Summer Health Tips: ಬಿರು ಬಿಸಿಲಿನಲ್ಲಿ ತಣ್ಣೀರಿನ ಸ್ನಾನ ಬೆಸ್ಟ್, ಜೊತೆಗೆ ಫಾಲೋ ಮಾಡಿ ಈ ಟಿಪ್ಸ್

ಬೇಸಿಗೆಯ ದಿನಗಳಲ್ಲಿ ತ್ವಚೆಯ ಆರೈಕೆ ಕಷ್ಟವಾಗುತ್ತದೆ. ಬಿಸಿಲಿನ ಹೊಡೆತ, ತಾಪಮಾನದಿಂದಾಗಿ ತ್ವಚೆಯು ಸುಕ್ಕುಗಟ್ಟುವುದು, ಒಣ ತ್ವಚೆ ಸಮಸ್ಯೆ ಕಾಡುವುದು, ಡಿಹೈಡ್ರೇಷನ್ ಸಮಸ್ಯೆಯಿಂದ ಚರ್ಮ ಕಪ್ಪಾಗುತ್ತದೆ. ಬೆವರಿನ ಗುಳ್ಳೆಗಳ ಸಮಸ್ಯೆ ಕಾಡುತ್ತದೆ. ಇದನ್ನು ತೊಡೆದು ಹಾಕಲು ತಣ್ಣೀರಿನ ಸ್ನಾನ ಮಾಡುತ್ತೀರಿ. ಆದರೆ ಇದು ಒಳ್ಳೆಯದೋ? ಕೆಟ್ಟದ್ದೋ?

First published:

  • 18

    Summer Health Tips: ಬಿರು ಬಿಸಿಲಿನಲ್ಲಿ ತಣ್ಣೀರಿನ ಸ್ನಾನ ಬೆಸ್ಟ್, ಜೊತೆಗೆ ಫಾಲೋ ಮಾಡಿ ಈ ಟಿಪ್ಸ್

    ಬೇಸಿಗೆಯಲ್ಲಿ ತಣ್ಣೀರಿನಿಂದ ಮುಖ ತೊಳೆಯುವುದು, ಚರ್ಮದ ಸಮಸ್ಯೆ ನಿವಾರಣೆಗೆ ಸಹಾಯ ಮಾಡುತ್ತದೆ. ಹವಾಮಾನ ಬದಲಾವಣೆ ಮತ್ತು ಧೂಳು, ಬೆವರು ತ್ವಚೆಯ ಸಮಸ್ಯೆ ಹೆಚ್ಚಿಸುತ್ತದೆ. ಇದನ್ನು ನಿವಾರಿಸಲು ತಣ್ಣೀರು ಸ್ನಾನ ಮಾಡುವುದು, ತಣ್ಣೀರಿನಿಂದ ಮುಖ ತೊಳೆತಯುವುದು ಉತ್ತಮ. ಜೊತೆಗೆ ಕೆಲವು ಬೇರೆ ಪರಿಹಾರ ಫಾಲೋ ಮಾಡಿ.

    MORE
    GALLERIES

  • 28

    Summer Health Tips: ಬಿರು ಬಿಸಿಲಿನಲ್ಲಿ ತಣ್ಣೀರಿನ ಸ್ನಾನ ಬೆಸ್ಟ್, ಜೊತೆಗೆ ಫಾಲೋ ಮಾಡಿ ಈ ಟಿಪ್ಸ್

    ಬೇಸಿಗೆಯಲ್ಲಿ ಮುಖದ ಗುಲಾಬಿ ಹೊಳಪನ್ನು ಕಾಪಾಡಿಕೊಳ್ಳಲು, ಚರ್ಮದ ನೈಸರ್ಗಿಕ ಹೊಳಪು ಕಾಪಾಡಿಕೊಳ್ಳಲು ಉರಿ ಬಿಸಿಲಿನಿಂದ ತ್ವಚೆ ರಕ್ಷಿಸಿ. ಮಧ್ಯಾಹ್ನ 12 ರಿಂದ 4 ರವರೆಗೆ ಹೆಚ್ಚು ಹೊರಗೆ ತಿರುಗಬೇಡಿ. ಸನ್‌ಸ್ಕ್ರೀನ್ ಅನ್ನು ಅನ್ವಯಿಸಿ. ಇದು ಚರ್ಮದ ಟೋನ್ ಸರಿಪಡಿಸುತ್ತದೆ.

