Skin Care: ಕಲ್ಲಂಗಡಿ ಹಣ್ಣಿನ ಫೇಸ್‌ ಮಾಸ್ಕ್ ಹಾಕೊಳ್ಳಿ, ಮುಖ ಹೊಳೆಯುವಂತೆ ಮಾಡಿ!

ಬೇಸಿಗೆಯಲ್ಲಿ ಹೇರಳವಾಗಿ ದೊರೆಯುವ ಕಲ್ಲಂಗಡಿಯು ದೇಹಕ್ಕೆ ಸಾಕಷ್ಟು ನೀರನ್ನು ಒದಗಿಸುತ್ತದೆ. ಆರೋಗ್ಯ ಸಂಬಂಧಿ ಸಮಸ್ಯೆ ಹೋಗಲಾಡಿಸಲು ಸಹಾಯ ಮಾಡುತ್ತದೆ. ಇಷ್ಟೇ ಅಲ್ಲ, ಕಲ್ಲಂಗಡಿ ಮುಖದ ಚರ್ಮಕ್ಕೂ ತುಂಬಾ ಪ್ರಯೋಜನ ನೀಡುತ್ತದೆ.

First published:

  • 18

    Skin Care: ಕಲ್ಲಂಗಡಿ ಹಣ್ಣಿನ ಫೇಸ್‌ ಮಾಸ್ಕ್ ಹಾಕೊಳ್ಳಿ, ಮುಖ ಹೊಳೆಯುವಂತೆ ಮಾಡಿ!

    ಬೇಸಿಗೆಯಲ್ಲಿ ಕಲ್ಲಂಗಡಿ ಸೇವನೆಯು ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನ ತಂದು ಕೊಡುತ್ತದೆ. ಹಾಗೆಯೇ ದೇಹದಲ್ಲಿ ನೀರಿನ ಕೊರತೆ ಕಡಿಮೆ ಮಾಡುತ್ತದೆ. ನಿರ್ಜಲೀಕರಣ ತಡೆದು, ದೇಹವು ಆರೋಗ್ಯಕರವಾಗಿರುವಂತೆ ಮಾಡುತ್ತದೆ. ನೀರು ಸಮೃದ್ಧವಾದ ಕಲ್ಲಂಗಡಿಯು ಹೈಡ್ರೇಟಿಂಗ್ ಹಣ್ಣು ಎಂದೇ ಖ್ಯಾತವಾಗಿದೆ.

    MORE
    GALLERIES

  • 28

    Skin Care: ಕಲ್ಲಂಗಡಿ ಹಣ್ಣಿನ ಫೇಸ್‌ ಮಾಸ್ಕ್ ಹಾಕೊಳ್ಳಿ, ಮುಖ ಹೊಳೆಯುವಂತೆ ಮಾಡಿ!

    ಬೇಸಿಗೆಯಲ್ಲಿ ಹೇರಳವಾಗಿ ದೊರೆಯುವ ಕಲ್ಲಂಗಡಿಯು ದೇಹಕ್ಕೆ ಸಾಕಷ್ಟು ಜಲಸಂಚಯನ ಒದಗಿಸುತ್ತದೆ. ಆರೋಗ್ಯ ಸಂಬಂಧಿ ಸಮಸ್ಯೆ ಹೋಗಲಾಡಿಸಲು ಸಹಾಯ ಮಾಡುತ್ತದೆ. ಕಲ್ಲಂಗಡಿಯು ಮುಖದ ಚರ್ಮಕ್ಕೂ ತುಂಬಾ ಪ್ರಯೋಜನ ನೀಡುತ್ತದೆ. ತ್ವಚೆಗೆ ಪೋಷಣೆ ನೀಡುತ್ತದೆ.

    MORE
    GALLERIES

  • 38

    Skin Care: ಕಲ್ಲಂಗಡಿ ಹಣ್ಣಿನ ಫೇಸ್‌ ಮಾಸ್ಕ್ ಹಾಕೊಳ್ಳಿ, ಮುಖ ಹೊಳೆಯುವಂತೆ ಮಾಡಿ!

