Tamannaah Bhatia: ಮಿಲ್ಕಿ ಬ್ಯೂಟಿಯ ಸೌಂದರ್ಯದ ರಹಸ್ಯ, ನಟಿ ತಮ್ಮನ್ನಾ ಬಳಸೋ ಮನೆಮದ್ದು ಇದು
Tamannaah Bhatia Beauty Secret: ಆರೋಗ್ಯಕರ ಆಹಾರದ ಜೊತೆಗೆ, ಸರಿಯಾದ ತ್ವಚೆಯ ಆರೈಕೆ ಸಹ ಬಹಳ ಮುಖ್ಯವಾಗುತ್ತದೆ. ಸುಂದರಿ ತಮನ್ನಾ ಭಾಟಿಯಾ ಅವರ ಸೌಂದರ್ಯದ ಬಗ್ಗೆ ನಾವು ಹೆಚ್ಚು ಹೇಳುವ ಅವಶ್ಯಕತೆ ಇಲ್ಲ. ಮಿಲ್ಕಿ ಬ್ಯೂಟಿ ಎಂದು ಹೆಸರು ಪಡೆದ ಈ ನಟಿ ಫಾಲೋ ಮಾಡೋದು ಒಂದು ಸಿಂಪಲ್ ಟಿಪ್ಸ್. ಆ ಟಿಪ್ಸ್ ಯಾವುದು ಎಂಬುದು ಇಲ್ಲಿದೆ.
ನಮಗೆ ವಯಸ್ಸಾದಂತೆ, ನಮ್ಮ ಚರ್ಮದ ಗುಣಮಟ್ಟವನ್ನು ಹೆಚ್ಚಿಸಲು ಸಲಹೆಗಳು ಮತ್ತು ಟಿಪ್ಸ್ಗಳನ್ನು ನಾವು ನಿರಂತರವಾಗಿ ಹುಡುಕುತ್ತೇವೆ. 21 ವರ್ಷ ವಯಸ್ಸಿನ ನಂತರ, ಚರ್ಮವು ಪ್ರತಿ ವರ್ಷ 1 ಪ್ರತಿಶತದಷ್ಟು ಕಾಲಜನ್ ಅನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತದೆ. ಅದಕ್ಕೆ ಸೂಕ್ತವಾದ ಆರೈಕೆ ಅಗತ್ಯ.
2/ 8
ವಯಸ್ಸು 30 ಆಗುತ್ತಿದ್ದಂತೆ ನಮ್ಮ ಚರ್ಮವು ಸ್ವಲ್ಪ ಮಸುಕಾಗಿ ಕಾಣುತ್ತದೆ. ಉತ್ತಮ ಪೋಷಣೆ ಮಾಡುವುದು ಮತ್ತು ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಅದಕ್ಕೆ ತಮ್ಮನ್ನಾ ಅವರ ಈ ಟಿಪ್ಸ್ ಫಾಲೋ ಮಾಡಿ.
3/ 8
ನಟಿ ಕೆಲವು ಅದ್ಭುತವಾದ DIY ಮುಖದ ಮಾಸ್ಕ್ಗಳನ್ನು ಬಳಸುತ್ತಾರಂತೆ. ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ, ತಮನ್ನಾ ಅವರು ಮನೆಯಲ್ಲಿ ತಯಾರಿಸಿದ ಮಾಸ್ಕ್ಗಳ ಬಗ್ಗೆ ಹಂಚಿಕೊಂಡಿದ್ದು, ಶ್ರೀಗಂಧ, ಜೇನುತುಪ್ಪ ಮತ್ತು ಕಾಫಿ ಬಳಸಿ ಮಾಸ್ಕ್ ಹಾಕಿಕೊಳ್ಳುತ್ತೇನೆ ಎಂದಿದ್ದಾರೆ.
