ನಿಂಬೆ ಮತ್ತು ಪುದೀನಾ ಡಿಟಾಕ್ಸ್ ವಾಟರ್ ಮನೆಯಲ್ಲೇ ಮಾಡಿ. ಇದು ನಿಮ್ಮ ತ್ವಚೆಗೆ ಉತ್ತಮವಾಗಿದೆ. ಮೊದಲು ಪುದೀನಾ ಎಲೆಗಳನ್ನು ಸ್ವಚ್ಛಗೊಳಿಸಿ. ನಂತರ ಸಣ್ಣ ತುಂಡುಗಳಾಗಿ ಕತ್ತರಿಸಿ. ಲೋಟ ನೀರಿಗೆ ಹಾಕಿ. ಅದರಲ್ಲಿ ಒಂದು ನಿಂಬೆಹಣ್ಣನ್ನು ಹಿಂಡಿ. ಸಿಹಿಗಾಗಿ ಜೇನುತುಪ್ಪ ಬಳಸಬಹುದು. ನಿಯಮಿತವಾಗಿ ಸೇವಿಸಿದರೆ ದೇಹವು ನಿರ್ವಿಷಗೊಂಡು ಮುಖದ ಮೊಡವೆ ಸಮಸ್ಯೆ ನಿವಾರಣೆಯಾಗುತ್ತದೆ.
ಕಿತ್ತಳೆ ಮತ್ತು ಶುಂಠಿ ರಸವು ವಿಟಮಿನ್ ಸಿ, ಫೋಲೇಟ್ ಆಮ್ಲ ಮತ್ತು ಆಂಟಿ-ಆಕ್ಸಿಡೆಂಟ್ ಹೊಂದಿದೆ. ಬೇಸಿಗೆಯಲ್ಲಿ ಕಿತ್ತಳೆ ರಸವು ದೇಹಕ್ಕೆ ತಂಪು ನೀಡುತ್ತದೆ. ಚರ್ಮದ ಸೋಂಕಿನ ವಿರುದ್ಧ ಹೋರಾಡಲು ಸಹಕಾರಿ. ಹಣ್ಣು ತ್ವಚೆಯನ್ನು ಪೋಷಿಸುತ್ತದೆ. ಒಂದು ಕಿತ್ತಳೆ ತಿಂದರೆ ಒಂದೂವರೆ ಕಪ್ ನೀರು ದೊರೆಯುತ್ತದೆ. ಇದು ತ್ವಚೆ ಮತ್ತು ಕೂದಲು ಎರಡೂ ಹೈಡ್ರೇಟ್ ಆಗಿರಿಸುತ್ತದೆ.
ಸೌತೆಕಾಯಿ ರಾಸ್ಪ್ಬೆರಿ ಮತ್ತು ದ್ರಾಕ್ಷಿ ಡಿಟಾಕ್ಸ್ ನೀರು ಸೇವನೆ ತ್ವಚೆಗೆ ಉತ್ತಮ. ಇದರಲ್ಲಿ ಜೀವಸತ್ವಗಳು ಮತ್ತು ಖನಿಜಗಳಿವೆ. ಸೌತೆಕಾಯಿ ದೇಹದಲ್ಲಿ ನೀರಿನ ಕೊರತೆ ಪೂರೈಸುತ್ತದೆ. ಇದು ಚರ್ಮದ ಶುಷ್ಕತೆ ಕಡಿಮೆ ಮಾಡಲು, ಚರ್ಮವು ಹೊಳೆಯಲು ಸಹಕಾರಿ. ಒಂದು ಜಗ್ ನೀರಿಗೆ ಸೌತೆಕಾಯಿ ಹೋಳು ಹಾಕಿ, ರಾಸ್ಪ್ಬೆರಿ ಮತ್ತು ದ್ರಾಕ್ಷಿ ಸೇರಿಸಿ ಸೇವಿಸಿ. ಇದು ತ್ವಚೆಗೆ ಉತ್ತಮ.