Oral Health: ಬೇಸಿಗೆಯಲ್ಲಿ ಹಲ್ಲುಗಳ ಕಾಳಜಿ ಹೇಗೆ? ಚಿಂತೆ ಬಿಡಿ, ಟಿಪ್ಸ್ ಇಲ್ಲಿದೆ ಫಾಲೋ ಮಾಡಿ

ಬೇಸಿಗೆ ಆರಂಭವಾಗಿದೆ. ತಾಪಮಾನ ಹೆಚ್ಚುತ್ತಲೇ ಇದೆ. ಇದು ಉಷ್ಣ ವಾತಾವರಣಕ್ಕೆ ಕಾರಣವಾಗಿದೆ. ಈ ಋತುವಿನಲ್ಲಿ ದೇಹವನ್ನು ತೇವಾಂಶದಿಂದ ಇಡುವುದು ಬಹಳ ಮುಖ್ಯ. ಇದೇ ವೇಳೆ ಹಲ್ಲಿನ ಆರೋಗ್ಯದ ಬಗ್ಗೆಯೂ ಕಾಳಜಿವಹಿಸಬೇಕು.

First published:

  • 18

    Oral Health: ಬೇಸಿಗೆಯಲ್ಲಿ ಹಲ್ಲುಗಳ ಕಾಳಜಿ ಹೇಗೆ? ಚಿಂತೆ ಬಿಡಿ, ಟಿಪ್ಸ್ ಇಲ್ಲಿದೆ ಫಾಲೋ ಮಾಡಿ

    ಆಮ್ಲೀಯ ಪಾನೀಯಗಳ ಸೇವನೆಯು ದೇಹಕ್ಕೆ ಹಾನಿ ಮಾಡುತ್ತದೆ. ಜೊತೆಗೆ ಬಾಯಿಯ ಆರೋಗ್ಯ ಸಹ ಕೆಡಿಸುವ ಸಾಧ್ಯತೆ ಹೆಚ್ಚು. ದೇಹವನ್ನು ನಿರ್ಜಲೀಕರಣದಿಂದ ರಕ್ಷಿಸಲು ಮತ್ತು ಬಾಯಿಯ ಆರೋಗ್ಯ ಕಾಪಾಡಲು ತೆಂಗಿನ ನೀರು, ನಿಂಬೆ ನೀರು ಮತ್ತು ಲಸ್ಸಿ ಇತ್ಯಾದಿ ಸೇವಿಸಿ.

    MORE
    GALLERIES

  • 28

    Oral Health: ಬೇಸಿಗೆಯಲ್ಲಿ ಹಲ್ಲುಗಳ ಕಾಳಜಿ ಹೇಗೆ? ಚಿಂತೆ ಬಿಡಿ, ಟಿಪ್ಸ್ ಇಲ್ಲಿದೆ ಫಾಲೋ ಮಾಡಿ

    ತಾಜಾ ಹಾಗೂ ನೈಸರ್ಗಿಕ ಪಾನೀಯ ಸೇವನೆ ನಿಮ್ಮ ಆರೋಗ್ಯ ಚೆನ್ನಾಗಿರಿಸುತ್ತದೆ. ಇದು ಬಾಯಿಯ ಆರೋಗ್ಯ ಸುಧಾರಿಸುತ್ತದೆ. ಜೊತೆಗೆ ಬೇಸಿಗೆಯಲ್ಲಿ ಮೌಖಿಕ ನೈರ್ಮಲ್ಯ ಕಾಪಾಡುವುದು ತುಂಬಾ ಮುಖ್ಯ. ಅದಕ್ಕಾಗಿ ಕೆಲವು ಸಲಹೆ ನೋಡೋಣ.

