ಮಧ್ಯಪ್ರದೇಶದ ಜಬಲ್ಪುರದಲ್ಲಿ ಜಿಲ್ಲಾಡಳಿತ ಆದೇಶವೊಂದನ್ನು ಹೊರಡಿಸಿದ್ದು, ಇದು ಹೋಟೆಲ್ ಮಾಲೀಕರು ಮತ್ತು ಗ್ರಾಹಕರನ್ನು ಅಚ್ಚರಿಗೊಳಿಸಿದೆ. ನಗರದಲ್ಲಿ ತಂದೂರಿ ರೋಟಿ ತಯಾರಿಕೆಯ ಮೇಲೆ ನಿಷೇಧ ಹೇರಲಾಗಿದೆ. ಏಕೆಂದರೆ ತಂದೂರಿ ರೋಟಿಯಿಂದ ಮಾಲಿನ್ಯ ಉಂಟಾಗುತ್ತದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಒಂದು ವೇಳೆ ಯಾರಾದರೂ ಈ ಆದೇಶವನ್ನು ಉಲ್ಲಂಘಿಸಿದರೆ, ಅವರು 5 ಲಕ್ಷ ರೂಪಾಯಿಗಳವರೆಗೆ ದಂಡವನ್ನು ಪಾವತಿಸಬೇಕಾಗಬಹುದು.
ವಾಸ್ತವವಾಗಿ ತಂದೂರಿ ರೋಟಿಯನ್ನು ತಯಾರಿಸಲು ಮರ ಮತ್ತು ಕಲ್ಲಿದ್ದಲನ್ನು ಬಳಸಲಾಗುತ್ತದೆ. ಇದರಿಂದ ಹೊಗೆ ಹೊರಸೂಸುತ್ತದೆ ಮತ್ತು ವಾಯು ಮಾಲಿನ್ಯ ಹೆಚ್ಚಾಗುತ್ತದೆ. ಅದರ ಬದಲಿಗೆ ಎಲೆಕ್ಟ್ರಿಕ್ ಓವನ್ ಅಥವಾ ಎಲ್ಪಿಜಿ ಗ್ಯಾಸ್ ಸಿಲಿಂಡರ್ಗಳನ್ನು ಬಳಸುವಂತೆ ಸೂಚನೆ ನೀಡಲಾಗಿದೆ. ಆದರೆ ಎಲೆಕ್ಟ್ರಿಕ್ ಓವನ್ ಅಥವಾ ಸಿಲಿಂಡರ್ನಲ್ಲಿ ಮಾಡಿದ ತಂದೂರಿ ರೋಟಿ ರುಚಿಯಾಗಿರುವುದಿಲ್ಲ.