Skin Tanning: ಸುಡುವ ಬಿಸಿಲಿಗೆ ಸ್ಕಿನ್ ಟ್ಯಾನ್ ಆಗುತ್ತಿದೆಯೇ? ಚರ್ಮದ ರಕ್ಷಣೆಗೆ ಇಲ್ಲಿದೆ ಸಲಹೆ

ಕೆಲವೊಮ್ಮೆ ಸನ್‌ಸ್ಕ್ರೀನ್ ಹಚ್ಚಿದ ನಂತರವೂ ತ್ವಚೆ ಟ್ಯಾನ್ ಆಗುತ್ತದೆ. ಇದಕ್ಕೆ ಕೆಲವು ಕಾರಣಗಳಿವೆ. ನೀವು ಸಾಮಾನ್ಯ ಸನ್‌ಸ್ಕ್ರೀನ್ ಆಯ್ಕೆ ಮಾಡುವುದು ಮತ್ತು ಅದನ್ನು ಮುಖಕ್ಕೆ ಹಚ್ಚುವುದರಲ್ಲಿ ಮಾಡುವ ತಪ್ಪುಗಳಿಂದ ಚರ್ಮ ಹಾಳಾಗಬಹುದು.

First published:

  • 18

    Skin Tanning: ಸುಡುವ ಬಿಸಿಲಿಗೆ ಸ್ಕಿನ್ ಟ್ಯಾನ್ ಆಗುತ್ತಿದೆಯೇ? ಚರ್ಮದ ರಕ್ಷಣೆಗೆ ಇಲ್ಲಿದೆ ಸಲಹೆ

    ಬೇಸಿಗೆ ಕಾಲದಲ್ಲಿ ಸುಡುವ ಸೂರ್ಯನ ಹಾನಿಕಾರಕ ಯುವಿ ಕಿರಣಗಳಿಂದ ರಕ್ಷಣೆ ಪಡೆಯುವುದು ಸುಲಭವಲ್ಲ. ಸ್ವಲ್ಪ ಬಿಸಿಲು ತಾಗಿದರೂ ತ್ವಚೆ ಟ್ಯಾನ್ ಆಗುತ್ತದೆ. ಸೂರ್ಯನ ಕಿರಣದಿಂದಾಗಿ ಚರ್ಮ ಸುಕ್ಕು ಮತ್ತು ಕಪ್ಪಾಗುತ್ತದೆ. ಹೀಗಾಗಿ ತುಂಬಾ ಜನರು ಸನ್‌ಸ್ಕ್ರೀನ್ ಅನ್ವಯಿಸುತ್ತಾರೆ.

    MORE
    GALLERIES

  • 28

    Skin Tanning: ಸುಡುವ ಬಿಸಿಲಿಗೆ ಸ್ಕಿನ್ ಟ್ಯಾನ್ ಆಗುತ್ತಿದೆಯೇ? ಚರ್ಮದ ರಕ್ಷಣೆಗೆ ಇಲ್ಲಿದೆ ಸಲಹೆ

    ಬೇಸಿಗೆಯಲ್ಲಿ ಸೂರ್ಯನ ಕಿರಣಗಳ ಸಂಪರ್ಕಕ್ಕೆ ಬರುವ ಮೊದಲು ಚರ್ಮದ ಮೇಲೆ ಸನ್‌ಸ್ಕ್ರೀನ್ ಹಚ್ಚಿ. ಇಲ್ಲದಿದ್ದರೆ ಟ್ಯಾನಿಂಗ್ ಆಗುತ್ತದೆ. ಆದರೆ ಕೆಲವೊಮ್ಮೆ ಸನ್‌ಸ್ಕ್ರೀನ್ ಅಪ್ಲೈ ಮಾಡಿದ ನಂತರವೂ ತ್ವಚೆ ಟ್ಯಾನ್ ಆಗುತ್ತದೆ. ಇದಕ್ಕೆ ಕೆಲವು ಕಾರಣಗಳಿವೆ. ನೀವು ಸಾಮಾನ್ಯ ಸನ್‌ಸ್ಕ್ರೀನ್ ಆಯ್ಕೆ ಮತ್ತು ಹಚ್ಚುವಲ್ಲಿ ಮಾಡುವ ತಪ್ಪುಗಳು ಅದಕ್ಕೆ ಕಾರಣವಾಗಿದೆ.

