Diabetes Problem: ಈ ಪಾನೀಯ ಕುಡಿದು ಬೇಸಿಗೆಯಲ್ಲಿ ಬ್ಲಡ್​ ಶುಗರ್ ಕಂಟ್ರೋಲ್ ಮಾಡಿ!

ಮಧುಮೇಹದ ಕಾಯಿಲೆ ಇಂದಿನ ದಿನಗಳಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ರಕ್ತದ ಸಕ್ಕರೆ ಪ್ರಮಾಣ ನಿಯಂತ್ರಿಸಲು ರೋಗಿಗಳು ಸಾಕಷ್ಟು ಪ್ರಯಾಸ ಪಡುತ್ತಾರೆ. ಇನ್ನು ಬೇಸಿಗೆಯ ದಿನಗಳಲ್ಲಿ ಹೆಚ್ಚಿನ ಸಮಸ್ಯೆ ಕಾಡುತ್ತದೆ. ರೋಗಿಯ ರಕ್ತದ ಸಕ್ಕರೆ ಪ್ರಮಾಣ ಹೆಚ್ಚುವುದು ಮತ್ತು ಅದನ್ನು ತಪ್ಪಿಸಲು ಕೆಲವು ಪಾನೀಯಗಳಿವೆ.

First published:

  • 18

    Diabetes Problem: ಈ ಪಾನೀಯ ಕುಡಿದು ಬೇಸಿಗೆಯಲ್ಲಿ ಬ್ಲಡ್​ ಶುಗರ್ ಕಂಟ್ರೋಲ್ ಮಾಡಿ!

    ಬೇಸಿಗೆಯ ಉರಿ ಬಿಸಿಲಿನಲ್ಲಿ ಜನರು ಸಾಕಷ್ಟು ಬಳಲಿ ಬೆಂಡಾಗುತ್ತಾರೆ. ಕಬ್ಬಿನ ಹಾಲು, ತಂಪು ಪಾನೀಯ, ಎಳನೀರು ಸೇವನೆ ಹೆಚ್ಚಿಸುತ್ತಾರೆ. ಆದರೆ ಅಂಗಡಿಯಲ್ಲಿ ಕೊಳ್ಳುವ ಪಾನೀಯಗಳು ಹೆಚ್ಚು ಸಕ್ಕರೆಯುಕ್ತವಾಗಿರುತ್ತವೆ. ಇವುಗಳು ಕೆಟ್ಟ ಪರಿಣಾಮ ಬೀರುತ್ತವೆ.

    MORE
    GALLERIES

  • 28

    Diabetes Problem: ಈ ಪಾನೀಯ ಕುಡಿದು ಬೇಸಿಗೆಯಲ್ಲಿ ಬ್ಲಡ್​ ಶುಗರ್ ಕಂಟ್ರೋಲ್ ಮಾಡಿ!

    ಬೇಸಿಗೆಯಲ್ಲಿ ಕಾಡುವ ಅತಿಯಾದ ಬಾಯಾರಿಕೆಯು ಹೆಚ್ಚು ನೀರು ಬೇಕೆನಿಸುವಂತೆ ಮಾಡುತ್ತದೆ. ಅತಿಯಾದ ಬಾಯಾರಿಕೆ, ಮೂತ್ರ ವಿಸರ್ಜನೆ, ಆಯಾಸ, ತೂಕ ನಷ್ಟ ಮತ್ತು ಮಂದ ದೃಷ್ಟಿ ಹೀಗೆ ಹಲವು ಸಮಸ್ಯೆಗಳು ಕಾಡುತ್ತವೆ.

    MORE
    GALLERIES

  • 38

    Diabetes Problem: ಈ ಪಾನೀಯ ಕುಡಿದು ಬೇಸಿಗೆಯಲ್ಲಿ ಬ್ಲಡ್​ ಶುಗರ್ ಕಂಟ್ರೋಲ್ ಮಾಡಿ!

    ರಕ್ತದ ಸಕ್ಕರೆಯನ್ನು ದೀರ್ಘಕಾಲದವರೆಗೆ ನಿಯಂತ್ರಿಸದೇ ಹೋದರೆ ಇದು ದೇಹದ ಅನೇಕ ಭಾಗಗಳಿಗೆ ಹಾನಿ ಉಂಟು ಮಾಡುವ ಅಪಾಯ ಹೆಚ್ಚು. ಈಗ ಬೇಸಿಗೆ ಕಾಲ ಪ್ರಾರಂಭವಾಗಿದೆ. ರಕ್ತದ ಸಕ್ಕರೆ ನಿಯಂತ್ರಣವೂ ಮುಖ್ಯ.

    MORE
    GALLERIES

  • 48

    Diabetes Problem: ಈ ಪಾನೀಯ ಕುಡಿದು ಬೇಸಿಗೆಯಲ್ಲಿ ಬ್ಲಡ್​ ಶುಗರ್ ಕಂಟ್ರೋಲ್ ಮಾಡಿ!

    ಮಧುಮೇಹ ನಿಯಂತ್ರಿಸುವ ಮಾರ್ಗಗಳು ಯಾವುವು? ರಕ್ತದ ಸಕ್ಕರೆ ನಿಯಂತ್ರಿಸಲು ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಮಟ್ಟದ ಪದಾರ್ಥ ಸೇವಿಸಬೇಕು. ಇವುಗಳು ರಕ್ತದ ಸಕ್ಕರೆ ಹೆಚ್ಚಿಸುವುದಿಲ್ಲ. ಬೇಸಿಗೆಯಲ್ಲಿ ಮಧುಮೇಹ ರೋಗಿಗಳು ಸಕ್ಕರೆ ಅಥವಾ ಕ್ಯಾಲೋರಿ ಹೊಂದಿರುವ ಪಾನೀಯ ಸೇವನೆ ತಪ್ಪಿಸಿ.

