ಹಾಗಲ ಕಾಯಿ ಕಹಿಯನ್ನು ಹೋಗಲಾಡಿಸಲು ನೀವು ಮೊಸರನ್ನು ಬಳಸಬಹುದು. ಹಾಗಲಕಾಯಿ ಕಹಿಯನ್ನು ಮೊಸರಿನಿಂದ ನಿಮಿಷಗಳಲ್ಲಿ ತೆಗೆದು ಹಾಕಿ. ಮೊಸರು ಕಹಿಯನ್ನು ತಟಸ್ಥಗೊಳಿಸುತ್ತದೆ. ಇದಕ್ಕಾಗಿ ನೀವು ಹಾಗಲಕಾಯಿಯನ್ನು ಕತ್ತರಿಸಿ ಮೊಸರಿಗೆ ಹಾಕಿ. ಮೊಸರಲ್ಲಿ 20 ರಿಂದ 25 ನಿಮಿಷಗಳ ಕಾಲ ನೆನೆಸಿ. ಹೀಗೆ ಮಾಡುವುದರಿಂದ ಕಹಿ ನಿವಾರಣೆಯಾಗುತ್ತದೆ ಮತ್ತು ತರಕಾರಿಗಳನ್ನು ತಿಂದಾಗ ಉತ್ತಮ ರುಚಿಯನ್ನು ಪಡೆಯುತ್ತದೆ.