Immunity Booster Things: ಬೇಸಿಗೆಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಹೀಗಿರಲಿ ನಿಮ್ಮ ಆಹಾರ ಪದ್ಧತಿ!

ಪ್ರತಿರಕ್ಷಣಾ ವ್ಯವಸ್ಥೆಯು ಉತ್ತಮವಾಗಲು ಆರೋಗ್ಯಕರ ಪದಾರ್ಥಗಳ ಸೇವನೆ ಮುಖ್ಯ. ದೇಹವನ್ನು ಕಾಯಿಲೆಗಳ ಹಿಡಿತದಿಂದ ರಕ್ಷಿಸಲು ಪ್ರತಿರಕ್ಷಣಾ ವ್ಯವಸ್ಥೆಯನ್ನು ಉತ್ತಮ ಸ್ಥಿತಿಯಲ್ಲಿ ಇರಿಸುವುದು ತುಂಬಾ ಮುಖ್ಯ. ಆಹಾರ ಮತ್ತು ಜೀವನಶೈಲಿಯು ಉತ್ತಮವಾಗಿರಲಿ. ಇದು ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಿಷ್ಠಗೊಳಿಸುತ್ತದೆ.

First published:

  • 18

    Immunity Booster Things: ಬೇಸಿಗೆಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಹೀಗಿರಲಿ ನಿಮ್ಮ ಆಹಾರ ಪದ್ಧತಿ!

    ಇತ್ತೀಚಿನ ದಿನಗಳಲ್ಲಿ ವೈರಲ್ ಸೋಂಕು, ಕಫ, ಗಂಟಲು ನೋವಿನ ಸಮಸ್ಯೆ ಹೆಚ್ಚಿದೆ. ಹಲವು ವೈರಸ್ ಗಳಿಗೆ ಮನುಷ್ಯ ತುತ್ತಾಗುತ್ತಿದ್ದು, ಆರೋಗ್ಯಕರ ಜೀವನಕ್ಕೆ ಕೊಳ್ಳಿ ಇಟ್ಟಂತಾಗಿದೆ. ಒಂದು ಕಾಯಿಲೆ ತಪ್ಪಿದ್ರೆ ಮತ್ತೊಂದು. ಇನ್ನು ಜ್ವರ, ಕೆಮ್ಮು, ಶೀತ ಸಮಸ್ಯೆ ತುಂಬಾ ಕಾಡುತ್ತಿದೆ.

    MORE
    GALLERIES

  • 28

    Immunity Booster Things: ಬೇಸಿಗೆಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಹೀಗಿರಲಿ ನಿಮ್ಮ ಆಹಾರ ಪದ್ಧತಿ!

    ಈ ರೀತಿಯ ವೈರಸ್ ಮತ್ತು ವೈರಲ್ ಸೋಂಕು ತಗುಲದಂತೆ ದೇಹವನ್ನು ರಕ್ಷಿಸಲು ಬಲವಾದ ರೋಗ ನಿರೋಧಕ ಶಕ್ತಿ ಅವಶ್ಯಕತೆಯಿದೆ. ಬಲಿಷ್ಟ ರೋಗ ನಿರೋಧಕ ಶಕ್ತಿಯು ದೇಹವನ್ನು ರಕ್ಷಿಸುತ್ತದೆ. ಇದು ಪ್ರತಿರಕ್ಷಣಾ ವ್ಯವಸ್ಥೆಯು ನಿಮ್ಮ ದೇಹವನ್ನು ಸೋಂಕು ಮತ್ತು ರೋಗಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ.

    MORE
    GALLERIES

  • 38

    Immunity Booster Things: ಬೇಸಿಗೆಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಹೀಗಿರಲಿ ನಿಮ್ಮ ಆಹಾರ ಪದ್ಧತಿ!

    ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯು ಉತ್ತಮವಾಗಲು ಆರೋಗ್ಯಕರ ಪದಾರ್ಥಗಳ ಸೇವನೆ ಮುಖ್ಯ. ದೇಹವನ್ನು ಕಾಯಿಲೆಗಳ ಹಿಡಿತದಿಂದ ರಕ್ಷಿಸಲು ಪ್ರತಿರಕ್ಷಣಾ ವ್ಯವಸ್ಥೆಯನ್ನು ಉತ್ತಮ ಸ್ಥಿತಿಯಲ್ಲಿ ಇರಿಸುವುದು ತುಂಬಾ ಮುಖ್ಯ. ಆಹಾರ ಮತ್ತು ಜೀವನಶೈಲಿಯು ಉತ್ತಮವಾಗಿರಲಿ. ಇದು ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಿಷ್ಠಗೊಳಿಸುತ್ತದೆ.

    MORE
    GALLERIES

  • 48

    Immunity Booster Things: ಬೇಸಿಗೆಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಹೀಗಿರಲಿ ನಿಮ್ಮ ಆಹಾರ ಪದ್ಧತಿ!

    ಆರೋಗ್ಯಕರ ಆಹಾರ ಸೇವಿಸುವುದು, ನಿಯಮಿತವಾಗಿ ವ್ಯಾಯಾಮ ಮಾಡುವುದು, ಸರಿಯಾದ ಮತ್ತು ಆಳವಾದ ನಿದ್ರೆ ಮಾಡುವುದು, ಧೂಮಪಾನ ಮಾಡದಿರುವುದು, ಆರೋಗ್ಯಕರ ದೇಹ ಕಾಪಾಡಿಕೊಳ್ಳುವುದು ಮತ್ತು ಆಲ್ಕೋಹಾಲ್ ಸೇವನೆ ತಡೆಯುವುದು, ನೈಸರ್ಗಿಕವಾಗಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತವೆ.

