Wheatgrass Benefits: ವೀಟ್ ಗ್ರಾಸ್​ನಿಂದ ಭಾರೀ ಆರೋಗ್ಯ ಲಾಭ, ಥೈರಾಯ್ಡ್​ ಸಮಸ್ಯೆಯೂ ಮಾಯ!

ವೀಟ್ ಗ್ರಾಸ್ ಒಂದು ಸೂಪರ್ ಫುಡ್. ಇದು ಸಾಕಷ್ಟು ಪೌಷ್ಠಿಕಾಂಶದಿಂದ ಸಮೃದ್ಧವಾಗಿದೆ. ವೀಟ್ ಗ್ರಾಸ್ ಅಂದ್ರೆ ಗೋಧಿ ಹುಲ್ಲು. ಇದು ಕ್ಯಾನ್ಸರ್ ಸೇರಿದಂತೆ ಹಲವು ಆರೋಗ್ಯ ಪ್ರಯೋಜನ ನೀಡುತ್ತದೆ. ವೀಟ್ ಗ್ರಾಸ್ ನ್ನು ಹಲವು ಔಷಧೀಯ ಉತ್ಪನ್ನವಾಗಿಯೂ ಬಳಕೆ ಮಾಡ್ತಾರೆ. ವೀಟ್ ಗ್ರಾಸ್ ಕ್ಲೋರೊಫಿಲ್ ಹೊಂದಿದೆ. ಹಾಗಾದ್ರೆ ವೀಟ್ ಗ್ರಾಸ್ ಯಾವೆಲ್ಲಾ ಆರೋಗ್ಯ ಪ್ರಯೋಜನ ನೀಡುತ್ತದೆ ಎಂದು ತಿಳಿಯೋಣ.

First published:

  • 18

    Wheatgrass Benefits: ವೀಟ್ ಗ್ರಾಸ್​ನಿಂದ ಭಾರೀ ಆರೋಗ್ಯ ಲಾಭ, ಥೈರಾಯ್ಡ್​ ಸಮಸ್ಯೆಯೂ ಮಾಯ!

    ವೀಟ್ ಗ್ರಾಸ್ನಲ್ಲಿ 70 ಪ್ರತಿಶತ ಕ್ಲೋರೊಫಿಲ್ ಇದೆ. ಹೀಗಾಗಿ ಇದನ್ನು ಗ್ರೀನ್ ಬ್ಲಡ್ ಎಂದು ಕರೆಯುತ್ತಾರೆ. ವೀಟ್ ಗ್ರಾಸ್ ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಸಿ, ವಿಟಮಿನ್ ಇ ಮತ್ತು ವಿವಿಧ ಕಿಣ್ವಗಳನ್ನು ಹೊಂದಿದೆ. ಕ್ಯಾಲ್ಸಿಯಂ, ಕಬ್ಬಿಣ, ಸೋಡಿಯಂ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ಸತು, ಸೆಲೆನಿಯಮ್, ಪ್ರೋಟೀನ್, ಅಮೈನೋ ಆಮ್ಲ ಹೊಂದಿದೆ.

    MORE
    GALLERIES

  • 28

    Wheatgrass Benefits: ವೀಟ್ ಗ್ರಾಸ್​ನಿಂದ ಭಾರೀ ಆರೋಗ್ಯ ಲಾಭ, ಥೈರಾಯ್ಡ್​ ಸಮಸ್ಯೆಯೂ ಮಾಯ!

    ಸೂಪರ್ ಫುಡ್ ಗೋಧಿ ಹುಲ್ಲನ್ನು ಆಹಾರದಲ್ಲಿ ಸೇರಿಸಿ. 25 ರಿಂದ 30 ಗ್ರಾಂ ಗೋಧಿ ಹುಲ್ಲಿಗೆ ಎರಡು ಚಮಚ ನೀರು ಬೆರೆಸಿ ಚೆನ್ನಾಗಿ ಮ್ಯಾಶ್ ಮಾಡಿ. ಶೋಧಿಸಿ ರಸ ತೆಗೆಯಿರಿ. ನಂತರ ರಸ ಸೇವಿಸಿ. ಇದು ಆರೋಗ್ಯ ವೃದ್ಧಿಸುತ್ತದೆ. ನಿಯಮಿತವಾಗಿ ವೀಟ್ ಗ್ರಾಸ್ ರಸ ಕುಡಿಯಿರಿ. ಪೌಡರ್ ಮಾಡಿ, ಹಾಲು, ಸ್ಮೂಥಿ, ತಿಂಡಿ ಜೊತೆ ಸೇವಿಸಿ.

    MORE
    GALLERIES

  • 38

    Wheatgrass Benefits: ವೀಟ್ ಗ್ರಾಸ್​ನಿಂದ ಭಾರೀ ಆರೋಗ್ಯ ಲಾಭ, ಥೈರಾಯ್ಡ್​ ಸಮಸ್ಯೆಯೂ ಮಾಯ!

    ಗೋಧಿ ಹುಲ್ಲು ಕ್ಲೋರೊಫಿಲ್ ಹೊಂದಿದ್ದು, ಇದು ದೇಹದಲ್ಲಿ ಹಿಮೋಗ್ಲೋಬಿನ್ ರಚನೆಗೆ ಸಹಕಾರಿ. ಕ್ಲೋರೊಫಿಲ್ ಕೆಂಪು ರಕ್ತ ಕಣಗಳ ಬೆಳವಣಿಗೆ ಉತ್ತೇಜಿಸುತ್ತದೆ. ಹಿಮೋಗ್ಲೋಬಿನ್ ಮಟ್ಟ ಸಮತೋಲನಗೊಳಿಸುತ್ತದೆ. ರಕ್ತಹೀನತೆ ಸಮಸ್ಯೆ ನಿವಾರಣೆಗೆ ಸಹಕಾರಿ.

