Silk Saree Care: ಹಳೆ ರೇಷ್ಮೆ ಸೀರೆ ಹೊಸದರಂತೆ ಕಾಣುವಂತೆ ಮಾಡುವುದು ಹೇಗೆ? ಈ ಗುಟ್ಟು ನಿಮಗೆ ಮಾತ್ರ ಗೊತ್ತಿರಲಿ!
Silk saree care: ಪ್ರತಿಯೊಬ್ಬ ಮಹಿಳೆ ತಮ್ಮ ವಾಡ್ ರೂಬ್ನಲ್ಲಿ ರೇಷ್ಮೆ, ಬನಾರಸಿ ಸೀರೆ ಹಾಗೂ ದುಬಾರಿ ಡ್ರೆಸ್ಗಳನ್ನು ಇಟ್ಟಿರುತ್ತಾರೆ. ಬರೀ ಮದುವೆ-ಸಮಾರಂಭಗಳಿಗೆ ಹಾಕಿ ಬಳಿಕ ಹಾಗೇ ಇಡುತ್ತಾರೆ. ರೇಷ್ಮೆ ಬಟ್ಟೆಗಳನ್ನು ಸರಿಯಾಗಿ ಕಾಪಾಡಿಕೊಳ್ಳದಿದ್ರೆ ಅತ್ಯಂತ ದುಬಾರಿ ಸೀರೆ ಹಾಳಾಗಬಹುದು. ಹೀಗಾಗಿ ಹೇಗೆ ರೇಷ್ಮೆ ಬಟ್ಟೆ ನಿರ್ವಹಣೆ ಮಾಡೋದು ಹೇಗೆ ಅನ್ನೋದನ್ನು ತಿಳಿದುಕೊಳ್ಳಿ
ಸಿಲ್ಕ್ ಸೀರೆಗಳು ಮತ್ತು ಸೂಟ್ಗಳು ತುಂಬಾ ಗ್ಲಾಮರಸ್ ಮತ್ತು ರಿಚ್ ಲುಕ್ ನೀಡುತ್ತವೆ. ಆದರೆ ಅದನ್ನು ಸರಿಯಾಗಿ ಕಾಪಾಡಿಕೊಳ್ಳದಿದ್ರೆ ಹಾಳಾಗುತ್ತದೆ. ಅನೇಕರು ತಮ್ಮ ಬಟ್ಟೆಗಳನ್ನು ಧರಿಸಿದ ನಂತರ ಮಡಚುತ್ತಾರೆ. ಇದು ದೀರ್ಘಾವಧಿಯ ನಂತರ ತೆರೆದಾಗ ಬಟ್ಟೆಯ ಕೆಲವು ಮಡಿಕೆ ಹಾಗೇ ಇರುತ್ತೆ ಇದ್ರಿಂದ ಬಟ್ಟೆಯೂ ಹಾಳಾಗುತ್ತದೆ.
2/ 8
ನಿಮ್ಮ ರೇಷ್ಮೆ ಸೀರೆ ಅಥವಾ ಸೂಟ್ ಹೊಚ್ಚ ಹೊಸದಾಗಿ ಕಾಣಬೇಕಂದ್ರೆ. ಹಾಗಾಗೇ ಅದರ ಮಡಿಕೆಗಳನ್ನು ಬದಲಾಯಿಸುತ್ತಿರಿ. ಇದರಿಂದ ಅದು ಒಂದಕ್ಕೊಂದು ಅಂಟಿಕೊಳ್ಳುವುದಿಲ್ಲ.
3/ 8
ಹಾಗಾಗೇ ರೇಷ್ಮೆ ಸೀರೆಗಳನ್ನು ತೆಗೆದು ಮಡಿಚಿದ್ರೆ ಕೀಟಗಳು ಬರುವ ಸಾಧ್ಯತೆ ಕಡಿಮೆ ಮಾಡುತ್ತದೆ.
4/ 8
ಪ್ರತಿ 2-3 ತಿಂಗಳಿಗೊಮ್ಮೆ, ರೇಷ್ಮೆ ಸೀರೆ, ಸೂಟ್ ಬಿಸಿಲಿಗೆ ಒಣಗಿಸಿಡಿ. ಶಿಲೀಂಧ್ರ ಮತ್ತು ಕೆಟ್ಟ ವಾಸನೆ ಬರುವುದಿಲ್ಲ. ಮರದ ಅಥವಾ ಕಬ್ಬಿಣದ ಹ್ಯಾಂಗರ್ಗಳ ಮೇಲೆ ರೇಷ್ಮೆಗಳನ್ನು ನೇತುಹಾಕಬೇಡಿ.
5/ 8
ನೀವು ಮನೆಯಲ್ಲೇ ಸೀರೆ ಅಥವಾ ಸೂಟ್ ಅನ್ನು ತೊಳೆಬೇಕೆಂದ್ರೆ, ತಪ್ಪಾಗಿಯೂ ಡಿಟರ್ಜೆಂಟ್ ಅನ್ನು ಬಳಸಬೇಡಿ. ಶಾಂಪೂವಿನಲ್ಲಿ ತೊಳೆದು ಬಿಸಿಲಿನಲ್ಲಿ ಒಣಗಿಸಬೇಡಿ.
6/ 8
ಹೀಗೆ ಮಾಡುವುದರಿಂದ ಸೀರೆ ಬಣ್ಣ ಹೋಗುತ್ತದೆ. ಟಾಲ್ಕಮ್ ಪೌಡರ್ ಅನ್ನು ಸ್ಟೇನ್ ಮೇಲೆ ಉಜ್ಜಿ ನಂತರ ಟಿಶ್ಯೂ ಪೇಪರ್ ಅಥವಾ ಕ್ಲೀನ್ ಬಟ್ಟೆಯಿಂದ ಒರೆಸಬೇಕು.
7/ 8
ಸೀರೆಗಳು ಮತ್ತು ಸೂಟ್ಗಳ ನಡುವೆ ಆಕಸ್ಮಿಕವಾಗಿ ಬಣ್ಣದ ಬಟ್ಟೆ ಇಡಬೇಡಿ, ಇದ್ರಿಂದ ಸೀರೆಯ ಬಟ್ಟೆಗೆ ಹಾನಿಯಾಗಬಹುದು.
8/ 8
ಸೀರೆ ಹಾಕಿದ ಬಳಿಕ ಬೆವರಿನ ಕಲೆ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಅವುಗಳನ್ನು ಗಾಳಿಯಲ್ಲಿ ಒಣಗಿಸುವುದು ಉತ್ತಮ