ಟೊಮೆಟೊ ಫೇಸ್ ಪ್ಯಾಕ್ ತಪ್ಪದೇ ಹಚ್ಚಿರಿ. ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಸಿ ಸಮೃದ್ಧ ಟೊಮೆಟೊಗಳು, ಅಸಮ ಚರ್ಮದ ಟೋನ್ ಸಮಸ್ಯೆ ನಿವಾರಿಸುತ್ತವೆ. ಟೊಮೆಟೊದಲ್ಲಿರುವ ಲೈಕೋಪೀನ್, ಯುವಿ ಕಿರಣಗಳಿಂದ ರಕ್ಷಿಸುತ್ತದೆ. ಟೊಮೆಟೊವನ್ನು ಮುಖದ ಮೇಲೆ ಹಚ್ಚಿರಿ. ಇದು ಸನ್ ಬರ್ನ್ ಕಡಿಮೆ ಮಾಡುತ್ತದೆ. ಟೊಮೆಟೊ ಸಿಪ್ಪೆ ತೆಗೆದು ಮ್ಯಾಶ್ ಮಾಡಿ, ತಿರುಳನ್ನು ಜೇನುತುಪ್ಪದೊಂದಿಗೆ ಬೆರೆಸಿ ಮುಖಕ್ಕೆ ಹಚ್ಚಿ. ಸ್ವಲ್ಪ ಹೊತ್ತಿನ ನಂತರ ಮಸಾಜ್ ಮಾಡಿ, ತೊಳೆಯಿರಿ.
ಪಪ್ಪಾಯಿ, ಅರಿಶಿನ ಮತ್ತು ಜೇನುತುಪ್ಪ ಪ್ಯಾಕ್. ಎಲ್ಲಾ ಪದಾರ್ಥಗಳನ್ನು ಬಟ್ಟಲಿನಲ್ಲಿ ಹಾಕಿ, ಮಿಕ್ಸ್ ಮಾಡಿ. ಈ ಪೇಸ್ಟ್ ನ್ನು ಚರ್ಮಕ್ಕೆ ಅನ್ವಯಿಸಿ. ಸ್ವಲ್ಪ ಸಮಯ ಬಿಡಿ, ಮಸಾಜ್ ಮಾಡಿ. ನಂತರ ಮುಖ ತೊಳೆಯಿರಿ. ಮೊಸರು ಮತ್ತು ಕಿತ್ತಳೆ ಸಿಪ್ಪೆ ಪ್ಯಾಕ್. ಕಿತ್ತಳೆ ಸಿಪ್ಪೆ ಒಣಗಿಸಿ ಮತ್ತು ಪುಡಿ ಮಾಡಿ, ಚಮಚ ಮೊಸರು ಹಾಕಿ ಮಿಕ್ಸ್ ಮಾಡಿ, ಅನ್ವಯಿಸಿ. ನಂತರ ತೊಳೆಯಿರಿ.