    MORE
    GALLERIES

  • 38

    Skin Tanning: ಸುಡುವ ಬಿಸಿಲಿಗೆ ಸ್ಕಿನ್ ಟ್ಯಾನ್ ಆಗುತ್ತಿದೆಯೇ? ಚರ್ಮದ ರಕ್ಷಣೆಗೆ ಇಲ್ಲಿದೆ ಸಲಹೆ

    ಸನ್‌ಸ್ಕ್ರೀನ್ ಹಚ್ಚದೇ ಇರುವುದು ಚರ್ಮಕ್ಕೆ ಸಾಕಷ್ಟು ಹಾನಿ ಉಂಟು ಮಾಡುತ್ತದೆ. ಸೂರ್ಯನ ಹಾನಿಕಾರಕ ಕಿರಣಗಳು ಚರ್ಮದ ಕೋಶಗಳಿಗೆ ಹಾನಿ ಮಾಡುತ್ತವೆ. ಇದು ಚರ್ಮಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆ ಹುಟ್ಟು ಹಾಕುತ್ತದೆ. ಹಾನಿಕಾರಕ ಕಿರಣಗಳಿಗೆ ನಿರಂತರವಾಗಿ ಒಡ್ಡಿಕೊಂಡರೆ ಚರ್ಮದ ಕ್ಯಾನ್ಸರ್ ಅಪಾಯ ಸಹ ಹೆಚ್ಚಾಗುತ್ತದೆ.

    MORE
    GALLERIES

  • 48

    Skin Tanning: ಸುಡುವ ಬಿಸಿಲಿಗೆ ಸ್ಕಿನ್ ಟ್ಯಾನ್ ಆಗುತ್ತಿದೆಯೇ? ಚರ್ಮದ ರಕ್ಷಣೆಗೆ ಇಲ್ಲಿದೆ ಸಲಹೆ

    ಇದನ್ನು ಚರ್ಮದ ಮೇಲೆ ಮಾತ್ರ ಹಚ್ಚಿದ್ರೆ ಸಾಕಾಗಲ್ಲ. ಸರಿಯಾದ ರೀತಿಯಲ್ಲಿ ಮತ್ತು ಸರಿಯಾದ ಸಮಯದಲ್ಲಿ ಹಚ್ಚಬೇಕು. ಅನೇಕ ಬಾರಿ ನಾವು ಅತ್ಯಂತ ದುಬಾರಿ ಸನ್‌ಸ್ಕ್ರೀನ್ ಬಳಸುತ್ತೇವೆ. ಆದರೆ ಅದನ್ನು ಹೇಗೆ ಹಚ್ಚಬೇಕು ಎಂಬುದೇ ಗೊತ್ತಿರುವುದಿಲ್ಲ. ಹೀಗಾಗಿ ಅದರ ಸರಿಯಾದ ಪ್ರಯೋಜನ ಸಿಗಲ್ಲ.

    MORE
    GALLERIES

  • 58

    Skin Tanning: ಸುಡುವ ಬಿಸಿಲಿಗೆ ಸ್ಕಿನ್ ಟ್ಯಾನ್ ಆಗುತ್ತಿದೆಯೇ? ಚರ್ಮದ ರಕ್ಷಣೆಗೆ ಇಲ್ಲಿದೆ ಸಲಹೆ

    ತುಂಬಾ ಕಡಿಮೆ ಸನ್‌ಸ್ಕ್ರೀನ್ ಹಚ್ಚುವುದು ನಿಮ್ಮ ತ್ವಚೆಯ ಟ್ಯಾನಿಂಗ್‌ಗೆ ಕಾರಣವಾಗುತ್ತದೆ. ಸಾಮಾನ್ಯವಾಗಿ 20 ರಿಂದ 25 ಪ್ರತಿಶತ ಸನ್‌ಸ್ಕ್ರೀನ್ ಬದಲು ಅದಕ್ಕಿಂತ ಹೆಚ್ಚು ಸನ್‌ಸ್ಕ್ರೀನ್ ಹಚ್ಚಿ.

