Holiday Plan: ಈ ಬೇಸಿಗೆಯಲ್ಲಿ ರಾಜ್ಯದ ಪ್ರಸಿದ್ಧ ಸ್ಥಳಗಳಿಗೆ ಮಕ್ಕಳೊಂದಿಗೆ ಹೋಗಿ ಬನ್ನಿ

ಕೆಲವೊಂದು ಮಕ್ಕಳಿಗೆ ಪರೀಕ್ಷೆ ಮುಗಿದಿದೆ, ಇನ್ನೂ ಕೆಲವರಿಗೆ ಇನ್ನೇನು ಪರೀಕ್ಷೆ ಮುಗಿಯಲಿದೆ. ಹಿಂದಿನ ವರ್ಷವೆಲ್ಲ ಕೊರೋನ ಭಯದಿಂದ ಮನೆಯಲ್ಲೇ ಇದ್ದಿದ್ದಾಯ್ತು, ಆದ್ರೆ ಈ ಬಾರಿ ನೀವು ನಿಮ್ಮ ಮಕ್ಕಳೊಂದಿಗೆ ಒಂದೊಳ್ಳೆ ಟ್ರಿಪ್ ಮುಗಿಸಿ ಬರಬಹುದು. ಹಾಗಿದ್ರೆ ಯಾವ ಪ್ಲೇಸ್‌ಗೆ ಹೋಗ್ಬೇಕು? ಅಯ್ಯೋ ಅಲ್ಲೆಲೋ ದೂರ ಬೇಡ, ನಮ್ಮ ರಾಜ್ಯದಲ್ಲಿ ಇವೆ ಬೆಸ್ಟ್ ಟೂರಿಸ್ಟ್ ಪ್ಲೇಸ್. ಈ ಬಗ್ಗೆ ಮಾಹಿತಿ ಇಲ್ಲಿದೆ...

First published:

  • 18

    Holiday Plan: ಈ ಬೇಸಿಗೆಯಲ್ಲಿ ರಾಜ್ಯದ ಪ್ರಸಿದ್ಧ ಸ್ಥಳಗಳಿಗೆ ಮಕ್ಕಳೊಂದಿಗೆ ಹೋಗಿ ಬನ್ನಿ

    ಕರ್ನಾಟಕ ರಾಜಧಾನಿ ಬೆಂಗಳೂರು, ಪವಿತ್ರವಾದ ದೇವಾಲಯಗಳಿಗೆ, ಸುಂದರವಾದ ಉದ್ಯಾನವನಗಳಿಗೆ, ಪಬ್ಗಳಿಗೆ, ಟಿಪ್ಪು ಸುಲ್ತಾನರ ಬೇಸಿಗೆ ಅರಮನೆಗೆ ಹೆಸರುವಾಸಿಯಾಗಿದೆ. ಅಲ್ಲದೆ, ಇಲ್ಲಿ ಸಿಟಿ ಪ್ಯಾಲೇಸ್, ಎಚ್ಎ ಎಲ್ ಮ್ಯೂಸಿಯಂ, ಸ್ನೋ ಸಿಟಿ ಮತ್ತು ಲುಂಬಿನಿ ಗಾರ್ಡನ್ಗಳಂತಹ ಕೆಲವು ಅದ್ಭುತವಾದ ಪ್ರೇಕ್ಷಣೀಯ ತಾಣಗಳಿಗೆ ಭೇಟಿ ನೀಡಬಹುದು. (ಚಿತ್ರಕೃಪೆ: Internet)