    MORE
    GALLERIES

  • 38

    Oral Health: ಬೇಸಿಗೆಯಲ್ಲಿ ಹಲ್ಲುಗಳ ಕಾಳಜಿ ಹೇಗೆ? ಚಿಂತೆ ಬಿಡಿ, ಟಿಪ್ಸ್ ಇಲ್ಲಿದೆ ಫಾಲೋ ಮಾಡಿ

    ಮೌಖಿಕ ನೈರ್ಮಲ್ಯ ದಿನಚರಿ ರಚನೆ ಮಾಡಿ ಮತ್ತು ಫಾಲೋ ಮಾಡಿ. ಹಲ್ಲುಗಳನ್ನು ನಿಯಮಿತವಾಗಿ ಉಜ್ಜುವ ಅಭ್ಯಾಸ ಫಾಲೋ ಮಾಡಿ. ನೀವು ಅಥವಾ ನಿಮ್ಮ ಮಗು ನಿಯಮಿತ ಮೌಖಿಕ ನೈರ್ಮಲ್ಯ ಫಾಲೋ ಮಾಡುವಂತೆ ನೋಡಿಕೊಳ್ಳಿ.

    MORE
    GALLERIES

  • 48

    Oral Health: ಬೇಸಿಗೆಯಲ್ಲಿ ಹಲ್ಲುಗಳ ಕಾಳಜಿ ಹೇಗೆ? ಚಿಂತೆ ಬಿಡಿ, ಟಿಪ್ಸ್ ಇಲ್ಲಿದೆ ಫಾಲೋ ಮಾಡಿ

    ನಿಯಮಿತ ದಿನಚರಿಯಲ್ಲಿ ಹಲ್ಲುಜ್ಜುವುದು ಮುಖ್ಯವಾಗಿ ಮಾಡಿ. ಹಲ್ಲುಗಳ ಕಾಳಜಿ ವಹಿಸಿ. ಹಲ್ಲುಜ್ಜುವುದು ಮತ್ತು ಫ್ಲೋಸಿಂಗ್ ಮಾಡಿ. ಹೇಗೆ ಬ್ರಷ್ ಮತ್ತು ಫ್ಲೋಸ್ ಮಾಡುತ್ತೀರಿ ಮತ್ತು ಎಷ್ಟು ಬಾರಿ ಮಾಡುತ್ತೀರಿ ಎಂಬುದನ್ನು ತಿಳಿಯಿರಿ. ಹಲ್ಲುಜ್ಜುವುದು ಪ್ಲೇಕ್ನ ಶೇಖರಣೆ ಕಡಿಮೆ ಮಾಡುತ್ತದೆ. ಹಲ್ಲಿನ ಕೊಳೆಯುವಿಕೆ, ಕುಳಿ ಸಮಸ್ಯೆ ತಡೆಯುತ್ತದೆ.

    MORE
    GALLERIES

  • 58

    Oral Health: ಬೇಸಿಗೆಯಲ್ಲಿ ಹಲ್ಲುಗಳ ಕಾಳಜಿ ಹೇಗೆ? ಚಿಂತೆ ಬಿಡಿ, ಟಿಪ್ಸ್ ಇಲ್ಲಿದೆ ಫಾಲೋ ಮಾಡಿ

    ಮೌಖಿಕ ನೈರ್ಮಲ್ಯ ಕಾಪಾಡಿಕೊಳ್ಳಲು ತಪ್ಪದೇ ದಿನವೂ ಎರಡು ಹೊತ್ತು ಬ್ರಷ್ ಮಾಡಿ. ಪ್ರತಿ ಊಟದ ನಂತರ ಬ್ರಷ್ ಮಾಡಬೇಕು ಅಂತಾರೆ ತಜ್ಞರು. ಒಂದು ವೇಳೆ ಇದು ಸಾಧ್ಯವಾಗದಿದ್ದರೆ ಪ್ರತಿದಿನ ಬೆಳಿಗ್ಗೆ ಮತ್ತು ಪ್ರತಿ ರಾತ್ರಿ ಊಟದ ನಂತರ ಹಲ್ಲುಜ್ಜಬೇಕು. ಇದು ಹಲ್ಲುಗಳ ಕೆಟ್ಟ ವಾಸನೆಯನ್ನು ಹೋಗಲಾಡಿಸುತ್ತದೆ.