    MORE
    GALLERIES

  • 58

    Diabetes Problem: ಈ ಪಾನೀಯ ಕುಡಿದು ಬೇಸಿಗೆಯಲ್ಲಿ ಬ್ಲಡ್​ ಶುಗರ್ ಕಂಟ್ರೋಲ್ ಮಾಡಿ!

    ಬೇಸಿಗೆಯಲ್ಲಿ ಸಿಹಿ ಪಾನೀಯಗಳ ಸೇವನೆ ಹೆಚ್ಚು. ಇದು ನಿಮ್ಮ ರಕ್ತದ ಸಕ್ಕರೆಯನ್ನು ತ್ವರಿತವಾಗಿ ಹೆಚ್ಚಿಸುತ್ತದೆ. ಯಾವ ಬೇಸಿಗೆಯ ಪಾನೀಯಗಳು ರಕ್ತದ ಸಕ್ಕರೆ ನಿಯಂತ್ರಿಸುತ್ತವೆ ಮತ್ತು ದೇಹದ ಉಷ್ಣತೆ ಕಡಿಮೆ ಮಾಡುತ್ತವೆ ನೋಡೋಣ.

    MORE
    GALLERIES

  • 68

    Diabetes Problem: ಈ ಪಾನೀಯ ಕುಡಿದು ಬೇಸಿಗೆಯಲ್ಲಿ ಬ್ಲಡ್​ ಶುಗರ್ ಕಂಟ್ರೋಲ್ ಮಾಡಿ!

    ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸಲು ಹೆಚ್ಚು ನೀರು ಸೇವಿಸಿ. ರಕ್ತದ ಸಕ್ಕರೆ ನಿಯಂತ್ರಣದ ಕೊರತೆಯು ನಿರ್ಜಲೀಕರಣ ಸಮಸ್ಯೆ ಉಂಟು ಮಾಡುತ್ತದೆ. ಸಾಕಷ್ಟು ನೀರು ಕುಡಿದರೆ ಮೂತ್ರದ ಮೂಲಕ ಹೆಚ್ಚುವರಿ ಗ್ಲೂಕೋಸ್ ತೊಡೆದು ಹಾಕಲು ಮತ್ತು ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸಲು ಸಹಾಯ ಮಾಡುತ್ತದೆ.

    MORE
    GALLERIES

  • 78

    Diabetes Problem: ಈ ಪಾನೀಯ ಕುಡಿದು ಬೇಸಿಗೆಯಲ್ಲಿ ಬ್ಲಡ್​ ಶುಗರ್ ಕಂಟ್ರೋಲ್ ಮಾಡಿ!

    ನಿಂಬೆ ನೀರು ಮತ್ತು ತರಕಾರಿ ರಸ ಸೇವನೆಯು ಮಧುಮೇಹ ನಿಯಂತ್ರಿಸುತ್ತದೆ. ಬೇಸಿಗೆಯಲ್ಲಿ ಮಧುಮೇಹಿಗಳು ನಿಂಬೆ ನೀರಿಗೆ ಸಕ್ಕರೆ ಹಾಕದೇ ಸೇವಿಸಿ. ನಿಂಬೆ ಪಾನಕಕ್ಕೆ ಸ್ವಲ್ಪ ಕಪ್ಪು ಉಪ್ಪನ್ನು ಸೇರಿಸಿ ಕುಡಿಯಿರಿ. ಇನ್ನು ಹಣ್ಣಿನ ರಸದ ಬದಲು ತರಕಾರಿ ರಸ ಸೇವಿಸಿ. ಹಣ್ಣುಗಳು ನೈಸರ್ಗಿಕ ಸಕ್ಕರೆ ಹೊಂದಿವೆ. ಇದು ರಕ್ತದ ಸಕ್ಕರೆ ಹೆಚ್ಚಿಸುತ್ತದೆ.

    MORE
    GALLERIES

  • 88

    Diabetes Problem: ಈ ಪಾನೀಯ ಕುಡಿದು ಬೇಸಿಗೆಯಲ್ಲಿ ಬ್ಲಡ್​ ಶುಗರ್ ಕಂಟ್ರೋಲ್ ಮಾಡಿ!

    ಅಧಿಕ ರಕ್ತದ ಸಕ್ಕರೆ ಸಮಸ್ಯೆ ತಡೆಗೆ ಬೇಸಿಗೆಗೆ ತೆಂಗಿನ ನೀರು ಮತ್ತು ಮಜ್ಜಿಗೆ ಸೇವಿಸಿ. ಎಳನೀರು ಕಡಿಮೆ ಗ್ಲೈಸೆಮಿಕ್ ಸೂಚಿ, ಕಡಿಮೆ ನೈಸರ್ಗಿಕ ಸಕ್ಕರೆ ಹೊಂದಿದೆ. ಮಜ್ಜಿಗೆಯು ಕರುಳಿನ ಆರೋಗ್ಯ, ರಕ್ತದೊತ್ತಡ, ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್, ಕಡಿಮೆ ಕೊಬ್ಬು ಮತ್ತು ಕಡಿಮೆ ಕ್ಯಾಲೋರಿ ಹೊಂದಿದ್ದು ರೋಗಿಗಳಿಗೆ ಉತ್ತಮ ಪಾನೀಯ.

    MORE
    GALLERIES