    MORE
    GALLERIES

  • 48

    Wheatgrass Benefits: ವೀಟ್ ಗ್ರಾಸ್​ನಿಂದ ಭಾರೀ ಆರೋಗ್ಯ ಲಾಭ, ಥೈರಾಯ್ಡ್​ ಸಮಸ್ಯೆಯೂ ಮಾಯ!

    ವೀಟ್‌ಗ್ರಾಸ್‌ನಲ್ಲಿ ಕಿಣ್ವಗಳು ಜೀರ್ಣಕ್ರಿಯೆ ಸುಧಾರಿಸುತ್ತವೆ. ಇದು ದೇಹದಲ್ಲಿ ಪೋಷಕಾಂಶಗಳ ಹೀರಿಕೊಳ್ಳುವಿಕೆ ಹೆಚ್ಚಿಸುತ್ತದೆ. ದೇಹದಲ್ಲಿರುವ ತ್ಯಾಜ್ಯವನ್ನು, ವಿಷವನ್ನು ಹೊರಗೆ ಹಾಕಲು ಸಹಾಯ ಮಾಡುತ್ತದೆ. ಗೋಧಿ ಹುಲ್ಲಿನಲ್ಲಿರುವ ಪೋಷಕಾಂಶಗಳು ದೇಹದಿಂದ ಸಂಗ್ರಹವಾದ ಕಲ್ಮಶ ತೆಗೆದು ಹಾಕುತ್ತದೆ.

    MORE
    GALLERIES

  • 58

    Wheatgrass Benefits: ವೀಟ್ ಗ್ರಾಸ್​ನಿಂದ ಭಾರೀ ಆರೋಗ್ಯ ಲಾಭ, ಥೈರಾಯ್ಡ್​ ಸಮಸ್ಯೆಯೂ ಮಾಯ!

    ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ದೇಹವನ್ನು ವಿವಿಧ ರೋಗಗಳು ಮತ್ತು ಸೋಂಕು ಆವರಿಸದಂತೆ ತಡೆಯುತ್ತದೆ. ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ದೀರ್ಘಕಾಲದವರೆಗೆ ತೃಪ್ತಿಪಡಿಸುತ್ತದೆ. ಅತಿಯಾದ ಕ್ಯಾಲೋರಿ ಸೇವನೆ ತಡೆಯುತ್ತದೆ.

    MORE
    GALLERIES

  • 68

    Wheatgrass Benefits: ವೀಟ್ ಗ್ರಾಸ್​ನಿಂದ ಭಾರೀ ಆರೋಗ್ಯ ಲಾಭ, ಥೈರಾಯ್ಡ್​ ಸಮಸ್ಯೆಯೂ ಮಾಯ!

    ವೀಟ್ ಗ್ರಾಸ್ ರಸ ಸೇವನೆ ಚಯಾಪಚಯ ಕ್ರಿಯೆ ಹೆಚ್ಚಿಸುತ್ತದೆ. ಮತ್ತು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ, ವೀಟ್ ಗ್ರಾಸ್ ಕಡಿಮೆ ಕ್ಯಾಲೋರಿ ಹೊಂದಿದೆ. ಕೊಬ್ಬು ಕಡಿಮೆ. ವೀಟ್ ಗ್ರಾಸ್ ಒಂದು ಪೋಷಕಾಂಶ ದಟ್ಟ ಆಹಾರವಾಗಿದೆ.

    MORE
    GALLERIES

  • 78

    Wheatgrass Benefits: ವೀಟ್ ಗ್ರಾಸ್​ನಿಂದ ಭಾರೀ ಆರೋಗ್ಯ ಲಾಭ, ಥೈರಾಯ್ಡ್​ ಸಮಸ್ಯೆಯೂ ಮಾಯ!

    ಭರಿತ ವೀಟ್ ಗ್ರಾಸ್ ಕ್ಯಾಲೊರಿ ಸೇವನೆ ಕಡಿಮೆ ಮಾಡುವಂತೆ ಉತ್ತೇಜಿಸುತ್ತದೆ. ಹೆಚ್ಚುವರಿ ಕೊಬ್ಬು ಸಂಗ್ರಹವಾಗುವುದನ್ನು ತಡೆಯುತ್ತದೆ. ನಿಯಮಿತವಾಗಿ ಗೋಧಿ ಹುಲ್ಲಿನ ರಸ ಸೇವನೆ ಥೈರಾಯ್ಡ್ ಸಮಸ್ಯೆ ನಿವಾರಿಸುತ್ತದೆ.

    MORE
    GALLERIES

  • 88

    Wheatgrass Benefits: ವೀಟ್ ಗ್ರಾಸ್​ನಿಂದ ಭಾರೀ ಆರೋಗ್ಯ ಲಾಭ, ಥೈರಾಯ್ಡ್​ ಸಮಸ್ಯೆಯೂ ಮಾಯ!

    ವೀಟ್ ಗ್ರಾಸ್ ಶಕ್ತಿ ಹೆಚ್ಚಿಸುತ್ತದೆ. ಚೈತನ್ಯ ಮತ್ತು ಉಲ್ಲಾಸ ನೀಡುತ್ತದೆ. ಮಾನಸಿಕ ಕಾರ್ಯ ಸುಧಾರಿಸುತ್ತದೆ. ಆತಂಕ ನಿವಾರಿಸುತ್ತದೆ. ಅಲ್ಝೈಮರ್ನ ಕಾಯಿಲೆ ನಿವಾರಿಸಲು ಸಹಕಾರಿ. ಇದು ಮೆಮೊರಿ ನಷ್ಟ ತಡೆಯುತ್ತದೆ.

    MORE
    GALLERIES