4/ 8
ಕಾಫಿ ಪುಡಿ, ಶ್ರೀಗಂಧದ ಪುಡಿ ಹಾಗೂ ಜೇನುತುಪ್ಪವನ್ನು ಮಿಕ್ಸ್ ಮಾಡಿಕೊಂಡು ಅದನ್ನು ಮಿಶ್ರಣ ಮಾಡಿಕೊಳ್ಳಿ. ನಂತರ ನಿಮ್ಮ ಮುಖವನ್ನು ಸ್ವಚ್ಛವಾಗಿ ತೊಳೆದು, ಅದಕ್ಕೆ ಈ ಪೇಸ್ಟ್ ಹಚ್ಚಿ. ಅದನ್ನು ಸುಮಾರು 15 ನಿಮಿಷಗಳ ನಂತರ ತೊಳೆದರೆ ಉತ್ತಮ ತ್ವಚೆ ನಿಮ್ಮದಾಗುತ್ತೆ ಎನ್ನುತ್ತಾರೆ ನಟಿ.
5/ 8
ಅಲ್ಲದೇ ನಟಿ, ಕಡಲೆಹಿಟ್ಟು, ಅರಿಶಿನ, ಶ್ರೀಗಂಧ ಮತ್ತು ಬೇವಿನ ಎಲೆಯ ಪುಡಿ ಸೇರಿಸಿ ಮತ್ತೊಂದು ಮಾಸ್ಕ್ ಸಹ ತಯಾರಿಸಿ ಬಳಸುತ್ತಾರಂತೆ. ಈ ಮೂರು ವಸ್ತುಗಳನ್ನು ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿಕೊಂಡರೆ ಮೇಕಪ್ನಿಂದ ಉಂಟಾಗುವ ಸಮಸ್ಯೆ ಬರಲ್ಲ ಎನ್ನುತ್ತಾರೆ.
6/ 8
ಅವರ ಸುಂದರ ತ್ವಚೆಯ ಮತ್ತೊಂದು ಗುಟ್ಟು ಈ ಮುಲ್ತಾನಿ ಮಿಟ್ಟಿ ಫೇಸ್ಪ್ಯಾಕ್. ಮುಲ್ತಾನಿ ಮತ್ತು ಬೇವಿನ ನೀರನ್ನು ಮಿಶ್ರಣ ಮಾಡಿ ಫೇಸ್ ಪ್ಯಾಕ್ ಹಚ್ಚಿ. ಸುಮಾರು 15 ನಿಮಿಷಗಳ ನಂತರ ತೊಳೆದರೆ, ತ್ವಚೆ ಹೊಳೆಯುತ್ತದೆ.
7/ 8
ಅಲೋವೆರಾ ಜೆಲ್ ಅನ್ನು ಬಳಸುವುದು ಮಾಯಿಶ್ಚರೈಸರ್ ರೀತಿ ನಿಮ್ಮ ತ್ವಚೆಯ ಮೇಲೆ ಕಾರ್ಯನಿರ್ವಹಿಸುತ್ತದೆ. ಅಲ್ಲದೇ, ಆವಕಾಡೊ ಮತ್ತು ಬ್ರೊಕೊಲಿಯಂತಹ ಆ್ಯಂಟಿ ಆಕ್ಸಿಡೆಂಟ್ ಹೊಂದಿರುವ ಆಹಾರವನ್ನು ಸೇವಿಸುತ್ತೇನೆ ಎಂದಿದ್ದಾರೆ ನಟಿ.
8/ 8
ಇನ್ನು ಸಮಂತಾ ಬಳಸುವ ಈ ಪ್ರತಿ ಮನೆಮದ್ದುಗಳು ಅವರ ತಾಯಿ ಅವರಿಗೆ ಹೇಳಿಕೊಟ್ಟಿದ್ದಂತೆ, ಅವರ ವೃತ್ತಿಯಲ್ಲಿ ಮೇಕಪ್ ಅಗತ್ಯವಾಗಿರುವುದಿಂದ ರಾಸಾಯನಿಕಗಳ ಪರಿಣಾಮ ಬೀರದಂತೆ ತಡೆಯಲು ಈ ವಸ್ತುಗಳು ಸಹಾಯ ಮಾಡುತ್ತದೆ ಎನ್ನುತ್ತಾರೆ ನಟಿ. ಹಾಗೆಯೇ ಆದಷ್ಟು ಕಡಿಮೆ ಮೇಕಪ್ ಬಳಸುತ್ತಾರಂತೆ.