Skin Care: ಬೇಸಿಗೆಯಲ್ಲಿ ತ್ವಚೆ ಮಂಕಾಗುತ್ತಾ? ಸೌಂದರ್ಯ ರಕ್ಷಣೆಗೆ ದಿನವೂ ಹೀಗೆ ಮಾಡಿ

ಬೇಸಿಗೆಯಲ್ಲಿ ಹಾಕಿದ ಮೇಕಪ್ ನಿಲ್ಲಲ್ಲ. ಮೊಡವೆ, ದದ್ದು, ರಾಶಸ್ ಸಮಸ್ಯೆ ಹೆಚ್ಚುತ್ತದೆ. ಹುಡುಗಿಯರ ಈ ಸೌಂದರ್ಯ ಸಮಸ್ಯೆಗೆ ಪರಿಹಾರವೇನು?

First published:

  • 18

    Skin Care: ಬೇಸಿಗೆಯಲ್ಲಿ ತ್ವಚೆ ಮಂಕಾಗುತ್ತಾ? ಸೌಂದರ್ಯ ರಕ್ಷಣೆಗೆ ದಿನವೂ ಹೀಗೆ ಮಾಡಿ

    ಹುಡುಗಿಯರು ತಮ್ಮ ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿ ತೆಗೆದುಕೊಳ್ಳುತ್ತಾರೆ. ಚರ್ಮದ ಆರೈಕೆ ಉತ್ಪನ್ನಗಳ ಬಳಕೆಯಿಂದ ಹಿಡಿದು, ಸಪ್ಲಿಮೆಂಟ್ಸ್ ಸೇವನೆಯವರೆಗೆ ಅಗತ್ಯ ಕ್ರಮ ತೆಗೆದುಕೊಳ್ತಾರೆ. ಬೇಸಿಗೆಯಲ್ಲಿ ಹಾಕಿದ ಮೇಕಪ್ ನಿಲ್ಲಲ್ಲ. ಮೊಡವೆ, ದದ್ದು, ರಾಶಸ್ ಸಮಸ್ಯೆ ಹೆಚ್ಚುತ್ತದೆ.

    MORE
    GALLERIES

  • 28

    Skin Care: ಬೇಸಿಗೆಯಲ್ಲಿ ತ್ವಚೆ ಮಂಕಾಗುತ್ತಾ? ಸೌಂದರ್ಯ ರಕ್ಷಣೆಗೆ ದಿನವೂ ಹೀಗೆ ಮಾಡಿ

    ಬೇಸಿಗೆಯಲ್ಲಿ ಸ್ಕಿನ್ ಸಮಸ್ಯೆ ತಪ್ಪಿಸಲು ಕೆಲವು ತ್ವಚೆಯ ಆರೋಗ್ಯಕರ ಅಂಶಗಳನ್ನು ಪಾಲಿಸಬೇಕಾಗುತ್ತದೆ. ಬೇಸಿಗೆಯಲ್ಲಿ ಹೆಚ್ಚಾಗಿ ಚರ್ಮದ ಸಮಸ್ಯೆಗಳು ಉಂಟಾಗುತ್ತವೆ. ತೇವಾಂಶದ ಕೊರತೆ ಕಾಡುತ್ತದೆ. ದೇಹ ಮತ್ತು ಚರ್ಮಕ್ಕೆ ಸಾಕಷ್ಟು ಜಲಸಂಚಯ ಸಿಗಲ್ಲ.