    MORE
    GALLERIES

  • 38

    Summer Health Tips: ಬಿರು ಬಿಸಿಲಿನಲ್ಲಿ ತಣ್ಣೀರಿನ ಸ್ನಾನ ಬೆಸ್ಟ್, ಜೊತೆಗೆ ಫಾಲೋ ಮಾಡಿ ಈ ಟಿಪ್ಸ್

    ಫೇಸ್ ಮಾಸ್ಕ್ ಬಳಸುವುದು ಸೂರ್ಯನ ಕಠಿಣ ಕಿರಣಗಳಿಂದ ಚರ್ಮಕ್ಕೆ ಆಗುವ ಹಾನಿ ತಡೆಯುತ್ತದೆ. ಚರ್ಮದಿಂದ ಹೆಚ್ಚುವರಿ ಎಣ್ಣೆ ಹೋಗಲಾಡಿಸುತ್ತದೆ. ಚರ್ಮದ ಸತ್ತ ಕೋಶಗಳನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ. ಇದಕ್ಕಾಗಿ ನೀವು ಟೋನರ್ ಸಹ ಬಳಸಿ.

    MORE
    GALLERIES

  • 48

    Summer Health Tips: ಬಿರು ಬಿಸಿಲಿನಲ್ಲಿ ತಣ್ಣೀರಿನ ಸ್ನಾನ ಬೆಸ್ಟ್, ಜೊತೆಗೆ ಫಾಲೋ ಮಾಡಿ ಈ ಟಿಪ್ಸ್

    ಬೇಸಿಗೆಯಲ್ಲಿ ಅತಿಯಾದ ಬೆವರುವಿಕೆ ಸಮಸ್ಯೆಯು ಚರ್ಮದ ರಂಧ್ರಗಳನ್ನು ಮುಚ್ಚಿ ಹಾಕುತ್ತದೆ. ಇದು ನಿಮ್ಮ ಚರ್ಮಕ್ಕೆ ಬಹಳಷ್ಟು ಹಾನಿ ಉಂಟು ಮಾಡುತ್ತದೆ. ತ್ವಚೆಯನ್ನು ಮಂದ ಮತ್ತು ನಿರ್ಜೀವವಾಗಿಸುತ್ತದೆ. ವಾರಕ್ಕೆ ಎರಡು ಬಾರಿ ಎಕ್ಸ್‌ಫೋಲಿಯೇಶನ್ ಮಾಡಿ. ಸತ್ತ ಚರ್ಮದ ಕೋಶ ಹೋಗಿ, ರಕ್ತ ಪರಿಚಲನೆ ಸುಧಾರಿಸುತ್ತದೆ.

    MORE
    GALLERIES

  • 58

    Summer Health Tips: ಬಿರು ಬಿಸಿಲಿನಲ್ಲಿ ತಣ್ಣೀರಿನ ಸ್ನಾನ ಬೆಸ್ಟ್, ಜೊತೆಗೆ ಫಾಲೋ ಮಾಡಿ ಈ ಟಿಪ್ಸ್

    ಹೆಚ್ಚೆಚ್ಚು ನೀರು ಕುಡಿಯಿರಿ. ಇದು ಬೇಸಿಗೆಯಲ್ಲಿ ನಿಮ್ಮ ದೇಹವು ಸಾಕಷ್ಟು ತೇವಾಂಶ ಪಡೆಯಲು ಸಹಾಯ ಮಾಡುತ್ತದೆ. ನಿರ್ಜಲೀಕರಣದ ಅಪಾಯ ತಡೆಯುತ್ತದೆ. ಪ್ರತಿದಿನ ಎಂಟು ಲೋಟ ನೀರು ಕುಡಿಯಿರಿ. ಇದು ಮುಖದ ಮೇಲೆ ಹೊಳಪನ್ನು ನೀಡುತ್ತದೆ. ದೇಹದಿಂದ ವಿಷವನ್ನು ಹೊರ ಹಾಕುತ್ತದೆ.