    MORE
    GALLERIES

  • 28

    Holiday Plan: ಈ ಬೇಸಿಗೆಯಲ್ಲಿ ರಾಜ್ಯದ ಪ್ರಸಿದ್ಧ ಸ್ಥಳಗಳಿಗೆ ಮಕ್ಕಳೊಂದಿಗೆ ಹೋಗಿ ಬನ್ನಿ

    ಚಿತ್ರದುರ್ಗ ಕರ್ನಾಟಕದ ಪ್ರಸಿದ್ಧವಾದ ಐತಿಹಾಸಿಕ ತಾಣವಾಗಿದೆ. ಕಲ್ಲಿನ ಕೋಟೆ ಎಂದೇ ಕರೆಯಲಾಗುವ ಚಿತ್ರದುರ್ಗವು ಅನೇಕ ಪ್ರೇಕ್ಷಣೀಯ ಸ್ಥಳಗಳನ್ನು ಹೊಂದಿದೆ. ಕೋಟೆಯ ವಿಸ್ತಾರವಾದ ಅವಶೇಷಗಳು, ಅದ್ಭುತವಾದ ವಾಸ್ತುಶಿಲ್ಪ ಮತ್ತು ನೋಟವು ಇತಿಹಾಸಕಾರರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಚಿತ್ರದುರ್ಗದ ಕೋಟೆಯಲ್ಲಿಯೇ ಅನೇಕ ಆಕರ್ಷಣೆಗಳg ತುಂಬಿದೆ. ಅವುಗಳಲ್ಲಿ ದೇವಾಲಯಗಳು, ಒನಕೆ ಓಬವ್ವನ ಕಿಂಡಿ ಇನ್ನು ಅನೇಕ ಸ್ಥಳಗಳಿವೆ. (ಚಿತ್ರಕೃಪೆ: Internet)

    MORE
    GALLERIES

  • 38

    Holiday Plan: ಈ ಬೇಸಿಗೆಯಲ್ಲಿ ರಾಜ್ಯದ ಪ್ರಸಿದ್ಧ ಸ್ಥಳಗಳಿಗೆ ಮಕ್ಕಳೊಂದಿಗೆ ಹೋಗಿ ಬನ್ನಿ

    ಹಂಪಿಯು ಕರ್ನಾಟಕದ ಐತಿಹಾಸಿಕತೆಯನ್ನು ನೆನಪಿಸುವ ಸುಂದರವಾದ ತಾಣ. ಒಂದು ಕಾಲದಲ್ಲಿ ಭವ್ಯ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಹಂಪಿ ಕರ್ನಾಟಕದ ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಇಲ್ಲಿ ವಿಜಯನಗರ ಸಾಮ್ರಾಜ್ಯದ ಕುತೂಹಲಕಾರಿ ಅವಶೇಷಗಳನ್ನು ನೀವು ಕಾಣಬಹುದು. ಇತಿಹಾಸ ಪ್ರೇಮಿಗಳು ನೀವಾಗಿದ್ದರೆ ಕುಟುಂಬದವರೊಂದಿಗೆ ಹಂಪಿಗೆ ಪ್ರವಾಸ ಕೈಗೊಳ್ಳಿ. ಏಕೆಂದರೆ ಇಲ್ಲಿ ಅದ್ಭುತವಾದ ದೇವಾಲಯಗಳು, ಆಕರ್ಷಕ ಐತಿಹಾಸ ಸೌಂದರ್ಯವನ್ನು ತನ್ನಲ್ಲಿ ಭದ್ರವಾಗಿ ಅಡಗಿಸಿಕೊಂಡಿದೆ. ಹಂಪಿಯ ಪ್ರವಾಸ ಕೈಗೊಂಡಾಗ ವಿಜಯ ವಿಠಲ ದೇವಾಲಯದಲ್ಲಿನ ಸಂಗೀತ ಸ್ತಂಭದ ದರ್ಶನವನ್ನು ತಪ್ಪಿಸಿಕೊಳ್ಳಬೇಡಿ. (ಚಿತ್ರಕೃಪೆ: Internet)