    MORE
    GALLERIES

  • 58

    Immunity Booster Things: ಬೇಸಿಗೆಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಹೀಗಿರಲಿ ನಿಮ್ಮ ಆಹಾರ ಪದ್ಧತಿ!

    ಕೆಲವು ಆಹಾರಗಳು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿ. ಇವುಗಳು ದೇಹಕ್ಕೆ ಮತ್ತು ಆರೋಗ್ಯಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತವೆ. ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಆಹಾರ ಮತ್ತು ಪಾನೀಯಗಳು ಹೀಗಿವೆ. ಸಿಟ್ರಸ್ ಆಹಾರ ಸೇವಿಸಿ. ನಿಂಬೆ, ಕಿತ್ತಳೆ, ದ್ರಾಕ್ಷಿ ಸೇರಿ ಇತರೆ ಉತ್ಕರ್ಷಣ ನಿರೋಧಕ ಮತ್ತು ವಿಟಮಿನ್ ಸಿ ಸಮೃದ್ಧ ಪದಾರ್ಥ ಸೇವಿಸಿ.

    MORE
    GALLERIES

  • 68

    Immunity Booster Things: ಬೇಸಿಗೆಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಹೀಗಿರಲಿ ನಿಮ್ಮ ಆಹಾರ ಪದ್ಧತಿ!

    ಬಾದಾಮಿ ಸೇವನೆಯು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಬಾದಾಮಿ ಅಗತ್ಯ ಪೋಷಕಾಂಶಗಳ ಶಕ್ತಿಕೇಂದ್ರ. ಬಾದಾಮಿಯು ಹೃದಯದ ಆರೋಗ್ಯ ಹೆಚ್ಚಿಸುತ್ತದೆ. ನಿಮ್ಮ ರೋಗ ನಿರೋಧಕ ವ್ಯವಸ್ಥೆಗೂ ಇದು ಉತ್ತಮ. ಬಾದಾಮಿಯು ವಿಟಮಿನ್ ಇ, ಸತು, ಮೆಗ್ನೀಸಿಯಮ್ ಮತ್ತು ಪ್ರೋಟೀನ್‌ ಅಗತ್ಯ ಪೋಷಕಾಂಶ ಹೊಂದಿದೆ. ಪ್ರತಿರಕ್ಷಣಾ ವ್ಯವಸ್ಥೆ ಕಾರ್ಯನಿರ್ವಹಣೆ ಹೆಚ್ಚಿಸುತ್ತದೆ.

    MORE
    GALLERIES

  • 78

    Immunity Booster Things: ಬೇಸಿಗೆಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಹೀಗಿರಲಿ ನಿಮ್ಮ ಆಹಾರ ಪದ್ಧತಿ!

    ಅರಿಶಿನವು ಅದ್ಭುತ ಮಸಾಲೆ. ಇದನ್ನು ನಿಮ್ಮ ಆಹಾರದಲ್ಲಿ ಹಲವು ವಿಧಗಳಲ್ಲಿ ಸೇರಿಸಬಹುದು. ಇದು ಅನೇಕ ಪ್ರಯೋಜನ ನೀಡುತ್ತದೆ. ಅರಿಶಿನದಲ್ಲಿರುವ ಕರ್ಕ್ಯುಮಿನ್ ಅಂಶವು ಪ್ರತಿರಕ್ಷಣಾ ಕಾರ್ಯ ಬೆಂಬಲಿಸುತ್ತದೆ. ಉರಿಯೂತದ ಗುಣಲಕ್ಷಣಗಳು ಆರೋಗ್ಯ ಸುಧಾರಿಸುತ್ತವೆ. ಅರಿಶಿನ ಹಾಲು ಅಥವಾ ಚಹಾ ಸೇವಿಸಿ.

    MORE
    GALLERIES

  • 88

    Immunity Booster Things: ಬೇಸಿಗೆಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಹೀಗಿರಲಿ ನಿಮ್ಮ ಆಹಾರ ಪದ್ಧತಿ!

    ಹಸಿರು ಚಹಾ ಮತ್ತು ಮಜ್ಜಿಗೆ. ಗ್ರೀನ್ ಟೀ ಕುಡಿಯುವುದು ತೂಕ ಇಳಿಕೆಗೆ ಸಹಕಾರಿ. ಹಸಿರು ಚಹಾ ಉತ್ತಮ ಪ್ರತಿರಕ್ಷಣಾ ವ್ಯವಸ್ಥೆಗೆ ಸಹಕಾರಿ. ಹಸಿರು ಚಹಾವು ಎಪಿಗಲ್ಲೊಕಾಟೆಚಿನ್ ಗ್ಯಾಲೇಟ್ ಹೊಂದಿದೆ. ಮಜ್ಜಿಗೆ ಕ್ಯಾಲ್ಸಿಯಂ ಭರಿತ ಪಾನೀಯ. ಮಜ್ಜಿಗೆಯಲ್ಲಿರುವ ಲ್ಯಾಕ್ಟಿಕ್ ಆಮ್ಲವು ಪ್ರತಿರಕ್ಷಣಾ ವ್ಯವಸ್ಥೆ ಹೆಚ್ಚಿಸುತ್ತದೆ. ಕಲ್ಲು ಉಪ್ಪು, ಮೆಣಸು, ಪುದೀನ ಎಲೆ ಮಸಾಲೆಗಳು ಆರೋಗ್ಯ ವರ್ಧಕವಾಗಿವೆ.

    MORE
    GALLERIES