮತ್ತು ದಾಲ್ಚಿನ್ನಿ. ಜೇನುತುಪ್ಪ ಮತ್ತು ದಾಲ್ಚಿನ್ನಿಯಿಂದ ಮಾಡಿದ ಪಾನೀಯ ಸೇವಿಸಿ. ಲೋಟ ಉಗುರು ಬೆಚ್ಚಗಿನ ನೀರಿಗೆ 1 ಚಮಚ ಜೇನುತುಪ್ಪ ಮತ್ತು 1/4 ಚಮಚ ದಾಲ್ಚಿನ್ನಿ ಸೇರಿಸಿ ಮಿಶ್ರಣ ಮಾಡಿ ಮತ್ತು ಕುಡಿಯಿರಿ.
ಕೊತ್ತಂಬರಿ ನೀರು ಬೆಳಿಗ್ಗೆ ಕುಡಿದರೆ ಥೈರಾಯ್ಡ್ ಸಮಸ್ಯೆ, ಅಧಿಕ ರಕ್ತದೊತ್ತಡ, ತಲೆನೋವು, ಜ್ವರ, ಶಿಲೀಂಧ್ರ ಅಥವಾ ಸೂಕ್ಷ್ಮಜೀವಿಯ ಸೋಂಕುಗಳು, ಕೊಲೆಸ್ಟ್ರಾಲ್, ಯಕೃತ್ತಿನ ಸಮಸ್ಯೆ ಕಡಿಮೆ ಮಾಡುತ್ತದೆ. ಉರಿಯೂತ ಕಡಿಮೆ ಮಾಡುತ್ತದೆ. ದೃಷ್ಟಿ ಹೆಚ್ಚಿಸುತ್ತದೆ. 2 ಚಮಚ ಕೊತ್ತಂಬರಿ ಬೀಜಗಳನ್ನು ಒಂದು ಲೋಟ ನೀರಿನಲ್ಲಿ ರಾತ್ರಿಯಿಡೀ ಬೆಳಿಗ್ಗೆ ಕೊತ್ತಂಬರಿ ಬೀಜಗಳನ್ನು ಮ್ಯಾಶ್ ಮಾಡಿ. ಬಿಸಿ ಮಾಡಿ, ಚಿಟಿಕೆ ದಾಲ್ಚಿನ್ನಿ ಪುಡಿ ಹಾಕಿ ಕುಡಿಯಿರಿ.