    MORE
    GALLERIES

  • 48

    Holiday Plan: ಈ ಬೇಸಿಗೆಯಲ್ಲಿ ರಾಜ್ಯದ ಪ್ರಸಿದ್ಧ ಸ್ಥಳಗಳಿಗೆ ಮಕ್ಕಳೊಂದಿಗೆ ಹೋಗಿ ಬನ್ನಿ

    ಕೊಡಗು ಶ್ರೀಮಂತ ಪ್ರಾಕೃತಿಕ ನೋಟಗಳನ್ನು ಅನಾವರಣಗೊಳಿಸುವ ಸುಂದರವಾದ ತಾಣಗಳನ್ನು ಹೊಂದಿದೆ. ಮನಮೋಹಕವಾದ ಕಾಫಿ ಮತ್ತು ಸಾಂಬಾರು ಪದಾರ್ಥಗಳ ತೋಟಗಳು ಆಹ್ಲಾದಕರವಾದ ವಾತಾವರಣವನ್ನು ಸೃಷ್ಟಿಸುತ್ತದೆ. ಇಲ್ಲಿ ನಯನ ಮನೋಹರವಾದ ಪ್ರಾಕೃತಿಕ ನೋಟ, ಸುಂದರವಾದ ಜಲಪಾತಗಳು, ಮಂಜಿನ ಭೂದೃಶ್ಯಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಇದೇ ಕಾರಣದಿಂದಲೇ ಕೂರ್ಗ್ ಅನ್ನು ‘ಭಾರತದ ಸ್ಕಾಟೆಂಡ್’ ಎಂದು ಕರೆಯಲಾಗುತ್ತದೆ. ಕೂರ್ಗ್ನಲ್ಲಿ ಅಬ್ಬೆ ಜಲಪಾತ, ಮಡಿಕೇರಿ ಕೋಟೆ, ಬೌದ್ಧ ಮಠಗಳು, ತಲಕಾವೇರಿ, ರಾಜ ಸೀಟ್ನಂಹ ಸುಂದರ ಪ್ರೇಕ್ಷಣೀಯ ಸ್ಥಳಗಳನ್ನು ನೀವು ಅನ್ವೇಷಿಸಬಹುದು. (ಚಿತ್ರಕೃಪೆ: Internet)

    MORE
    GALLERIES

  • 58

    Holiday Plan: ಈ ಬೇಸಿಗೆಯಲ್ಲಿ ರಾಜ್ಯದ ಪ್ರಸಿದ್ಧ ಸ್ಥಳಗಳಿಗೆ ಮಕ್ಕಳೊಂದಿಗೆ ಹೋಗಿ ಬನ್ನಿ

    ಕರ್ನಾಟಕದ ಅತ್ಯಂತ ಹಳೆಯ ಮತ್ತು ದೊಡ್ಡ ನಗರಗಳಲ್ಲಿ ಒಂದಾದ ಮೈಸೂರು ಅರಮನೆಯು ಅದರ ವೈಭವಕ್ಕಾಗಿ ಹೆಸರುವಾಸಿಯಾಗಿದೆ. ಮೈಸೂರಿನಲ್ಲಿ ವಿಶ್ವವಿಖ್ಯಾತಿ ಮೈಸೂರು ಅರಮನೆ ಇದೆ. ಇನ್ನು ಮೃಗಾಲಯ, ಹಲವಾರು ಪವಿತ್ರವಾದ ದೇವಾಲಯಗಳಿಗೆ ನೆಲೆಯಾಗಿದೆ. ಬೃಂದಾವನ ಉದ್ಯಾನವನವು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. (ಚಿತ್ರಕೃಪೆ: Internet)

    MORE
    GALLERIES

  • 68

    Holiday Plan: ಈ ಬೇಸಿಗೆಯಲ್ಲಿ ರಾಜ್ಯದ ಪ್ರಸಿದ್ಧ ಸ್ಥಳಗಳಿಗೆ ಮಕ್ಕಳೊಂದಿಗೆ ಹೋಗಿ ಬನ್ನಿ

    ಉತ್ತರ ಕನ್ನಡದ ಕುಮಟಾ ತಾಲೂಕಿನ ಗೋಕರ್ಣ ಒಂದು ಪ್ರವಾಸಿ ಹಾಗೂ ಧಾರ್ಮಿಕ ಕ್ಷೇತ್ರ. ಇಲ್ಲಿನ ಓಂ ಬೀಚ್ ಕರ್ನಾಟಕದ ಪ್ರವಾಸಿಗರ ನೆಚ್ಚಿನ ತಾಣವಾಗಿದೆ.ಮಹಾಶಿವನು ಗೋಕರ್ಣದಲ್ಲಿ ಲಿಂಗ ಸ್ವರೂಪಿಯಾಗಿ ನೆಲೆಸಿದ್ದಾನೆ. ಸ್ವಾಮಿಯನ್ನು ದರ್ಶನ ಮಾಡಿಕೊಳ್ಳಲು ದೇಶದ ಮೂಲೆ ಮೂಲೆಗಳಿಂದ ಹಿಂದೂ ಭಕ್ತರು ಗೋಕರ್ಣಕ್ಕೆ ಭೇಟಿ ನೀಡುತ್ತಾರೆ. ಗೋಕರ್ಣ ಸುಂದರವಾದ ಕಡಲತೀರಗಳಿಗೆ, ದೇವಾಲಯಗಳಿಗೆ ಹೆಸರುವಾಸಿಯಾಗಿದೆ. (ಚಿತ್ರಕೃಪೆ: Internet)

