Lemon Leaves: ನಿಂಬೆ ಎಲೆಯಲ್ಲೂ ಅಡಗಿದೆ ಆರೋಗ್ಯ ರಹಸ್ಯ, ಹೀಗೆ ಯೂಸ್ ಮಾಡಿ
Lemon Leaves Benefits: ನಿಂಬೆಹಣ್ಣು ಕೇವಲ ಒಂದು ಪ್ರಯೋಜನವನ್ನು ಹೊಂದಿಲ್ಲ, ಸಾವಿರಾರು ರೀತಿಯಲ್ಲಿ ನಮಗೆ ದಿನನಿತ್ಯ ಸಹಾಯ ಮಾಡುತ್ತದೆ. ಆದರೆ ಕೇವಲ ಹಣ್ಣು ಮಾತ್ರ ಅಲ್ಲ ಅದರ ಸಿಪ್ಪೆ ಸಹ ಹಲವು ಪ್ರಯೋಜನಗಳನ್ನು ಹೊಂದಿದೆ ಎಂದು ಹಲವಾರು ಜನರಿಗೆ ಗೊತ್ತು. ಆದರೆ ಅದರ ಎಲೆ? ನಿಂಬೆ ಎಲೆಯನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಆದರೆ ಈ ನಿಂಬೆ ಎಲೆಯಿಂದ ಸಹ ಹಲವು ಲಾಭಗಳಿದೆ.
ನಿಂಬೆಹಣ್ಣು ಕೇವಲ ಒಂದು ಪ್ರಯೋಜನವನ್ನು ಹೊಂದಿಲ್ಲ, ಸಾವಿರಾರು ರೀತಿಯಲ್ಲಿ ನಮಗೆ ದಿನನಿತ್ಯ ಸಹಾಯ ಮಾಡುತ್ತದೆ. ಆದರೆ ಕೇವಲ ಹಣ್ಣು ಮಾತ್ರ ಅಲ್ಲ ಅದರ ಸಿಪ್ಪೆ ಸಹ ಹಲವು ಪ್ರಯೋಜನಗಳನ್ನು ಹೊಂದಿದೆ ಎಂದು ಹಲವಾರು ಜನರಿಗೆ ಗೊತ್ತು. ಆದರೆ ಅದರ ಎಲೆ? ನಿಂಬೆ ಎಲೆಯನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಆದರೆ ಈ ನಿಂಬೆ ಎಲೆಯಿಂದ ಸಹ ಹಲವು ಲಾಭಗಳಿದೆ.
2/ 8
ಈ ನಿಂಬೆ ಎಲೆಯಲ್ಲಿ ಸಹ ಹಲವಾರು ಪೋಷಕಾಂಶಗಳಿದೆ. ಇದರಲ್ಲಿ ವಿಟಮಿನ್ ಎ, ಬಿ1, ಸಿ, ಆಂಟಿಆಕ್ಸಿಡೆಂಟ್, ಸಿಟ್ರಿಕ್ ಆಮ್ಲ, ಫ್ಲೇವನಾಯ್ಡ್, ಕಬ್ಬಿಣ, ರಂಜಕಗಳಿದ್ದು, ವಿವಿಧ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.
3/ 8
ಎಲೆಯನ್ನು ಬಳಸುವುದು ಹೇಗೆ?: 10 ರಿಂದ 15 ನಿಂಬೆ ಎಲೆಗಳನ್ನು ತೆಗೆದುಕೊಂಡು ಚನ್ನಾಗಿ ತೊಳೆದುಕೊಳ್ಳಿ. ನಂತರ ಇದನ್ನು ನೀರಿಗೆ ಹಾಕಿ ಕುದಿಸಿ. ಈ ನೀರು ಬೆಚ್ಚಗಾದ ನಂತರ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಇದಕ್ಕೆ ಬೇಕಾದರೆ ಜೇನುತುಪ್ಪ ಸೇರಿಸಬಹುದು.
