ದೇಹದ ಆರೋಗ್ಯಕ್ಕೆ ಪೋಷಕಾಂಶಗಳ ಪ್ರಮಾಣ ಸಾಕಷ್ಟಿರುವುದು ತುಂಬಾ ಮುಖ್ಯ. ತಜ್ಞರು ಸಹ ಪೋಷಕಾಂಶ ಭರಿತ ಪದಾರ್ಥ ಸೇವನೆಗೆ ಸಲಹೆ ನೀಡುತ್ತಾರೆ. ಪೋಷಕಾಂಶಗಳ ಕೊರತೆಯು ನಿಮ್ಮನ್ನು ಮತ್ತೆ ಮತ್ತೆ ಅನಾರೋಗ್ಯಕ್ಕೆ ತುತ್ತಾಗುವಂತೆ ಮಾಡುತ್ತದೆ. ಇದು ಹಲವು ಆರೋಗ್ಯ ಸಮಸ್ಯೆಗಳು ಉಂಟು ಮಾಡುತ್ತದೆ. ಪೌಷ್ಟಿಕಾಂಶದ ಕೊರತೆ ನಿವಾರಿಸಲು ಆಹಾರದಲ್ಲಿ ಹಣ್ಣುಗಳ ಸೇವನೆ ಹೆಚ್ಚಿಸಿ.
ದ್ರಾಕ್ಷಿ ಸೇವನೆಯು ಆಯಾಸ ಹೋಗಲಾಡಿಸುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ದೃಷ್ಟಿ ಹೆಚ್ಚಿಸುತ್ತದೆ. ಮುಖಕ್ಕೆ, ಕಣ್ಣಿನ ಕಾಂತಿ ಹೆಚ್ಚಿಸುತ್ತದೆ. ಬಿಪಿ ನಿಯಂತ್ರಿಸುತ್ತದೆ. ದೇಹವನ್ನು ಆರೋಗ್ಯವಾಗಿಡುತ್ತದೆ. ಕ್ಯಾಲ್ಸಿಯಂ ಪ್ರಮಾಣವು ದ್ರಾಕ್ಷಿಯಲ್ಲಿದೆ. ಇದು ಮೂಳೆಗಳನ್ನು ಬಲಪಡಿಸುತ್ತದೆ. ಜೀರ್ಣಕ್ರಿಯೆಗೆ ಸುಲಭ. ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸುತ್ತದೆ.