    MORE
    GALLERIES

  • 78

    Holiday Plan: ಈ ಬೇಸಿಗೆಯಲ್ಲಿ ರಾಜ್ಯದ ಪ್ರಸಿದ್ಧ ಸ್ಥಳಗಳಿಗೆ ಮಕ್ಕಳೊಂದಿಗೆ ಹೋಗಿ ಬನ್ನಿ

    ಸಕಲೇಶಪುರವು ಬಹಳಷ್ಟು ಜನರ ನೆಚ್ಚಿನ ಪ್ರವಾಸಿತಾಣವಾಗಿದೆ. ಹಚ್ಚಹಸಿರಿನ ಪಶ್ಚಿಮ ಘಟ್ಟಗಳ ತಪ್ಪಲಲ್ಲಿ ನೆಲೆನಿಂತಿರುವ ಇದೊಂದು ಆಕರ್ಷಕ ತಾಣವಾಗಿದೆ. ಸಕಲೇಶಪುರವು ಹಾಸನ ಜಿಲ್ಲೆಯ ಒಂದು ಗಿರಿಧಾಮ ಪಟ್ಟಣ ಮತ್ತು ಜಿಲ್ಲೆಯ ತಾಲ್ಲೂಕು ಕೇಂದ್ರವಾಗಿದೆ. ಪಶ್ಚಿಮ ಘಟ್ಟಗಳ ತಪ್ಪಲಲ್ಲಿದ್ದು ಮಲೆನಾಡ ಪ್ರದೇಶದಲ್ಲಿದೆ. ಮಲೆನಾಡಿನ ಮಡಿಲಲ್ಲಿ ಹೇಮಾವತಿ ನದಿಯ ದಡದಲ್ಲಿರುವುದೇ ಈ ಸಕಲೇಶಪುರ. ಇಲ್ಲಿನ ಮಂಜರಾಬಾದ್‌ ಪೋರ್ಟ್ ನಕ್ಷತ್ರದ ಆಕಾರದಲ್ಲಿದೆ. (ಚಿತ್ರಕೃಪೆ: Internet)

    MORE
    GALLERIES

  • 88

    Holiday Plan: ಈ ಬೇಸಿಗೆಯಲ್ಲಿ ರಾಜ್ಯದ ಪ್ರಸಿದ್ಧ ಸ್ಥಳಗಳಿಗೆ ಮಕ್ಕಳೊಂದಿಗೆ ಹೋಗಿ ಬನ್ನಿ

    ಉಡುಪಿಯು ಶ್ರೀ ಕೃಷ್ಣನ ದೇವಾಲಯ, ಆಹ್ಲಾದಕರವಾದ ಕಡಲತೀರಗಳಿಂದ ನಿಮ್ಮನ್ನು ಆಕರ್ಷಿಸುತ್ತವಲೆ. ಕರಾವಳಿ ಭಕ್ಷ್ಯಗಳನ್ನು ನೀವು ಇಲ್ಲಿ ಸವಿಯಬಹುದು. ಉಡುಪಿಯ ಪ್ರವಾಸವು ಮಂತ್ರಮುಗ್ಧರನ್ನಾಗಿಸುವುದಂತು ಸತ್ಯ. ಉಡುಪಿಯಲ್ಲಿ ಪ್ರಸಿದ್ಧ ಮಲ್ಪೆ ಬೀಚ್, ಮರವಂತೆ ಬೀಚ್, ಕಾಪು ಬೀಚ್, ಸೆಂಟ್ ಮ್ಯಾರಿಸ್ ದ್ವೀಪ, ಕೊಲ್ಲೂರು ಮೂಕಾಂಬಿಕಾ ದೇವಾಲಯ, ಮಹಿಷ ಮರ್ದಿನಿ ದೇವಾಲಯ ಸೇರಿದಂತೆ ಅನೇಕ ಪ್ರವಾಸಿ ಸ್ಥಳಗಳನ್ನು ಕಣ್ತುಂಬಿಕೊಳ್ಳಬಹುದು. . (ಚಿತ್ರಕೃಪೆ: Internet)

    MORE
    GALLERIES