ಟ್ಯಾಂಕ್ ಟಾಪ್: ಟ್ಯಾಂಕ್ ಟಾಪ್ ಒಂದು ಪರಿಪೂರ್ಣ ಬೇಸಿಗೆಯ ಉಡುಗೆಯಾಗಿದೆ. ಇದು ಧರಿಸಲು ಆರಾಮದಾಯಕವಾಗಿರುವುದಲ್ಲದೇ ಮಾಡ್ರನ್ ಲುಕ್ ನೀಡುತ್ತದೆ. ಕೇವಲ ಸ್ಲೀವ್ ಲೆಸ್ ಟಾಪ್ ಧರಿಸಿ ಆರಾಮದಾಯಕವಲ್ಲದಿದ್ದರೆ, ಜಾಕೆಟ್, ಬ್ಲೇಜರ್, ಲಾಂಗ್ ಶ್ರಗ್, ಶಾರ್ಟ್ ಶ್ರಗ್, ಡೆನಿಮ್ ಜಾಕೆಟ್, ಲೆದರ್ ಜಾಕೆಟ್ ಹೀಗೆ ಹಲವು ಮ್ಯಾಚ್ ಆಗುವಂತಹ ಉಡುಪುಗಳನ್ನು ಟ್ರೈ ಮಾಡಬಹುದು. ಬ್ಲೇಜರ್ಗಳು, ಡೆನಿಮ್ ಜಾಕೆಟ್ಗಳು ನಿಮಗೆ ಕ್ಲಾಸಿಕ್ ಲುಕ್ ನೀಡುತ್ತದೆ. ನಿಮ್ಮ ಉಡುಪಿಗೆ ಬಿಡಿಭಾಗಗಳು ಸಹ ಅಗತ್ಯವಿದೆ ಎಂಬುದನ್ನು ಮರೆಯಬೇಡಿ. ಉಡುಪಿಗೆ ಅನುಗುಣವಾಗಿ ಚಿನ್ನ ಅಥವಾ ಬೆಳ್ಳಿಯ ಆಭರಣಗಳನ್ನು ಧರಿಸಬಹುದು
ಕ್ರಾಪ್ ಟಿ-ಶರ್ಟ್: ಬೇಸಿಗೆಯ ಉಡುಪಿಗೆ ಕ್ರಾಪ್ ಟಿ-ಶರ್ಟ್ ಅತ್ಯುತ್ತಮ ಆಯ್ಕೆಯಾಗಿದೆ. ಇದರಲ್ಲಿ ಗ್ರಾಫಿಕ್ ಟೀ ಶರ್ಟ್, ಪ್ಲೇನ್ ಟೀ ಶರ್ಟ್ ನಂತಹ ನಿಮ್ಮ ನೆಚ್ಚಿನ ಟೀ ಶರ್ಟ್ಗಳನ್ನು ಧರಿಸಬಹುದು. ಕ್ರಾಪ್ ಟೀ ಶರ್ಟ್ ಅನ್ನು ವರ್ಣರಂಜಿತ ಪಲಾಝೋ ಪ್ಯಾಂಟ್, ಜೀನ್ಸ್ ಅಥವಾ ರಿಪ್ಡ್ ಪ್ಯಾಂಟ್ಗಳೊಂದಿಗೆ ಮ್ಯಾಚ್ ಮಾಡಬಹುದು. ಈ ರೀತಿಯ ಬಟ್ಟೆಗಳನ್ನು ಧರಿಸುವಾಗ ಶೂಗಳತ್ತ ಗಮನಹರಿಸಿ ಟ್ರೆಂಡಿಯಾಗಿ ಧರಿಸಿದರೆ ಇಡೀ ಲುಕ್ ನೋಡುಗರ ಕಣ್ಮನ ಸೆಳೆಯುತ್ತದೆ.