    MORE
    GALLERIES

  • 68

    Skin Tanning: ಸುಡುವ ಬಿಸಿಲಿಗೆ ಸ್ಕಿನ್ ಟ್ಯಾನ್ ಆಗುತ್ತಿದೆಯೇ? ಚರ್ಮದ ರಕ್ಷಣೆಗೆ ಇಲ್ಲಿದೆ ಸಲಹೆ

    ಹೊರಗೆ ಹೋಗುವ 15 ನಿಮಿಷಗಳ ಮೊದಲು ಸನ್‌ಸ್ಕ್ರೀನ್ ಹಚ್ಚಿ. ಬಯಲು ಪ್ರದೇಶದಲ್ಲಿದ್ದರೆ ಮತ್ತು ಬೆವರುತ್ತಿದ್ದರೆ, ಪ್ರತಿ 2 ಗಂಟೆಗೊಮ್ಮೆ ಸನ್‌ಸ್ಕ್ರೀನ್ ಹಚ್ಚಿ. ಮೋಡ ಕವಿದ ವಾತಾವರಣದಲ್ಲಿ ಸನ್‌ಸ್ಕ್ರೀನ್ ಹಚ್ಚದೇ ಇರುವ ತಪ್ಪು ಮಾಡಬೇಡಿ. ಎಲ್ಲಾ ದಿನವೂ ಸನ್‌ಸ್ಕ್ರೀನ್ ಅನ್ವಯಿಸಿ. ಸೂರ್ಯನ ಹಾನಿಕಾರಕ ಕಿರಣಗಳ ಪರಿಣಾಮವು ವರ್ಷಗಳವರೆಗೆ ಇರುತ್ತದೆ.

    MORE
    GALLERIES

  • 78

    Skin Tanning: ಸುಡುವ ಬಿಸಿಲಿಗೆ ಸ್ಕಿನ್ ಟ್ಯಾನ್ ಆಗುತ್ತಿದೆಯೇ? ಚರ್ಮದ ರಕ್ಷಣೆಗೆ ಇಲ್ಲಿದೆ ಸಲಹೆ

    ಬ್ರಾಡ್-ಸ್ಪೆಕ್ಟ್ರಮ್ ಮತ್ತು SPF ನಿರ್ಲಕ್ಷಿಸದಿರಿ. ಹಾನಿಕಾರಕ ಕಿರಣಗಳು ಚರ್ಮದ ಕ್ಯಾನ್ಸರ್ ಮತ್ತು ಅಕಾಲಿಕ ವಯಸ್ಸಿಗೆ ಕಾರಣವಾಗಬಹುದು. ಹಾಗಾಗಿ ಬ್ರಾಡ್-ಸ್ಪೆಕ್ಟ್ರಮ್ ಎಂದು ಲೇಬಲ್ ಮಾಡಿರುವ ಕನಿಷ್ಠ SPF30 ಅಥವಾ ಅದಕ್ಕಿಂತ ಹೆಚ್ಚಿನ ಸನ್‌ಸ್ಕ್ರೀನ್ ಬಳಸಿ.

    MORE
    GALLERIES

  • 88

    Skin Tanning: ಸುಡುವ ಬಿಸಿಲಿಗೆ ಸ್ಕಿನ್ ಟ್ಯಾನ್ ಆಗುತ್ತಿದೆಯೇ? ಚರ್ಮದ ರಕ್ಷಣೆಗೆ ಇಲ್ಲಿದೆ ಸಲಹೆ

    ದಿನಕ್ಕೆ ಒಮ್ಮೆ ಮಾತ್ರ ಸನ್ ಸ್ಕ್ರೀನ್ ಬಳಸುವ ತಪ್ಪು ಮಾಡದಿರಿ. ನೀವು ನಿಮ್ಮ ದಿನದ ದೀರ್ಘ ಸಮಯವನ್ನು ಹೊರಗೆ ಕಳೆಯುತ್ತಿದ್ದರೆ ಪ್ರತಿ 2 ಗಂಟೆಗಳಿಗೊಮ್ಮೆ ಸನ್‌ಸ್ಕ್ರೀನ್ ಹಚ್ಚುತ್ತಿರಿ. ಇದು ಟ್ಯಾನ್ ತಡೆಯುತ್ತದೆ. ಜಲನಿರೋಧಕ ಸನ್‌ಸ್ಕ್ರೀನ್‌ಗಳು ಈಜಲು ಲಭ್ಯವಿವೆ. ಸನ್‌ಸ್ಕ್ರೀನ್ ಅನ್ನು ಚರ್ಮದ ಮೇಲೆ ಹಚ್ಚಿoರೆ ಚರ್ಮ ಉತ್ತಮಗೊಳ್ಳುತ್ತದೆ.

    MORE
    GALLERIES