    MORE
    GALLERIES

  • 38

    Skin Care: ಬೇಸಿಗೆಯಲ್ಲಿ ತ್ವಚೆ ಮಂಕಾಗುತ್ತಾ? ಸೌಂದರ್ಯ ರಕ್ಷಣೆಗೆ ದಿನವೂ ಹೀಗೆ ಮಾಡಿ

    ಅತಿಯಾದ ಬೆವರುವಿಕೆ, ಚರ್ಮದ ಆರೈಕೆ ಮಾಡದೇ ಇರುವುದು, ಚರ್ಮದ ಸೋಂಕಿನ ಅಪಾಯ ಹೆಚ್ಚಿಸುತ್ತದೆ. ಜೊತೆಗೆ ಶಾಖದ ಪರಿಣಾಮ ತ್ವಚೆ ಬೇಗ ಟ್ಯಾನಿಂಗ್ ಸಮಸ್ಯೆಗೆ ತುತ್ತಾಗುತ್ತದೆ. ಬೇಸಿಗೆಯಲ್ಲಿ ನಿಮ್ಮ ತ್ವಚೆಯ ಆರೈಕೆಯ ರೂಟಿನ್ ಹೀಗಿರಲಿ. ಬೇಸಿಗೆ ತ್ವಚೆಯ ಆರೈಕೆ ಯೋಜನೆ ಬಗ್ಗೆ ಇಲ್ಲಿ ಹೇಳಲಾಗಿದೆ.

    MORE
    GALLERIES

  • 48

    Skin Care: ಬೇಸಿಗೆಯಲ್ಲಿ ತ್ವಚೆ ಮಂಕಾಗುತ್ತಾ? ಸೌಂದರ್ಯ ರಕ್ಷಣೆಗೆ ದಿನವೂ ಹೀಗೆ ಮಾಡಿ

    ಸರಿಯಾದ ಚರ್ಮದ ಆರೈಕೆ ದಿನಚರಿ ಯಾಕೆ ಬೇಕು ಎಂಬುದನ್ನು ಮೊದಲು ತಿಳಿಯಿರಿ. ಬೇಸಿಗೆಯಲ್ಲಿ ಅತಿಯಾದ ನಿರ್ಜಲೀಕರಣವು ಚರ್ಮದ ಸೋಂಕಿನ ಅಪಾಯ ಹೆಚ್ಚಿಸುತ್ತದೆ. ಟ್ಯಾನಿಂಗ್, ಮೊಡವೆ ಮತ್ತು ಹೆಚ್ಚಿದ ಪಿಗ್ಮೆಂಟೇಶನ್, ಫೋಟೊಸೆನ್ಸಿಟಿವಿಟಿ ಮತ್ತು ಸನ್ ಬರ್ನ್ ಸಮಸ್ಯೆ, ಬೆವರುವಿಕೆ, ಶುಷ್ಕತೆ ಮತ್ತು ತುರಿಕೆ ಹೆಚ್ಚುತ್ತದೆ. ಇದನ್ನು ತಪ್ಪಿಸಲು ಆರೈಕೆ ಮಾಡಿ.

    MORE
    GALLERIES

  • 58

    Skin Care: ಬೇಸಿಗೆಯಲ್ಲಿ ತ್ವಚೆ ಮಂಕಾಗುತ್ತಾ? ಸೌಂದರ್ಯ ರಕ್ಷಣೆಗೆ ದಿನವೂ ಹೀಗೆ ಮಾಡಿ

    ನಿಮ್ಮ ತ್ವಚೆಯ ಆರೈಕೆಗೆ ಮೊದಲು ನೀವು ಮಾಡಬೇಕಿರುವುದು ದಿನವೂ ಹೆಚ್ಚು ನೀರು ಕುಡಿಯುವುದು. ಅತಿಯಾದ ಬೆವರುವಿಕೆಯಿಂದ ಹೆಚ್ಚು ನೀರು ನಷ್ಟವಾಗುತ್ತದೆ. ನಿರ್ಜಲೀಕರಣ ಸಮಸ್ಯೆ ತಡೆಗೆ ದೇಹವನ್ನು ಸಮರ್ಪಕವಾಗಿ ಹೈಡ್ರೀಕರಿಸಿ. ತಾಜಾ ಹಣ್ಣಿನ ರಸ ಮತ್ತು ತೆಂಗಿನ ನೀರು ಸೇವಿಸಿ.