    ಕಲ್ಲಂಗಡಿಯನ್ನು ಆಹಾರದಲ್ಲಿ ಹಾಗೂ ಸಲಾಡ್ ಆಗಿ, ಜ್ಯೂಸ್ ರೂಪದಲ್ಲಿ ಸೇವಿಸಬಹುದು. ಇದನ್ನು ಚರ್ಮಕ್ಕೆ ಮಾಸ್ಕ್ ರೂಪದಲ್ಲಿ ಬಳಸಬಹುದು. ಇದು ಹೊಳೆಯುವ ತ್ವಚೆ ನೀಡುತ್ತದೆ. ತ್ವಚೆಯನ್ನು ಸುಂದರವಾಗಿಸುತ್ತದೆ. ತ್ವಚೆಯ ಮೇಲೆ ಕಲ್ಲಂಗಡಿ ಬಳಸುವ ಸರಿಯಾದ ವಿಧಾನದ ಬಗ್ಗೆ ಇಲ್ಲಿ ತಿಳಿಯೋಣ.

    MORE
    GALLERIES

  • 48

    Skin Care: ಕಲ್ಲಂಗಡಿ ಹಣ್ಣಿನ ಫೇಸ್‌ ಮಾಸ್ಕ್ ಹಾಕೊಳ್ಳಿ, ಮುಖ ಹೊಳೆಯುವಂತೆ ಮಾಡಿ!

    ಚರ್ಮಕ್ಕೆ ಕಲ್ಲಂಗಡಿ ಹಲವು ಪ್ರಯೋಜನ ನೀಡುತ್ತದೆ. ಕಲ್ಲಂಗಡಿ ನೈಸರ್ಗಿಕ ಚರ್ಮದ ಟೋನರ್ ಆಗಿದೆ. ಇದು ಚರ್ಮವನ್ನು ತಾಜಾ ಆಗಿರಿಸುತ್ತದೆ. ಕಲ್ಲಂಗಡಿಯಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಸ್ವತಂತ್ರ ರಾಡಿಕಲ್‌ಗಳ ಪರಿಣಾಮ ಕಡಿಮೆ ಮಾಡುತ್ತದೆ. ವಯಸ್ಸಾಗುವಿಕೆ ಪ್ರಕ್ರಿಯೆ ನಿಧಾನಗೊಳಿಸುತ್ತದೆ.

    MORE
    GALLERIES

  • 58

    Skin Care: ಕಲ್ಲಂಗಡಿ ಹಣ್ಣಿನ ಫೇಸ್‌ ಮಾಸ್ಕ್ ಹಾಕೊಳ್ಳಿ, ಮುಖ ಹೊಳೆಯುವಂತೆ ಮಾಡಿ!

    ಚರ್ಮಕ್ಕೆ ಕಲ್ಲಂಗಡಿ ಹಚ್ಚಿದರೆ ತ್ವಚೆಯ ರಂಧ್ರದ ಗಾತ್ರ ಮತ್ತು ತೈಲ ಉತ್ಪಾದನೆ ಸಮಸ್ಯೆ ಕಡಿಮೆ ಆಗುತ್ತದೆ. ಕಲ್ಲಂಗಡಿಯು ಸಾಕಷ್ಟು ಪ್ರಮಾಣದ ನೀರನ್ನು ಹೊಂದಿದೆ. ಇದು ಒಣ ಚರ್ಮ ಸಮಸ್ಯೆ ಕಡಿಮೆ ಮಾಡುತ್ತದೆ. ಕಲ್ಲಂಗಡಿಯಲ್ಲಿರುವ ವಿಟಮಿನ್ ಸಿ ಸನ್ ಬರ್ನ್ ಸಮಸ್ಯೆ, ಚರ್ಮದ ಉರಿಯೂತ, ಕೆಂಪು ದದ್ದು ಕಡಿಮೆ ಮಾಡುತ್ತದೆ.

    MORE
    GALLERIES

  • 68

    Skin Care: ಕಲ್ಲಂಗಡಿ ಹಣ್ಣಿನ ಫೇಸ್‌ ಮಾಸ್ಕ್ ಹಾಕೊಳ್ಳಿ, ಮುಖ ಹೊಳೆಯುವಂತೆ ಮಾಡಿ!