    MORE
    GALLERIES

  • 68

    Summer Health Tips: ಬಿರು ಬಿಸಿಲಿನಲ್ಲಿ ತಣ್ಣೀರಿನ ಸ್ನಾನ ಬೆಸ್ಟ್, ಜೊತೆಗೆ ಫಾಲೋ ಮಾಡಿ ಈ ಟಿಪ್ಸ್

    ನೀರು ಆಧಾರಿತ ಮಾಯಿಶ್ಚರೈಸರ್ ಬಳಸಿ. ಇದು ಚರ್ಮವನ್ನು ತೇವಗೊಳಿಸುತ್ತದೆ. ಚರ್ಮವು ತುಂಬಾ ಎಣ್ಣೆಯುಕ್ತ ಮತ್ತು ಜಿಗುಟಾಗುವುದನ್ನು ತಡೆಯಲು ನೀರು ಆಧಾರಿತ ಮಾಯಿಶ್ಚರೈಸರ್ ಬಳಸಿ. ಇದು ನಿಮ್ಮ ಮುಖವನ್ನು ಆರೋಗ್ಯವಾಗಿಸುತ್ತದೆ. ಉತ್ತಮ ಹೊಳಪು ನೀಡುತ್ತದೆ.

    MORE
    GALLERIES

  • 78

    Summer Health Tips: ಬಿರು ಬಿಸಿಲಿನಲ್ಲಿ ತಣ್ಣೀರಿನ ಸ್ನಾನ ಬೆಸ್ಟ್, ಜೊತೆಗೆ ಫಾಲೋ ಮಾಡಿ ಈ ಟಿಪ್ಸ್

    ಟೋನರ್ ಬಳಕೆ ಮಾಡಿ. ಇದು ಸೂರ್ಯನ ಬಲವಾದ ಕಿರಣಗಳು ಮತ್ತು ಗಾಳಿಯಲ್ಲಿನ ಆರ್ದ್ರತೆಯಿಂದ ತ್ವಚೆಯ ಹಾನಿ ತಡೆಯುತ್ತದೆ. ಚರ್ಮವು ತುಂಬಾ ಎಣ್ಣೆಯುಕ್ತವಾಗಿರುತ್ತದೆ. ಇದು ಚರ್ಮವನ್ನು ಪುನರ್ಯೌವ್ವನಗೊಳಿಸುತ್ತದೆ. ಹೆಚ್ಚುವರಿ ಎಣ್ಣೆಯನ್ನು ತೆಗೆದು ಹಾಕುತ್ತದೆ. ರೋಸ್ ವಾಟರ್ ನೈಸರ್ಗಿಕ ಟೋನರ್ ಆಗಿ ಕೆಲಸ ಮಾಡುತ್ತದೆ.

    MORE
    GALLERIES

  • 88

    Summer Health Tips: ಬಿರು ಬಿಸಿಲಿನಲ್ಲಿ ತಣ್ಣೀರಿನ ಸ್ನಾನ ಬೆಸ್ಟ್, ಜೊತೆಗೆ ಫಾಲೋ ಮಾಡಿ ಈ ಟಿಪ್ಸ್

    ತಣ್ಣೀರಿನಿಂದ ಸ್ನಾನ ಮಾಡಿ. ಇದು ಮುಖದ ಚರ್ಮಕ್ಕೆ ಅತ್ಯುತ್ತಮವಾಗಿದೆ. ಬಿಸಿ ನೀರಿನ ಸ್ನಾನವು ಚರ್ಮಕ್ಕೆ ಹಾನಿ ಮಾಡುತ್ತದೆ. ಬೇಸಿಗೆಯಲ್ಲಿ ಬಿಸಿ ನೀರಿನ ಸ್ನಾನದಿಂದ ತ್ವಚೆಯು ಇನ್ನಷ್ಟು ಒಣಗುತ್ತದೆ. ದೇಹದ ಉಷ್ಣತೆ ಕಡಿಮೆ ಮಾಡಲು ತಣ್ಣೀರು ಸ್ನಾನ ಮಾಡಿ. ಚರ್ಮವನ್ನು ನೈಸರ್ಗಿಕವಾಗಿ ತಣ್ಣಗಾಗಲು ಬಿಡಿ.

    MORE
    GALLERIES