    MORE
    GALLERIES

  • 68

    Skin Care: ಬೇಸಿಗೆಯಲ್ಲಿ ತ್ವಚೆ ಮಂಕಾಗುತ್ತಾ? ಸೌಂದರ್ಯ ರಕ್ಷಣೆಗೆ ದಿನವೂ ಹೀಗೆ ಮಾಡಿ

    ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಆಹಾರ ಸೇವಿಸಿ. ಪಪ್ಪಾಯಿ, ಟೊಮೆಟೊ, ಮಾವಿನ ಹಣ್ಣು, ಉತ್ಕರ್ಷಣ ನಿರೋಧಕ ಭರಿತ ಆಹಾರ ಸೇವಿಸಿ. ಇದು ಸ್ವತಂತ್ರ ರಾಡಿಕಲ್ ಹಾನಿ ತಪ್ಪಿಸುತ್ತದೆ. ದಿನಕ್ಕೆ ಎರಡು ಬಾರಿ ಸ್ನಾನ ಮಾಡಿ. ಇದು ದೇಹದ ನೈರ್ಮಲ್ಯ ಕಾಪಾಡುತ್ತದೆ.

    MORE
    GALLERIES

  • 78

    Skin Care: ಬೇಸಿಗೆಯಲ್ಲಿ ತ್ವಚೆ ಮಂಕಾಗುತ್ತಾ? ಸೌಂದರ್ಯ ರಕ್ಷಣೆಗೆ ದಿನವೂ ಹೀಗೆ ಮಾಡಿ

    ಬೇಸಿಗೆಯಲ್ಲಿ ಸನ್‌ಸ್ಕ್ರೀನ್ ಅನ್ವಯಿಸುವುದು ಯಾವತ್ತೂ ತಪ್ಪಿಸಬೇಡಿ. SPF 30, 50 ಇರುವ ಸನ್‌ಸ್ಕ್ರೀನ್ ಸಹ ಬಳಸಬಹುದು. ಮನೆಯಲ್ಲಿ ಮುಲ್ತಾನಿ ಮಿಟ್ಟಿ, ಶ್ರೀಗಂಧದ ಪುಡಿ ಮತ್ತು ರೋಸ್ ವಾಟರ್ ಬಳಸಿ ಫೇಸ್ ಪ್ಯಾಕ್ ಮಾಡಿ ಅನ್ವಯಿಸಿ. ಇದು ತ್ವಚೆಗೆ ತಂಪಾಗಿಸುತ್ತದೆ. ತಾಜಾತನ ನೀಡುತ್ತದೆ.

    MORE
    GALLERIES

  • 88

    Skin Care: ಬೇಸಿಗೆಯಲ್ಲಿ ತ್ವಚೆ ಮಂಕಾಗುತ್ತಾ? ಸೌಂದರ್ಯ ರಕ್ಷಣೆಗೆ ದಿನವೂ ಹೀಗೆ ಮಾಡಿ

    ರಾತ್ರಿಯ ಆರೈಕೆಗೆ ಮುಖದ ಎಣ್ಣೆಯ ಬದಲಿಗೆ ಜೆಲ್ ಮಾಯಿಶ್ಚರೈಸರ್, ಅಲೋವೆರಾ ಬಳಸಿ. ಮಾಯಿಶ್ಚರೈಸ್ ಮಾಡಲು ಮರೆಯಬೇಡಿ. ಇದು ಚರ್ಮದ ಆರೈಕೆಯ ಅತ್ಯಗತ್ಯ ಹಂತ. ಎಫ್ಫೋಲಿಯೇಟಿಂಗ್ ಫೇಸ್ ವಾಶ್ ಬಳಸಿ. ಇದು ತ್ವಚೆಯನ್ನು ಸ್ವಚ್ಛಗೊಳಿಸುತ್ತದೆ.

    MORE
    GALLERIES