4/ 8
ತಲೆನೋವು ಕಡಿಮೆ ಮಾಡುತ್ತದೆ: ಕೆಲವೊಮ್ಮೆ ತಲೆನೋವು ಬಂದರೆ ಹೋಗುವುದೇ ಇಲ್ಲ. ಕೆಲವರು ಇದಕ್ಕೆ ಮಾತ್ರೆಗಳ ಮೊರೆ ಹೋಗುತ್ತಾರೆ,. ಆದರೆ ಇದು ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಅದರ ಬದಲು ಈ ನಿಂಬೆ ಎಲೆಯ ನೀರು ಕುಡಿಯಿರಿ ಸಾಕು.
5/ 8
ಕಿಡ್ನಿ ಸಮಸ್ಯೆಗೆ: ಇತ್ತೀಚಿನ ದಿನಗಳಲ್ಲಿ ಹಲವಾರು ಜನರನ್ನು ಈ ಕಿಡ್ನಿ ಸಮಸ್ಯೆ ಕಾಡುತ್ತಿದೆ. ಕಿಡ್ನಿಯಲ್ಲಿ ಕಲ್ಲು ಸಾಮಾನ್ಯವಾಗಿದೆ. ಈ ನಿಂಬೆ ಎಲೆಯ ನೀರನ್ನು ಕುಡಿಯುವುದು ಕಲ್ಲು ಹೋಗಲಾಡಿಸಲು ಸಹಾಯ ಮಾಡುತ್ತದೆ. ಅಲ್ಲದೇ, ಕಿಡ್ನಿಯಲ್ಲಿ ಕಲ್ಲು ಆಗದಂತೆ ನೋಡಿಕೊಳ್ಳುತ್ತದೆ.
6/ 8
ಆತಂಕ ನಿವಾರಣೆ ಮಾಡುತ್ತದೆ: ಕೆಲವರಿಗೆ ಸಣ್ಣ ಸಣ್ಣ ವಿಚಾರಕ್ಕೆ ಆತಂಕ ಉಂಟಾಗುತ್ತದೆ. ಏನು ಮಾಡಬೇಕು ಎಂದು ಅರ್ಥವಾಗದೇ ವಿಲವಿಲ ಒದ್ದಾಡುತ್ತಾರೆ. ಈ ನಿಂಬೆ ಎಲೆಯ ನೀರು ಆತಂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
7/ 8
ಟೆನ್ಷನ್ ಕಡಿಮೆ ಮಾಡುತ್ತದೆ: ಟೆನ್ಷನ್ ಆಗುವುದು ಎಲ್ಲರಿಗೂ ಸಾಮಾನ್ಯ. ಯಾವುದಾದರೂ ಮುಖ್ಯ ಘಟನೆ ಅಥವಾ ಕೆಲಸ ಇದ್ದಾಗ ಅದು ಹೇಗೆ ಆಗುತ್ತದೆ ಎನ್ನುವ ಬಗ್ಗೆ ಟೆನ್ಷನ್ ಇರುತ್ತದೆ. ಆದರೆ ಈ ನಿಂಬೆ ಎಲೆಯ ನೀರು ಅದಕ್ಕೆ ಪರಿಹಾರ ನೀಡುತ್ತದೆ.
8/ 8
ನಿದ್ರೆ ಬರಲು ಕಾರಣ: ಈ ಒತ್ತಡದ ಕಾರಣದಿಂದ ಹಲವಾರು ಜನರು ಸರಿಯಾಗಿ ನಿದ್ದೆ ಮಾಡಲು ಆಗುತ್ತಿಲ್ಲ. ಇದು ಬೇರೆ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ನೀವು ಮಲಗುವ ಮುನ್ನ ಈ ನಿಂಬೆ ಎಲೆಯ ನೀರನ್ನು ಕುಡಿದರೆ ಲಾಭವಿದೆ.