    MORE
    GALLERIES

  • 68

    Oral Health: ಬೇಸಿಗೆಯಲ್ಲಿ ಹಲ್ಲುಗಳ ಕಾಳಜಿ ಹೇಗೆ? ಚಿಂತೆ ಬಿಡಿ, ಟಿಪ್ಸ್ ಇಲ್ಲಿದೆ ಫಾಲೋ ಮಾಡಿ

    ಫ್ಲೋಸಿಂಗ್ ಮಾಡುವುದು ಮುಖ್ಯ. ಪ್ರತಿಯೊಬ್ಬ ವ್ಯಕ್ತಿಯು ರಾತ್ರಿ ಊಟದ ನಂತರ ಸರಿಯಾಗಿ ಫ್ಲೋಸಿಂಗ್ ಮಾಡಬೇಕು. ಟೂತ್ ಬ್ರಷ್ ಹಲ್ಲುಗಳ ನಡುವಿನ ಜಾಗವನ್ನು ಸರಿಯಾಗಿ ಕ್ಲೀನ್ ಮಾಡಲ್ಲ. ಹಾಗಾಗಿ ಫ್ಲೋಸ್ ಮಾಡುವುದು ಅವಶ್ಯಕ. ಪ್ಲೋಸಿಂಗ್ ಬ್ಯಾಕ್ಟೀರಿಯಾ ಬೆಳೆಯದಂತೆ ತಡೆಯುತ್ತದೆ.

    MORE
    GALLERIES

  • 78

    Oral Health: ಬೇಸಿಗೆಯಲ್ಲಿ ಹಲ್ಲುಗಳ ಕಾಳಜಿ ಹೇಗೆ? ಚಿಂತೆ ಬಿಡಿ, ಟಿಪ್ಸ್ ಇಲ್ಲಿದೆ ಫಾಲೋ ಮಾಡಿ

    ಫ್ಲೋಸಿಂಗ್ ಮಾಡಿದರೆ ಕುಳಿಗಳು ಮತ್ತು ಜಿಂಗೈವಿಟಿಸ್ ಮತ್ತು ಸಂಬಂಧಿತ ಕಾಯಿಲೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಲವು ವಿಧದ ಫ್ಲೋಸಿಂಗ್ ಗಳಿವೆ. ವೇವಿ ಡೆಂಟಲ್ ಫ್ಲೋಸ್, ಹೋಲ್ಡರ್ನೊಂದಿಗೆ ಫ್ಲೋಸ್, ವಾಟರ್ ಫ್ಲೋಸರ್. ಇದರ ಜೊತೆಗೆ ಮೌತ್‌ವಾಶ್ ಬಳಸಿ ಕ್ಲೀನ್ ಮಾಡಿ.

    MORE
    GALLERIES

  • 88

    Oral Health: ಬೇಸಿಗೆಯಲ್ಲಿ ಹಲ್ಲುಗಳ ಕಾಳಜಿ ಹೇಗೆ? ಚಿಂತೆ ಬಿಡಿ, ಟಿಪ್ಸ್ ಇಲ್ಲಿದೆ ಫಾಲೋ ಮಾಡಿ

    ಹಲ್ಲಿನ ಸ್ನೇಹಿ ಆಹಾರ ಸೇವನೆ ಮಾಡಿ. ಬೇಸಿಗೆಯಲ್ಲಿ ಸಕ್ಕರೆಯಿಂದ ಕೂಡಿದ ತಂಪು ಪಾನೀಯ ಸೇವನೆ ತಪ್ಪಿಸಿ. ಇದು ಹಲ್ಲುಗಳನ್ನು ಹಾನಿಗೊಳಿಸುತ್ತದೆ. ಆಗಾಗ್ಗೆ ದಂತ ತಪಾಸಣೆ ಮಾಡಿಸಿ. ಹಲ್ಲುಗಳ ಸಂಪೂರ್ಣ ಶುಚಿಗೊಳಿಸಿ. ಮೌಖಿಕ ಆರೋಗ್ಯ ಕಾಪಾಡಿ.

    MORE
    GALLERIES