    ಕಲ್ಲಂಗಡಿ ಬೀಜಗಳನ್ನು ಪುಡಿಮಾಡಿ ಸ್ಕ್ರಬ್ಬಿಂಗ್ ಗೆ ಬಳಸಬಹುದು. ಕಲ್ಲಂಗಡಿ ರಸ ಮತ್ತು ತೆಂಗಿನ ಎಣ್ಣೆಯು ಕ್ಲೆನ್ಸರ್ ಆಗಿ ಕೆಲಸ ಮಾಡುತ್ತದೆ. ಕಲ್ಲಂಗಡಿ ರಸ ಮತ್ತು ತೆಂಗಿನ ಎಣ್ಣೆ ಮಿಶ್ರಣ ಮಾಡಿ. ಚರ್ಮದ ಮೇಲೆ ಸಂಪೂರ್ಣವಾಗಿ ಹಚ್ಚಿರಿ. 20 ನಿಮಿಷ ಬಿಟ್ಟು ಸ್ವಚ್ಛಗೊಳಿಸಿ.

    MORE
    GALLERIES

  • 78

    Skin Care: ಕಲ್ಲಂಗಡಿ ಹಣ್ಣಿನ ಫೇಸ್‌ ಮಾಸ್ಕ್ ಹಾಕೊಳ್ಳಿ, ಮುಖ ಹೊಳೆಯುವಂತೆ ಮಾಡಿ!

    ಚರ್ಮವನ್ನು ಎಕ್ಸ್‌ಫೋಲಿಯೇಟ್ ಮಾಡಲು ಕಲ್ಲಂಗಡಿ ಸ್ಕ್ರಬ್ ಸಹಕಾರಿ. ಕಲ್ಲಂಗಡಿ, ಕಲ್ಲಂಗಡಿ ಬೀಜ ಪುಡಿ, ಅಕ್ಕಿ ಹಿಟ್ಟು ಸೇರಿಸಿ. ತ್ವಚೆಗೆ ಹಚ್ಚಿರಿ. ಮಸಾಜ್ ಮಾಡಿ, ನಂತರ ತೊಳೆಯಿರಿ. ಇದು ಸತ್ತ ಚರ್ಮದ ಕೋಶಗಳನ್ನು ತೆಗೆದು ಹಾಕುತ್ತದೆ. ಜೇನುತುಪ್ಪ, ಕಲ್ಲಂಗಡಿ, ತೆಂಗಿನ ಎಣ್ಣೆ ಮತ್ತು ನಿಂಬೆ ರಸ ಮಿಕ್ಸ್ ಮಾಡಿ, ಮಾಯಿಶ್ಚರೈಸಿಂಗ್ ಕ್ರೀಮ್ ತಯಾರಿಸಿ.

    MORE
    GALLERIES

  • 88

    Skin Care: ಕಲ್ಲಂಗಡಿ ಹಣ್ಣಿನ ಫೇಸ್‌ ಮಾಸ್ಕ್ ಹಾಕೊಳ್ಳಿ, ಮುಖ ಹೊಳೆಯುವಂತೆ ಮಾಡಿ!

    ಇದನ್ನು ಚರ್ಮಕ್ಕೆ ಹಚ್ಚಿರಿ. ಮಸಾಜ್ ಮಾಡಿ. ನಂತರ ತೊಳೆಯಿರಿ. ಇದು ಚರ್ಮದಲ್ಲಿ ರಕ್ತ ಪರಿಚಲನೆ, ನೈಸರ್ಗಿಕ ಹೊಳಪನ್ನು ನೀಡುತ್ತದೆ. ಕಡಲೆಬೇಳೆ ಹಿಟ್ಟು, ಹಾಲು ಮತ್ತು ಕಲ್ಲಂಗಡಿ ರಸ ಮಿಕ್ಸ್ ಮಾಡಿ, ತ್ವಚೆಗೆ ಹಚ್ಚಿರಿ. 15 ನಿಮಿಷ ಬಿಟ್ಟು ತೊಳೆಯಿರಿ. ಇದು ಚರ್ಮಕ್ಕೆ ಆರೈಕೆ ಮಾಡುತ್ತದೆ.

    MORE
    GALLERIES