ಟ್ಯೂನಿಕ್ ಡ್ರೆಸ್: ಪ್ರತಿಯೊಬ್ಬರ ವಾರ್ಡ್ ರೋಬ್ ನಲ್ಲಿ ಟ್ಯೂನಿಕ್ ಡ್ರೆಸ್ ಇರಲೇಬೇಕು. ಈ ಬಟ್ಟೆಗಳು ನೋಡಲು ಸುಂದರವಾಗಿರುವುದರ ಜೊತೆಗೆ ಧರಿಸಲು ಆರಾಮದಾಯಕವಾಗಿರುತ್ತದೆ. ನೀವು ಕಾಟನ್ ಪ್ಯಾಂಟ್ಗಳನ್ನು ಟ್ಯೂನಿಕ್ ಡ್ರೆಸ್ನೊಂದಿಗೆ ಧರಿಸಬಹುದು ಅಥವಾ ನಿಮಗೆ ಇಷ್ಟವಾದ ಶೈಲಿಯ ಬಟ್ಟೆಯೊಂದಿಗೆಧರಿಸಬಹುದು. ಈ ಉಡುಪಿನೊಂದಿಗೆ ಬಿಳಿ ಸ್ನೀಕರ್ಸ್ ಧರಿಸುವುದನ್ನು ಮರೆಯಬೇಡಿ.
ಮಿನಿ ಸ್ಕರ್ಟ್ಗಳು: ಕೆಲವು ವರ್ಷಗಳ ನಂತರ ಮಿನಿ ಸ್ಕರ್ಟ್ಗಳು ಈ ವರ್ಷ ಬೇಸಿಗೆಯ ಫ್ಯಾಶನ್ ಫೇವರಿಟ್ ಆಗಿ ಮರುಕಳಿಸುತ್ತಿವೆ. ಈ ಬೇಸಿಗೆಯಲ್ಲಿ ಫ್ಯಾಷನ್ ಬ್ರ್ಯಾಂಡ್ಗಳು ನೀಡುವ ಮಿನಿ ಸ್ಕರ್ಟ್ಗಳ ಶೈಲಿಗಳು ರಚ್ಡ್, ಡೆನಿಮ್, ಪ್ಲೆಟೆಡ್, ಫ್ಲೇರ್ಡ್, ಅಸಮಪಾರ್ಶ್ವವನ್ನು ಒಳಗೊಂಡಿವೆ. ಈ ಮಿನಿ ಸ್ಕರ್ಟ್ಗಳನ್ನು ಡೇ ಟು ನೈಟ್ ವೇರ್ ಆಗಿಯೂ ಬಳಸಬಹುದು. ಪ್ರತಿಯೊಂದು ರೀತಿಯ ಮಿನಿ ಸ್ಕರ್ಟ್ ಶೈಲಿಯು ಟ್ರೆಂಡಿಂಗ್ ಆಗಿದೆ. ನಿಮ್ಮ ಆಯ್ಕೆಯ ಪ್ರಕಾರ ಮಿನಿ ಸ್ಕರ್ಟ್ಗಳೊಂದಿಗೆ ಬಾಕ್ಸ್ ಅಥವಾ ಫಿಟೆಡ್ ಟಾಪ್ಗಳನ್ನು ಧರಿಸುವ ಮೂಲಕ ನೀವು ಸ್ಟೈಲಿಶ್ ಆಗಿ ಕಾಣಿಸಬಹುದು.
ಆಫ್-ಬೀಟ್ ಬಟ್ಟೆಗಳನ್ನು ಖರೀದಿಸುವುದು ಮತ್ತು ಧರಿಸುವುದು ನಿಮ್ಮನ್ನು ಮೂಡ್ನಲ್ಲಿ ಇರಿಸುತ್ತದೆ, ಬೇಸಿಗೆಗೆ ಇದು ಉತ್ತಮ ಆಯ್ಕೆಯಾಗಿದೆ. ಬೇಸಿಗೆಯಲ್ಲಿ ಏನು ಧರಿಸಬೇಕೆಂದು ತಿಳಿಯುವುದು ಬಹಳ ಮುಖ್ಯ. ಮಹಿಳೆಯರಿಗಂತೂ ಈ ವೇಳೆ ಕೆಲವು ಆರಾಮದಾಯಕ ಬಟ್ಟೆ ಧರಿಸಲು ಇರಲೇಬೇಕು. ( ಹಕ್ಕು ನಿರಾಕರಣೆ : ಈ ಲೇಖನವು ಸಾರ್ವಜನಿಕ ನಂಬಿಕೆ ಮತ್ತು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ . ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)